ಕಾಂಗ್ರೆಸ್ ಸರ್ಕಾರದಲ್ಲಿರುವ ಅಧಿಕಾರಿಗಳೇ ದಲ್ಲಾಳಿಗಳು: ಮಾಜಿ ಸಚಿವ ಮುನಿರತ್ನ

ಕಾಂಗ್ರೆಸ್ ಸರ್ಕಾರದಲ್ಲಿರುವ ಅಧಿಕಾರಿಗಳೇ ದಲ್ಲಾಳಿಗಳು: ಮಾಜಿ ಸಚಿವ ಮುನಿರತ್ನ

ಕಾಂಗ್ರೆಸ್​ ಸರ್ಕಾರದಲ್ಲಿರುವ ಅಧಿಕಾರಿಗಳೇ ದಲ್ಲಾಳಿಗಳು. ಸರ್ಕಾರ ಸೇವೆಗೆ ಬಂದವರು ದಲ್ಲಾಳಿ ಸೇವೆ ಮಾಡ್ತಿದ್ದಾರೆ” ಎಂದು ಮಾಜಿ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ”ಈ ಸರ್ಕಾರದಲ್ಲಿ ಅಧಿಕಾರಿಗಳೇ ದಲ್ಲಾಳಿಗಳು ಆಗಿದ್ದಾರೆ.

ಸರ್ಕಾರ ಸೇವೆಗೆ ಬಂದವರು ದಲ್ಲಾಳಿ ಸೇವೆ ಮಾಡ್ತಿದ್ದಾರೆ” ಎಂದು ಮಾಜಿ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ”ಕಾಂಗ್ರೆಸ್ ನವರಿಗೆ ತುಂಬಾ ಪ್ರೀತಿ ಇರೋದು ನನ್ನ ಮೇಲೆ ಹಾಗೂ ಅಶ್ವಥ್ ನಾರಾಯಣ್ ಮೇಲೆ. ಆದರೆ ಬಿಜೆಪಿ ಏನು‌ ನಿದ್ದೆ ಮಾಡ್ತಿಲ್ಲ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಾವು ಕೂಡ ಹೋರಾಟ ಮಾಡೋಕೆ ಸಿದ್ದರಿದ್ದೇವೆ. ಎಲ್ಲೋ ಹೆದರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ. ಬೆಂಗಳೂರಿಗೆ ಕೊಡುಗೆ ಕೊಡೋದು ಬಿಟ್ಟು, ಆರ್ ಆರ್ ನಗರದಲ್ಲಿ ಆಗಬಾರದೆಲ್ಲ ಆಗಿಬಿಟ್ಟಿದೆ. ಅಂದ್ರೆ, ಈ ಎಂಪಿ ಎಲ್ಲಿ ರೀ ಇದ್ರು? 110 ಕೋಟಿ ಅವ್ಯವಹಾರ ಅಂದ್ರಲ್ಲ. ಅವತ್ತು ಯಾಕೆ ಹೇಳಿಲ್ಲ?. ತಮ್ಮ ಲೋಕಾಯುಕ್ತಕ್ಕೆ ದೂರು ಕೊಡೋದು. ಅಣ್ಣ ಅಧಿಕಾರಿಗಳನ್ನು ಅಮಾನತ್ತು ಮಾಡೋದು” ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಎರಡು ದೋಣಿ ಪಾರ್ಟಿ: ಕಾಂಗ್ರೆಸ್ ನಲ್ಲಿನ ಸಿಎಂ ಅಧಿಕಾರ ಹಂಚಿಕೆಯ ಕಥೆ ಮೂಲಕ ಕೌಂಟರ್ ನೀಡಿದ ಮುನಿರತ್ನ ಅವರು, ”ಗ್ಯಾರಂಟಿ ಮಾಡಲು ಸುರ್ಜೇವಾಲ, ವೇಣುಗೋಪಾಲ್ ಬಂದು ಸಭೆ ಮಾಡ್ತಾರೆ. ಅಲ್ಲಿ ಗ್ಯಾರಂಟಿ ಪ್ರಿಂಟ್ ಮಾಡಿ, ಒಬ್ಬರು ಸಹಿ ಮಾಡ್ತಾರೆ. ಆದರೆ ಇನ್ನೊಬ್ಬರು ಸಹಿ ಮಾಡಬೇಕು ಅಂತಾರೆ. ಅಲ್ಲಿ ಶಿವಕುಮಾರ್ ಒಬ್ರು ಇದ್ದು ಸಹಿ ಹಾಕ್ತಾರೆ. ಆದರೆ ಸಿದ್ದರಾಮಯ್ಯ ಇರೋದಿಲ್ಲ. ಕೊನೆಗೆ ಸಿದ್ದರಾಮಯ್ಯ ರನ್ನು ಕರೆಸಿಕೊಂಡು ಅವರಿಂದ ಒಂದು ಸಹಿ ಮಾಡಿ ಅಂತಾರೆ. ಆದರೆ ಸಿದ್ದರಾಮಯ್ಯ ನಾನು ಸಹಿ ಮಾಡಲ್ಲ ಅಂತಾರೆ. ಆಮೇಲೆ ನನ್ನ ಜನರು ಓಡಿಸಿಕೊಂಡು ಬರ್ತಾರೆ ನಾನು ಹಾಕಲ್ಲ ಅಂತಾರೆ. ಆಮೇಲೆ ಅಲ್ಲಿ ಅವರು ಕಂಡಿಷನ್ ಹಾಕ್ತಾರೆ 5 ವರ್ಷ ನಾನೇ ಸಿಎಂ ಅಂತಾ. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್, ಸುರ್ಜೇವಾಲ ಒಪ್ಪುತ್ತಾರೆ. ಅಂತಿಮವಾಗಿ ಸಿದ್ದರಾಮಯ್ಯ ಗ್ಯಾರಂಟಿಗೆ ಸಹಿ ಹಾಕ್ತಾರೆ” ಎಂದು ವಿವರಿಸಿದರು.

”ಇದು ಮುಚ್ಚಿ ಹೋಗಿರುತ್ತದೆ, ಆಮೇಲೆ ಇದು ಬೂದಿ ಮುಚ್ಚಿದ ಕೆಂಡಂದಂತೆ ಇರುತ್ತದೆ. ಆ ಮೇಲೆ ಎಂ.ಬಿ. ಪಾಟೀಲ್ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಮಾತು ಶುರು ಮಾಡ್ತಾರೆ. ಆ ನಂತರ ಎಂ.ಬಿ. ಪಾಟೀಲ್ ಗೆ ಬಾಯಿ ಮುಚ್ಚಿಸಿಬಿಟ್ರು. ಪಾಪ ಎಂಬಿಪಿ ಹೆದರಿ ಭಯಗೊಂಡು ಸುಮ್ಮನೆ ಆಗಿ ಬಿಟ್ರು. ಆ ನಂತರ ಸತೀಶ್ ಜಾರಕಿಹೊಳಿ ಶುರು ಮಾಡಿದ್ರು. ಪಾಪ ಶಿವಕುಮಾರ್ ನಾನೇ ಸಿಎಂ ಅಂತಾ ಹೇಳಿಕೊಂಡಿದ್ದಾರೆ. ಅತ್ತ ಸಿದ್ದರಾಮಯ್ಯ ನಾನೇ ಸಿಎಂ ಆಗಿರ್ತೇನೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಪಾರ್ಟಿ ಎರಡು ದೋಣಿಯ ಪಾರ್ಟಿ. ಆದರೆ, ಬಿಜೆಪಿ ಒಂದು ದೋಣಿಯ ಪಾರ್ಟಿ” ಎಂದು ವಾಗ್ದಾಳಿ ನಡೆಸಿದರು.

ಸ್ವಯಂಕೃತ ಅಪರಾಧದಿಂದ ಸೋಲು: ”ಸ್ವಯಂಕೃತ ಅಪರಾಧಿಂದ ನಾವು ಸೋತಿದ್ದೇವೆ. ನಮ್ಮ ವರ್ಚಸ್ಸು ನಾವೇ ಕಳೆದುಕೊಂಡ್ವಿ. 40 ಪರ್ಸೆಂಟ್ ಎತ್ತಿದ ಕೂಡಲೇ ತನಿಖೆ ಮಾಡಿಸಬೇಕಿತ್ತು. ಅಲ್ಲೇ ಅದು ಮುಗಿದು ಹೋಗಿತ್ತು. ಬಿಟ್ ಕಾಯಿನ್ ಬಂತು, ಪ್ರಾರಂಭದಲ್ಲೇ ತನಿಖೆ ಮಾಡಿದಿದ್ರೆ ಅವತ್ತೆ ಮುಗಿದು ಹೋಗಿತ್ತು. ಪೇ ಸಿಎಂ ಮಾಡಿದ್ದನ್ನು ನಾವು ಎದುರಿಸಿಲ್ಲ. ಹೀಗೆ ಹಲವು ತಪ್ಪುಗಳಿಂದ ನಾವು ಸೋತಿದ್ದೇವೆ” ಎಂದರು.

”ಡಿಕೆ ಶಿವಕುಮಾರ್ ಬೆಂಗಳೂರು ಬಗ್ಗೆ ಸಭೆ ಮಾಡ್ತಾರೆ. ಆ ಸಭೆಯಲ್ಲಿ ಎಲ್ಲ ಕಾಮಗಾರಿ ನಿಲ್ಲಿಸಿ ಅಂತಾ ಹೇಳ್ತಾರೆ. ಕಾಮಗಾರಿ ನಿಲ್ಲಿಸೋಕೆ ಏನು ಕಾರಣ? ಲೋಕಸಭೆ ಚುನಾವಣೆ ಆದ ಮೇಲೆ ಬಿಬಿಎಂಪಿ ಚುನಾವಣೆ ನಡೆಸೋದು ಇವ್ರ ಪ್ಲಾನ್. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ” ಎಂದರು.

ಭೀಷ್ಮ ಇರುವ ತನಕ ಸೋಲಲ್ಲ: ”ಭೀಷ್ಮ ಇರೋ ವರೆಗೂ ಯುದ್ದದಲ್ಲಿ ಸೋಲಲ್ಲ. ಆ ಭೀಷ್ಮ ಯಡಿಯೂರಪ್ಪನವರು. ಇಲ್ಲೇ ಭೀಷ್ಮ ಇದ್ದಾರೆ. ಇಲ್ಲೇ ನಕಲು ಸಹಾದೇವ ಎಲ್ಲರೂ ಇದ್ದಾರೆ.‌ ಹೀಗಾಗಿ ಮುಂದಿನ ಚುನಾವಣೆ ಯುದ್ಧವನ್ನು ಒಟ್ಟಾಗಿ ಸೇರಿ ಗೆಲ್ಲೋಣ” ಎಂದರು.

Leave a Reply

Your email address will not be published. Required fields are marked *