ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ

ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ

ವಿಜಯಪುರ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವಾಗ ಸ್ವಾಮೀಜಿಯೊಬ್ಬರು ಅಚಾತುರ್ಯ ಎಸಗಿದ್ದಾರೆ. ಭಾನುವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ ತಾವೇ ಸರ್ಕಾರಿ ಬಸ್ ಚಲಾಯಿಸಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಸುಮಾರು 5 ಕಿ.ಮೀ ವರೆಗೆ ಸರ್ಕಾರಿ ಬಸ್‌ನ್ನು ಸ್ವಾಮೀಜಿ ಚಲಾಯಿಸಿದ್ದಾರೆ.

ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ್ ಸ್ವಾಮೀಜಿ ಬಸ್ ಚಲಾಯಿಸಿ ಅಚಾತುರ್ಯ ಎಸಗಿದ್ದಾರೆ.

ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಬಸ್ ತೆಗೆದುಕೊಂಡು ಹೋಗಿ ಕೊಲ್ಹಾರ ಪಟ್ಟಣದಲ್ಲಿ ಸ್ವಾಮೀಜಿ ಸುತ್ತಾಡಿಸಿದ್ದಾರೆ. ಸ್ವಾಮೀಜಿ ಬಸ್ ಚಲಾಯಿಸುತ್ತಿದ್ದಂತೆ ಆತಂಕದಲ್ಲೇ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ನಿಯಮದಂತೆ ಸರ್ಕಾರಿ ಚಾಲಕ ಬಿಟ್ಟು ಬೇರೆಯವರು ಸರ್ಕಾರಿ ಬಸ್ ಚಲಾಯಿಸುವಂತಿಲ್ಲ. ಬಸ್ ಚಲಾಯಿಸುವವರು ಕಡ್ಡಾಯವಾಗಿ ಹೇವಿ ಲೈಸನ್ಸ್ ಪಡೆದಿರಬೇಕು. ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಸರ್ಕಾರಿ ಬಸ್‌ನ್ನು ಕಲ್ಲಿನಾಥ ಸ್ವಾಮೀಜಿ ಚಲಾಯಿಸಿದ್ದಾರೆ. ಸ್ವಾಮೀಜಿಯ ಅಚಾತುರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *