ಎಣ್ಣೆ ಪ್ರಿಯರಿಗೆ ಸರ್ಕಾರದ ಶಾಕ್​...  ಶೇ. 20ರಷ್ಟು ಮದ್ಯದ ಬೆಲೆ ದಿಢೀರ್​ ಏರಿಕೆ

ಎಣ್ಣೆ ಪ್ರಿಯರಿಗೆ ಸರ್ಕಾರದ ಶಾಕ್​… ಶೇ. 20ರಷ್ಟು ಮದ್ಯದ ಬೆಲೆ ದಿಢೀರ್​ ಏರಿಕೆ

ರಾಜ್ಯದ ಜನರಿಗೆ ಐದು ಗ್ಯಾರಂಟಿ ಸಿಗುವ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಮೂಲಕ ಸರ್ಕಾರ ಶಾಕ್ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದು ಒಂದೆಡೆ ಜನರಿಗೆ ಸಂತಸ ತಂದಿದೆ.

ಆದರೆ, ಇನ್ನೊಂದೆಡೆ ಉಚಿತ ನೆಪದಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿದೆ. ಜೊತೆಗೆ ಮದ್ಯ ಪ್ರಿಯರಿಗೂ ಶಾಕ್ ನೀಡಲಾಗಿದೆ. ಆದಾಯ ಸಂಗ್ರಹಿಸಲು ಸರ್ಕಾರ ಶೇ. 20 ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ. ನಿನ್ನೆಯಿಂದಲೇ ಬಿಯರ್ ಬೆಲೆ ಹೆಚ್ಚಳವಾಗಿದೆ.

ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದೆ ಜಾರಿಗೊಳಿಸುತ್ತಿದೆ. ನಾಳೆ ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಶಕ್ತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಉಚಿತ ಯೋಜನೆಗಳಿಗೆ ಚಾಲನೆ ನೀಡಲು ಸರ್ಕಾರ ಆರಂಭಿಸಿದೆ. ಇದರ ಮಧ್ಯೆ ಅಬಕಾರಿ ಇಲಾಖೆ ಸದ್ದಿಲ್ಲದೇ ಮದ್ಯದ ಬೆಲೆ ಏರಿಕೆ ಮಾಡಿದೆ. ಬಿಯರ್​ಗೆ 10 ರೂ. ಏರಿಕೆ ಮಾಡಲಾಗಿದೆ ಹಾಗೂ ಇತರ ಹಾಟ್ ಡ್ರಿಂಕ್ಸ್‌ಗಳ ವಿವಿಧ ಬ್ರ್ಯಾಂಡ್‌ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.

ಬಿಯರ್ ಮೇಲೆ ಶೇ. 20 ರಷ್ಟು ತೆರಿಗೆ ವಿಧಿಸಲಾಗಿದೆ. ಆ ಮೂಲಕ ಬಿಯರ್ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 500 ಕೋಟಿ ರೂ. ಹೆಚ್ಚುವರಿಯಾಗಿ ಬರಲಿದೆ. ಇದರ ಜೊತೆಗೆ ಇತರ ಮದ್ಯದ ಮೇಲೂ ತೆರಿಗೆ ವಿಧಿಸಲಾಗಿದೆ. ಬಿಯರ್ ಹೊರತು ಪಡಿಸಿ ಇತರ ಮದ್ಯದ ಬೆಲೆಯನ್ನು ಶೇ. 15 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂ. ಸಂಗ್ರಹವಾಗಲಿದೆ.

ಯಾವ ಡ್ರಿಂಕ್ಸ್​​​​​ಗೆ ಎಷ್ಟು ಬೆಲೆ? : ಕಿಂಗ್ ಫಿಶರ್, ಟ್ಯೂಬರ್ಗ್​ನ 650 ಎಂಎಲ್ ಬಿಯರ್ ಗೆ 160 ರೂ.ನಿಂದ 170 ರೂ.ಗೆ ಏರಿಕೆಯಾಗಿದೆ. ಮ್ಯಾಕ್ ಡ್ಯೂನಾಲ್ಡ್​ 180 ಎಂಎಲ್ 198 ರಿಂದ 220 ರೂ., ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳವಾಗಿದೆ. ಬಡ್​ವೈಸರ್​ 200 ರಿಂದ 220 ರೂ., ಪವರ್ ಕೂಲ್ 100 ರಿಂದ 110 ರೂ. ಹಾಗೂ ಬಕಾರ್ಡಿ 275 ಎಂಎಲ್‌ಗೆ 90 ರಿಂದ 105 ರೂ. ಏರಿಕೆಯಾಗಿದೆ.

ಲೈಸೆನ್ಸ್ ಶುಲ್ಕವೂ ಹೆಚ್ಚಳ? : ಮದ್ಯದ ಬೆಲೆ ಏರಿಕೆಯಷ್ಟೇ ಅಲ್ಲ, ಮದ್ಯದ ಲೈಸೆನ್ಸ್ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ. ಲಿಕ್ಕರ್ ಲೈಸೆನ್ಸ್ ಶುಲ್ಕವನ್ನು ಶೇ‌ 25 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಶೇ. 25 ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇನ್ನು 2023-24 ರಲ್ಲಿ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ರೂ. ಆದಾಯದ ಟಾರ್ಗೆಟ್ ಮಾಡಲಾಗಿದೆ. 39 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.

ವಿರೋಧ : ರಾಜ್ಯ ಸರ್ಕಾರದ ಈ ನಡೆಗೆ ಮದ್ಯಪ್ರಿಯರು ಹಾಗೂ ಮದ್ಯದ ಸಂಘಗಳು ವಿರೋಧಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.
ಮದ್ಯದ ಬೆಲೆ ಏರಿಕೆಗೆ ಮದ್ಯಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *