ಜೆರುಸೆಲೀಂ: ಮಾನವೀಯತೆ ದೃಷ್ಟಿಯಿಂದ ಇಬ್ಬರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದನ್ನು ಹಮಾಸ್ ಉಗ್ರರು ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಬಳಿಯಿರುವ ಮಹಿಳೆಯರಿಗೆ ಆಹಾರ ಮತ್ತು ನೀರು ನೀಡುತ್ತಿರುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ ಮಿಲಿಟರಿ ಪಡೆ ೧೭ ನೇ ದಿನಕ್ಕೆ ಯುದ್ಧ ಬಂದು ನಿಂತಿದ್ದು, ಹಮಾಸ್ ಉಗ್ರರ ವಿರುದ್ಧ ನಿರಂತರ ದಾಳಿ ನಡೆಸಿ ಅವರನ್ನು ಸದೆಬಡಿಯುವುದು ಮುಖ್ಯ ಉದ್ದೇಶವಾಗಿದೆ.
ಇಸ್ರೇಲ್ ಮಿಲಿಟರಿ ಪಡೆಯ ಮುಖ್ಯಸ್ಥ ಹರ್ಜಿ ಹಲ್ವಿ ಪ್ರಕಾರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿಯನ್ನು ತಕ್ಷಣ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಭೂದಾಳಿಯಲ್ಲಿ ಎದುರಿಸಲು ಇಸ್ರೇಲ್ ಸಜ್ಜಾಗಿದೆ.
ಹಮಾಸ್ ಉಗ್ರರ ಮೇಲೆ ದಾಳಿ ನಡೆಸಿ ನಿರ್ನಾಮ ಮಾಡುವುದೇ ಮುಖ್ಯವಾಗಿದ್ದು, ನಿರಂತರ ದಾಳಿಯ ದಾರಿಯನ್ನು ಇಸ್ರೇಲ್ ಕಂಡು ಕೊಂಡಿದ್ದು, ಹಮಾಸ್ ಉಗ್ರರನ್ನು ನುಚ್ಚುನೂರು ಮಾಡಲಾಗುವುದು.