ಹಲವು ಗಮನಾರ್ಹ ಸಾಧನೆಗಳ ಬಳಿಕ ವಿರಾಟ್ ಕೊಹ್ಲಿ ಅವರ ನಾಯಕತ್ವ ಕೆಲವು ವರ್ಷಗಳ ಹಿಂದೆ ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಂಡಿತ್ತು. 

Sourav Ganguly-Virat Kohli

ನವದೆಹಲಿ: ಹಲವು ಗಮನಾರ್ಹ ಸಾಧನೆಗಳ ಬಳಿಕ ವಿರಾಟ್ ಕೊಹ್ಲಿ ಅವರ ನಾಯಕತ್ವ ಕೆಲವು ವರ್ಷಗಳ ಹಿಂದೆ ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಂಡಿತ್ತು. NextStay

ದುಬೈ ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಂಡದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಕೊಹ್ಲಿ ಆರಂಭದಲ್ಲಿ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದರು. ಇದಾದ ಬೆನ್ನಲ್ಲೇ ಅಂದು ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಕೊಹ್ಲಿ ಅವರನ್ನು ಒಡಿಐ ನಾಯಕತ್ವದ ಜವಾಬ್ದಾರಿಯಿಕಂದ ಮುಕ್ತಗೊಳಿಸಿತ್ತು. ಪರಿಣಾಮ ದಾದಾ ಮತ್ತು ಕೊಹ್ಲಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನೆಯಾಗಿತ್ತು.

ಒಡಿಐ ಹಾಗೂ ಟಿ20 ಫಾರ್ಮ್ಯಾಟ್ ಗಳಲ್ಲಿ ಕೊಹ್ಲಿ ಸ್ಥಾನವನ್ನು ರೋಹಿತ್ ಶರ್ಮಾ ತುಂಬಿದ್ದರು. 2022 ರ ಜನವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 1-2 ಅಂತರದಿಂದ ಪರಾಭವಗೊಂಡ ಪರಿಣಾಮ ಕೊಹ್ಲಿ ಟೆಸ್ಟ್ ಫಾರ್ಮ್ಯಾಟ್ ನ ನಾಯಕತ್ವವವನ್ನೂ ಬಿಟ್ಟುಕೊಟ್ಟಿದ್ದರು.
 
ಇಷ್ಟೆಲ್ಲಾ ಆದ ನಂತರ ಡಬ್ಲ್ಯುಟಿಸಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ದಾದಾ ಕೊಹ್ಲಿ ನಾಯಕತ್ವದ ಬಗ್ಗೆ ಮೌನ ಮುರಿದಿದ್ದರು. ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದಾಗ ನನಗೂ ಅಚ್ಚರಿಯಾಗಿತ್ತು ಎಂದು ದಾದಾ ಹೇಳಿದ್ದರು. ಅಂತೆಯೇ ಬಿಸಿಸಿಐ ಕೊಹ್ಲಿಗೆ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಹೇಳಿರಲಿಲ್ಲ ಎಂಬ ಅಂಶವನ್ನೂ ಸ್ಪಷ್ಟಪಡಿಸಿದ್ದರು.

ಕೊಹ್ಲಿ ಅದ್ಯಾಕೆ ಆ ನಿರ್ಧಾರ ತೆಗೆದುಕೊಂಡರು ಎಂಬುದು ನನಗೆ ತಿಳಿದಿಲ್ಲ. ಅವರಷ್ಟೇ ಹೇಳಬೇಕು. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ನಮ್ಮ ಬಳಿ ಇದ್ದ ಅತ್ಯುತ್ತಮ ಆಯ್ಕೆ ಎಂದರೆ ಅದು ರೋಹಿತ್ ಶರ್ಮಾ ಎಂದು ಗಂಗೂಲಿ ಆಜ್ ತಕ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
 
ಇದೇ ವೇಳೆ ಕೊಹ್ಲಿ ಟೆಸ್ಟ್ ನಾಯಕನಾಗಿ ನಡೆದುಬಂದ ಹಾದಿಯನ್ನೂ ಮೆಚ್ಚಿಕೊಂಡಿರುವ ಗಂಗೂಲಿ, ಟೆಸ್ಟ್ ತಂಡದಲ್ಲಿ ಗೆಲುವಿನ ಮನಸ್ಥಿತಿ, ದೃಢತೆಯನ್ನು ಹುಟ್ಟುಹಾಕುವ ಅವರ ಸಾಮರ್ಥ್ಯಕ್ಕಾಗಿ ಕೊಹ್ಲಿಯನ್ನು ಕೊಂಡಾಡಿದ್ದಾರೆ. ಕೊಹ್ಲಿ ಅತ್ಯುತ್ತಮ ನಾಯಕ, ಕೊಹ್ಲಿ ನಾಯಕತ್ವ, ರವಿ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಉತ್ತಮವಾಗಿತ್ತು.

ಇಂಗ್ಲೆಂಡ್ ನಲ್ಲಿ ಭಾರತವು ನಿರ್ಭೀತ ಮನೋಭಾವದಿಂದ ಆಡಿತು ಮತ್ತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಧೈರ್ಯವನ್ನು ತೋರಿಸಿತು. ಆ ಸಮಯದಲ್ಲಿ ಅವರು ಮ್ಯಾಂಚೆಸ್ಟರ್ ಟೆಸ್ಟ್ ಆಡಿದ್ದರೆ, ಅವರು ಇಂಗ್ಲೆಂಡ್‌ನಲ್ಲೂ ಸರಣಿಯನ್ನು ಗೆಲ್ಲುತ್ತಿದ್ದರು,’ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಹಾಗೂ ರವಿಶಾಸ್ತ್ರಿಯ ಬಗ್ಗೆ ಗಂಗೂಲಿ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *