ಅಪ್ಪನನ್ನು ನೋಡಲು ತಿಹಾರ್ ಜೈಲಿಗೆ ವೇಷ ಮರೆಸಿಕೊಂಡು ಹೋಗಿದ್ದ ಡಿಕೆಶಿ ಪುತ್ರಿ ಐಶ್ವರ್ಯ!

ಅಪ್ಪನನ್ನು ನೋಡಲು ತಿಹಾರ್ ಜೈಲಿಗೆ ವೇಷ ಮರೆಸಿಕೊಂಡು ಹೋಗಿದ್ದ ಡಿಕೆಶಿ ಪುತ್ರಿ ಐಶ್ವರ್ಯ!

ಡಿ. ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಅವರ ವ್ಯವಹಾರಗಳ ಮೇಲೆ ಕಣ್ಣಿಟ್ಟ ಇಡಿ ಇಲಾಖೆ ಮನೆ, ಕಛೇರಿ ಮೇಲೆ ದಾಳಿಯನ್ನು ನಡೆಸಿ ಅವರನ್ನ ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಡೆದ ಘಟನೆಯನ್ನು ಡಿಕೆ ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ವೀಕೆಂಡ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ನನ್ನ ತಂದೆಯೇ ನನಗೆ ಹೀರೋ. ಅವರು ಏನೇ ಮಾಡಿದರು ಅದು ನಮ್ಮ ಒಳ್ಳೆಯದಕ್ಕೆ. ನಾವು ಮೂವರು ಮಕ್ಕಳಿಗೂ ಸಹ ಅವರು ಒಂದೇ ರೀತಿಯ ಬುದ್ದಿಯನ್ನ ಹೇಳುತ್ತಿದ್ದರು. ನಾವು ಇಂದಿನ ದಿನವನ್ನೇ ಬಹಳ ಉತ್ತಮ ದಿನ ಎಂದು ತಿಳಿದುಕೊಂಡು ಬದುಕಬೇಕು ಎಂದೆಲ್ಲ ಹೇಳಿಕೊಡುತ್ತಿದ್ದರು ಎಂದು ಐಶ್ವರ್ಯ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕಿರಿಯ ಪುತ್ರಿ ಆಭರಣ ಸಹ ನಮ್ಮ ತಂದೆ ನಮಗೆ ಯಾವಾಗಲೂ ಸಂಸ್ಕೃತಿಯ ಬಗ್ಗೆ ಹೇಳುತ್ತಿದ್ದರು. ನಾವು ಎಷ್ಟೇ ಸಾಧನೆ ಮಾಡಿದರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎನ್ನುತ್ತಿದ್ದರು. ಅದರಂತೆ ನಾವು ಬಾಳುತ್ತಿದ್ದೇವೆ ಎಂದು ತಿಳಿಸಿದರು. ಡಿ ಕೆ ಶಿವಕುಮಾರ್ ಪುತ್ರ ಆಕಾಶ್ ಮಾತನಾಡಿ ನನ್ನ ತಂದೆ ಎಷ್ಟೇ ಸಂಕಷ್ಟಕ್ಕೆ ಒಳಗಾದರೂ ಫೀನಿಕ್ಸ್‌ನಂತೆ ಮತ್ತೆ ಎದ್ದು ಬರುತ್ತಾರೆ. ಅದನ್ನೇ ನಾವು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ತಂದೆಯ ಬಗ್ಗೆ ಹೊಗಳಿದರು.

ತಿಹಾರ್ ಜೈಲಿಗೆ ವೇಷ ಬದಲಾವಣೆ

ಡಿ. ಕೆ. ಶಿವಕುಮಾರ್ ಇಡಿ ವಿಚಾರಣೆಯ ವೇಳೆ ಬಿಹಾರ್ ಜೈಲಿಗೂ ಸಹ ಹೋಗುವಂತಾಯಿತು. ಮಗಳು ಐಶ್ವರ್ಯ ತಂದೆಯನ್ನ ನೋಡಬೇಕು ಎಂದು ತಮ್ಮ ಚಿಕ್ಕಪ್ಪನಾದ ಸಂಸದ ಡಿ. ಕೆ ಶಿವಕುಮಾರ್ ಅವರ ಬಳಿ ಹೇಳಿಕೊಂಡಿದ್ದಾರೆ. ಆದರೆ ಐಶ್ವರ್ಯರನ್ನು ನೋಡಿದ ಕೂಡಲೇ ಡಿ. ಕೆ. ಶಿವಕುಮಾರ್ ರವರಿಗೆ ಆಘಾತ ಉಂಟಾಗುತ್ತದೆ ಎಂದು ಬೇಡ ಎಂದಿದ್ದಾರೆ. ಆದರೂ ಸಹ ಹಠಬಿಡದ ಐಶ್ವರ್ಯ ನನ್ನ ತಂದೆಯನ್ನ ನಾನು ನೋಡಲೇಬೇಕು ಎಂದುಕೊಂಡು ಚಿಕ್ಕಪ್ಪನಿಗೂ ಗೊತ್ತಾಗದ ರೀತಿಯಲ್ಲಿ ಅವರ ಸಂಬಂಧಿಕರ ಜೊತೆ ದೆಹಲಿಗೆ ಹೋಗಿದ್ದಾರೆ.

ಕೋರ್ಟ್‌ನಲ್ಲಿ ತಂದೆ ಜೊತೆ ಮಾತು

ವೇಷ ಮರಸಿಕೊಂಡು ರಿಪೋರ್ಟರ್ ರೂಪದಲ್ಲಿ ಜೈಲಿನೊಳಗೆ ಹೋಗಿ ಡಿ. ಕೆ ಶಿವಕುಮಾರ್ ಅವರನ್ನು ನೋಡಿದ್ದಾರೆ. ನಂತರ ಜೈಲಿನಿಂದ ಇಡಿ ವಿಚಾರಣೆಗಾಗಿ ಕರೆದುಕೊಂಡು ಕೋರ್ಟ್‌ಗೆ ಹೋಗುವ ವೇಳೆ ಐಶ್ವರ್ಯ ಸಹ ಹೋಗಿದ್ದಾರೆ. ಈ ವೇಳೆ ಅಲ್ಲಿ ನೆರದಿದ್ದ ಜನರನ್ನೆಲ್ಲ ನೋಡಿದ ಜಡ್ಜ್ ಡಿ. ಕೆ. ಶಿವಕುಮಾರ್ ಅವರ ಕುಟುಂಬದ ಸದಸ್ಯರ ಜೊತೆ ಹದಿನೈದು ನಿಮಿಷ ಮಾತನಾಡಬಹುದು ಎಂದು ಹೇಳಿದ್ದಾರೆ. ವೇಷ ಮರೆಸಿಕೊಂಡಿದ್ದ ಐಶ್ವರ್ಯ ಪೊಲೀಸರ ಬಳಿ ನಾನು ಡಿ. ಕೆ ಶಿವಕುಮಾರ್ ಅವರ ಮಗಳು ಎಂದು ಹೇಳಿದಾಗ ಪೊಲೀಸರು ನಂಬಲಿಲ್ಲ.

ಈ ವೇಳೆ ನೀವು ಡಿಕೆ ಶಿವಕುಮಾರ್ ಅವರ ಮಗಳಾದರೆ ಅವರು ನಿಮ್ಮನ್ನ ಗುರುತು ಹಿಡಿಯುತ್ತಾರೆ, ಆಗ ನೀವು ಮಾತನಾಡಬಹುದು ಎಂದು ಪೊಲೀಸರು ಹೇಳಿದ್ದಾರೆ. ಡಿ. ಕೆ ಶಿವಕುಮಾರ್ ಅವರು ಐಶ್ವರ್ಯರನ್ನು ನೋಡಿ 15 ನಿಮಿಷಗಳ ಕಾಲ ತಂದೆ ಮಗಳು ಮಾತನಾಡಿದ್ದಾರೆ. ನನ್ನ ತಂದೆಯ ಜೊತೆ ಮಾತನಾಡಿದ ನಂತರ ನನಗೆ ಒಂದು ಎನರ್ಜಿ ಬಂದಿತ್ತು. ಅವರು ಮನೆಗೆ ಬರುವವರೆಗೆ ನಾನು ನಿರಾಳವಾಗಿ ಇದ್ದೆ ಎಂದು ಐಶ್ವರ್ಯ ಆ ನೆನಪನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹಂಚಿಕೊಂಡರು.

ಬಟ್ಟೆ ವಿಷಯದಲ್ಲಿ ಡಿಕೆಶಿ ಮಾತೇ ಫೈನಲ್

ಡಿ. ಕೆ ಶಿವಕುಮಾರ್ ಎಷ್ಟೇ ದೊಡ್ಡ ರಾಜಕಾರಣಿಯಾದರು ತಮ್ಮ ಮಕ್ಕಳ ಬಗ್ಗೆ ಒಂದು ವಿಶೇಷವಾದ ಪ್ರೀತಿಯನ್ನ ಬೆಳೆಸಿಕೊಂಡಿದ್ದಾರೆ. ಅವರು ಹಾಕುವ ಬಟ್ಟೆಯ ಬಗ್ಗೆಯೂ ಸಹ ಡಿಕೆಶಿ ಅವರು ಹೇಳಿದಂತೆಯೇ ನಡೆಯಬೇಕು ಎಂದು ಅವರ ಮಗಳು ಹಾಗೂ ಪತ್ನಿ ಉಷಾ ಅವರು ಹೇಳಿದ್ದಾರೆ. ಇದರ ಜೊತೆಗೆ ಮಕ್ಕಳು ಏನನ್ನು ಓದಬೇಕು ಎಂಬುದನ್ನು ಡಿ. ಕೆ ಶಿವಕುಮಾರ್‌ ಅಂತಿಮವಾಗಿ ನಿರ್ಧಾರ ಮಾಡಿದ್ದರಂತೆ.

ಕಾಲೇಜಿಗೆ ಹೋಗಲ್ಲ ಎಂದ ಐಶ್ವರ್ಯ

ತಮ್ಮದೇ ಕಾಲೇಜಿಗೆ ಸೇರಿಸಿದಾಗ ಐಶ್ವರ್ಯ ಕಾಲೇಜು ಬಿಟ್ಟು ಓಡಿ ಬಂದು ನಾನು ಮತ್ತೊಮ್ಮೆ ಕಾಲೇಜಿಗೆ ಹೋಗೋದಿಲ್ಲ ಎಂದಿದ್ದಾರೆ. ಈ ವೇಳೆ ಡಿ. ಕೆ ಶಿವಕುಮಾರ್ ಧೈರ್ಯ ತುಂಬಿ ನೀನು ಹೋಗಲೇಬೇಕು. ಯಾಕೆಂದರೆ ಆ ಕಾಲೇಜಿನಲ್ಲಿಯೇ ಕಲಿಯಬೇಕು. ನಾನು ಸಾರ್ವಜನಿಕ ಜೀವನದ ಇರುವವನು, ಮುಂದೆ ನಿನಗೆ ಏನಾದರೂ ಕಷ್ಟ ಬಂದಾಗ ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಕಾಲೇಜಿಗೆ ಕಳಿಸಿದ್ದಾರೆ.

ಆಕಾಶ್ ಲಾ ಪ್ರಾಕ್ಟೀಸ್

ಕಿರಿಯ ಮಗಳು ಸಿವಿಲ್ ಇಂಜಿನಿಯರ್ ಓದುತ್ತಿದ್ದು, ಈ ಆಯ್ಕೆ ಸಹ ಡಿಕೆ ಶಿವಕುಮಾರ್ ಅವರದ್ದೇ. ಆಭರಣಗೆ ಮೆಡಿಕಲ್ ಮಾಡುವ ಆಸೆ ಇತ್ತು. ಆದರೆ ತಂದೆ ಆಸೆ ತಮ್ಮ ಮಗಳನ್ನು ಸಿವಿಲ್ ಇಂಜಿನಿಯರ್ ಮಾಡಿಸಬೇಕೆಂಬುದಾಗಿತ್ತು. ಮಗ ಆಕಾಶ್ ಸಹ ಚೆನ್ನಾಗಿ ಓದುತ್ತಿದ್ದು ಆತ ಲಾ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಒಟ್ಟಾರೆಯಾಗಿ ಡಿ. ಕೆ. ಶಿವಕುಮಾರ್ ಹೇಳಿದಂತೆಯೇ ಮಕ್ಕಳು ಹಾಗೂ ಪತ್ನಿ ಕೇಳುತ್ತಾರೆ.

Leave a Reply

Your email address will not be published. Required fields are marked *