ಚಾಮರಾಜನಗರ: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಬಿಜೆಪಿ (BJP) ಸರ್ಕಾರ ಎಷ್ಟು ಲೂಟಿ ಮಾಡಿದೆಯೋ ಅಷ್ಟನ್ನೂ ಜನರಿಗೆ ವಾಪಸ್ ಕೊಡ್ತೀವಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಪ್ರಕಾರ ಆಯ್ಕೆಯಾಗಿರುವ ಸರ್ಕಾರವಲ್ಲ. ಶಾಸಕರನ್ನು ಖರೀದಿಸಿ ಕದ್ದು ರಚನೆ ಮಾಡಿರುವ ಸರ್ಕಾರ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗನ ಬಳಿ 8 ಕೋಟಿ ಸಿಕ್ತು. ಪಿಎಸ್‌ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ಹೀಗೆ ಹಗರಣಗಳ ಪಟ್ಟಿಯೇ ಇದೆ. ಆದರೆ ಕರ್ನಾಟಕಕ್ಕೆ ಬರುತ್ತಿರುವ ಮೋದಿ ಈ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
40% ಕಮಿಷನ್ ಆರೋಪದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಮೋದಿಯವರೇ? ಯಾರನ್ನು ಜೈಲಿಗೆ ಕಳಿಸಿದ್ದೀರಿ, ಏನು ತನಿಖೆ ಮಾಡಿದ್ದೀರಿ ಎಂದು ಪ್ರಧಾನಿ ಮೋದಿ (Narendra Modi) ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಎಲ್ಲ ನಾಯಕರ ಹೆಸರನ್ನು ಹೇಳುತ್ತದೆ. ಆದರೆ ಬಿಜೆಪಿ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟು ಬೇರೆ ಹೆಸರು ಹೇಳುತ್ತಿಲ್ಲ. ಯಡಿಯೂರಪ್ಪ ಅಂತಹ ನಾಯಕರ ಹೆಸರನ್ನು ಹೇಳುತ್ತಿಲ್ಲ. ಮೋದಿಯವರೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಿ. ಜನರ ಬಗ್ಗೆ ಮಾತನಾಡಲು ಶುರು ಮಾಡಿ ಟಾಂಗ್ ಕೊಟ್ಟರು. g>
ಬಿಜೆಪಿಗೆ 40 ನೇ ನಂಬರ್ ಬಗ್ಗೆ ಬಹಳ ಪ್ರೀತಿ ಇದೆ. ಏನು ಮಾಡಿದರೂ 40% ಕಮಿಷನ್ ಪಡೀತಾರೆ. ಹಾಗಾಗಿ ನೀವು ಅವರಿಗೆ 40 ಸ್ಥಾನ ಮಾತ್ರ ನೀಡಿ. ಕಾಂಗ್ರೆಸ್‌ಗೆ 150 ಸ್ಥಾನ ನೀಡಿ. ನಮ್ಮ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಭ್ರಷ್ಟಾಚಾರಿ ಅಲ್ಲ. ಅವರ ಹತ್ತಿರ ನೂರಾರು ಕೋಟಿ ಇಲ್ಲ. ಅದರೆ ಬಿಜೆಪಿ ಅಭ್ಯರ್ಥಿ ಸಚಿವರಾಗಿದ್ದವರು, ಶ್ರೀಮಂತರಾಗಿದ್ದಾರೆ ಎಂದು ಆರೋಪಿಸಿದರು.