SC/ST ವರ್ಗದವರಿಗೆ ರಾಜ್ಯ ಸರ್ಕಾರ ನೀಡುವ ವಿವಿಧ ಯೋಜನೆಗಳ 2023/2024 ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು. ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳು ರೂಪಿಸಿದೆ. ಮತ್ತು ಇವುಗಳು ಈ ಕೆಳಗಿನಂತಿವೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ :

ಈ ಯೋಜನೆಯಲ್ಲಿ ಸಣ್ಣ ಮಟ್ಟದ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.

ಘಟಕ ವೆಚ್ಚ: ರೂ. 1.00 ಲಕ್ಷ

ಸಹಾಯಧನ: ರೂ. 50,000/-

ಸಾಲ: ರೂ. 50,000/- (ಶೇ. 4 ರಷ್ಟು ಬಡ್ಡಿದರ) ಇರುತ್ತದೆ.

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ

ಈ ಯೋಜನೆಯನ್ನು ಬ್ಯಾಂಕ್‌ಗಳ ಸಹಯೋಗದೊಂದಿಗೆ ನೀಡಲಾಗಿದೆ. ಹಾಗೂ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಗೆ ನೀಡಿದಂತೆ ಸಹಾಯಧನ ನೀಡಲಾಗುತ್ತದೆ. ಮತ್ತು ಉಳಿದ ಮೊತ್ತ ಬ್ಯಾಂಕ್ ನ ಸಾಲವಾಗಿರುತ್ತದೆ.

ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.1.00 ಲಕ್ಷ ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.2.00 ಲಕ್ಷ ಸ್ವಾವಲಂಬಿ ಸಾರಥಿ ಸರಕು ವಾಹನಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ. ಘಟಕ ವೆಚ್ಚದ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ. 4.00 ಲಕ್ಷ ರೂ.

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ :

ಈ ಯೋಜನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತದೆ.

ಘಟಕ ವೆಚ್ಚ: ರೂ. 2.50 ಲಕ್ಷ

ಸಹಾಯಧನ(subsidy): ರೂ.1.50 ಲಕ್ಷ

ಸಾಲ (loan): ರೂ. 1 ಲಕ್ಷ (ಶೇ. 4ರಷ್ಟು ಬಡ್ಡಿದರ)

ಭೂ ಒಡೆತನ ಯೋಜನ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು.

ಘಟಕ ವೆಚ್ಚ: ರೂ. 25,00 ಲಕ್ಷ / ರೂ. 20.00 ಲಕ್ಷ

ಸಹಾಯಧನ: ಶೇ. 50% ಸಾಲ: ಶೇ. 50% (ಶೇಕಡ 6ರಷ್ಟು ಬಡ್ಡಿದರ) ಗಂಗಾ ಕಲ್ಯಾಣ ಯೋಜನೆ ಆಗಿದೆ.

ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಕೊನೆಯ ದಿನಾಂಕ ಯಾವುದು?:

ಆಯ ನಿಗಮಗಳ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ಒಮ್ಮೆ ಸೇವಾ ಸಿಂಧುವಿನಲ್ಲೂ ಕೂಡ ವಿಚಾರಣೆ ನಡೆಸಬಹುದು. ಹೆಚ್ಚಿನ ವಿವರಕ್ಕೆ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು : 9482-300-400

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 29/11/2023 ಈ ಯೋಜನೆ ಯನ್ನು ಉತ್ತಮ ಮಹತ್ವಾಕಾಂಕ್ಷೆ ಇಂದ ಆರಂಭಿಸಿದ್ದು ಇದರಿಂದ ಬಡ ವರ್ಗದ ಜನರಿಗೆ ಉತ್ತಮ ರೀತಿಯಲ್ಲಿ ಸಹಾಯವಾಗಲಿದೆ. ಹಾಗೆಯೇ ಅವರ ಸ್ವಂತ ಉದ್ಯಮಕ್ಕೆ ಸಹಾಯ ಆಗುತ್ತದೆ. ಆದಷ್ಟು ಬೇಗ ಈ ಯೋಜನೆಯನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *