SHARE

ಮೋಹಕ ತಾರೆ ರಮ್ಯಾ (Ramya) ನಿನ್ನೆ ಅಭಿಷೇಕ್ ಅಂಬರೀಶ್–ಅವಿವಾ ಆರತಕ್ಷತೆಗೆ ಕೇಸರಿ ಸೀರೆಯುಟ್ಟು (Kesari Saree) ಬಂದಿದ್ದರು. ಇಡೀ ವೇದಿಕೆ ಗೋಲ್ಡನ್ ಕಲರ್ ನಿಂದ ಕಂಗೊಳಿಸುತ್ತಿದ್ದರೆ ರಮ್ಯಾ ಮಾತ್ರ ಕೇಸರಿ ಸೀರೆಯುಟ್ಟು ನೋಡುಗರ ಕೇಂದ್ರಬಿಂದು ಆಗಿದ್ದರು. ಸಖತ್ ಹಾಟ್ ಹಾಟ್ ಆಗಿಯು ಕಾಣುತ್ತಿದ್ದರು.

ರಮ್ಯಾ ಆರತಕ್ಷತೆಗೆ ಬರುತ್ತಿದ್ದಂತೆಯೇ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದವು. ಬಂದಿದ್ದ ಅತಿಥಿಗಳು ಕೂಡ ರಮ್ಯಾರನ್ನು ಮಾತನಾಡಿಸಲು ಸಾಲುಗಟ್ಟಿದರು. ಒಂದು ರೀತಿಯಲ್ಲಿ ರಮ್ಯಾ ಎಲ್ಲರ ಗಮನ ಸೆಳೆಯುವಂತೆ ರೆಡಿಯಾಗಿ ಬಂದಿದ್ದರು. ಅಷ್ಟೇ ಲವಲವಿಕೆಯಿಂದ ಎಲ್ಲರನ್ನೂ ಮಾತನಾಡಿಸುತ್ತಿದ್ದರು. 

ಸಿನಿಮಾ ರಂಗದಿಂದ ಹಲವು ವರ್ಷಗಳ ಕಾಲ ರಮ್ಯಾ ದೂರವಿದ್ದರೂ ಸಿನಿಮಾ ರಂಗ ಅವರಿಂದ ದೂರವಿರಲಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳೇ ಸಾಕ್ಷಿಯಾಗಿದ್ದರು. ರಮ್ಯಾ ವಿಷಯ ಬಂದರೆ ಯಾವತ್ತಿಗೂ ಅವರು ನೆಚ್ಚಿನ ನಟಿಯ ಪರವಾಗಿಯೇ ಇರುತ್ತಿದ್ದರು. ಹಾಗಾಗಿ ಇವತ್ತಿಗೂ ಅಸಂಖ್ಯಾತ ಅಭಿಮಾನಿಗಳನ್ನು ರಮ್ಯಾ ಹೊಂದಿದ್ದಾರೆ.

ಮತ್ತೆ ರಮ್ಯಾ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಒಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರ ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ನಟಿಸಬೇಕಾದ ಸಿನಿಮಾ ಕೇವಲ ಮುಹೂರ್ತವಷ್ಟೇ ಆಗಿದೆ.

Leave a Reply

Your email address will not be published. Required fields are marked *