ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ ಹಿನ್ನೆಲೆ ಸ್ಥಳೀಯ ಕಾಂಗ್ರೆಸ್​​ ಮುಖಂಡ ಸೇರಿದಂತೆ ಇಬ್ಬರನ್ನು ನಗರದ ಆರ್​ಎಂಸಿ ಯಾರ್ಡ್ ಪೊಲೀಸರಿಂದ ಬಂಧಿಸಲಾಗಿದೆ.

ಬೆಂಗಳೂರು: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ ಹಿನ್ನೆಲೆ ಸ್ಥಳೀಯ ಕಾಂಗ್ರೆಸ್​​ಮುಖಂಡ ಸೇರಿದಂತೆ ಇಬ್ಬರನ್ನು ನಗರದ ಆರ್​ಎಂಸಿ ಯಾರ್ಡ್ ಪೊಲೀಸರಿಂದ ಬಂಧಿಸಲಾಗಿದೆ. ಸುಂಕದಕಟ್ಟೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸೋಮುಗೌಡ ಬಂಧಿತರು. ಕಳೆದ ಜೂನ್​ 21 ರಂದು ಬೆಳಗ್ಗೆ 8.30 ಕ್ಕೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಜಾಮೊಯಿನುದ್ದೀನ್ ಹಾಗೂ ಉಮೇಶ ಎಂಬುವವರು ಮಾಗಡಿಯಲ್ಲಿ ಗೋಮಾಂಸ ಖರೀದಿಸಿ ಶಿವಾಜಿ ನಗರಕ್ಕೆ ಸ್ಕಾರ್ಪಿಯೋ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು.

ಈ ವೇಳೆ ತುಮಕೂರು ರಸ್ತೆಯಲ್ಲಿ ವಾಹವನ್ನು ಅಡ್ಡಗಟ್ಟಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸ್ನೇಹಿತರು ನಿಮ್ಮ ವಾಹನ ನಮ್ಮ ಇನ್ನೋವಾ ಕಾರಿಗೆ ಟಚ್ ಆಗಿ ಡ್ಯಾಮೇಜ್​ ಆಗಿದ್ದು, ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ. ನಂತರ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಕ್ಕೆ 2 ಲಕ್ಷ ರೂ.ಗೆ ಡಿಮಾಂಡ್ ಮಾಡಿದ್ದು, ಜತೆಗೆ ಹಲ್ಲೆ ಆರೋಪ ಮಾಡಿದ್ದಾರೆ.

ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದರ ಬಂಧನ

ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿ ಪ್ರಶಾಂತ್ ಹಾಗೂ ಸೋಮು ಗೌಡ ಇಬ್ಬರ ಬಂಧನ ಮಾಡಲಾಗಿದೆ. ಮತ್ತೊಂದೆಡೆ ಗೋಮಾಂಸ ಅಕ್ರಮ ಸಾಗಾಟ ಮಾಡುತ್ತಿದ್ದ ಹಿನ್ನಲೆ ಉಮೇಶ್ ಹಾಗೂ ಖಾಜಾಮೊಯಿನುದ್ದೀನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎರೆಡು ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.

ಬೈಕ್ ಮೇಲೆ ವಸ್ತುಗಳನ್ನ ಇಟ್ಟು ಹೋಗುವವರೇ ಎಚ್ಚರ!

ಬೈಕ್ ನಿಲ್ಲಿಸಿ ಹೋದ ಕ್ಷಣಾರ್ಧದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ಡಿಯೋ ಬೈಕ್​​ನಲ್ಲಿ ಬಂದ ಇಬ್ಬರು ಖದೀಮರು ಬೈಕ್​ನಲ್ಲಿಟ್ಟಿದ್ದ ಪ್ಲಂಬಿಂಗ್ ಟೂಲ್ಸ್ ಮತ್ತು ಮಿಷನ್​ ಕಳ್ಳತನ ಮಾಡಿದ್ದಾರೆ. ಹೆಣ್ಣೂರಿನ ಬಾಲಾಜಿ ಲೇಔಟ್​​ನಲ್ಲಿ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ರಸ್ತೆ ಬದಿ ಬೈಕ್​ನಲ್ಲಿ ಇಟ್ಟಿದ್ದ ಟೂಲ್ಸ್ ಕದಿದ್ದಾರೆ. ಕಳ್ಳತನದ ವಿಡಿಯೋ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *