ನವದೆಹಲಿ: ಇಸ್ರೇಲ್‌ ರಾಯಭಾರಿ ನೌರ್‌ ಗಿಲೋನ್‌ ಅವರನ್ನು ನಟಿ ಕಂಗನಾ ರಣಾವತ್‌ ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿರುವ ಇಸ್ರೇಲ್‌ ರಾಯಭಾರಿ ಕಚೇರಿಯಲ್ಲಿ ಭೇಟಿಯಾಗಿ ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.

ಭೇಟಿ ಬಳಿಕ ಕಂಗನಾ ರಣಾವತ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಮಂಗಳವಾರ ನಾನು ರಾವಣ ದಹನಕ್ಕಾಗಿ ದೆಹಲಿಗೆ ಬಂದಿದ್ದೆ. ಈ ಸಮಯದಲ್ಲಿ ಇಂದಿನ ಆಧುನಿಕ ರಾವಣ ಮತ್ತು    ಹಮಾಸ್‌ನಂತಹ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಜನರನ್ನು ಭೇಟಿಯಾಗಬೇಕೆಂದು ನನಗೆ ಅನಿಸಿತು. ಈ ಹಿನ್ನೆಲೆ ಇಸ್ರೇಲ್‌ ರಾಯಭಾರ ಕಚೇರಿಗೆ ಭೇಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಮಾಸ್‌ ಭೀಕರವಾಗಿ ಹತ್ಯೆ ಮಾಡಿದೆ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್‌ ಜಯಶಾಲಿಯಾಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ.

Leave a Reply

Your email address will not be published. Required fields are marked *