ಭಾರತದ ಬ್ಯಾಟಿಂಗ್‌ ಶಕ್ತಿ ವಿರಾಟ್‌ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಅತ್ಯಂತ ವೇಗವಾಗಿ 26,000 ರನ್‌ ಪೂರೈಸಿದ ದಾಖಲೆ ಬರೆದಿದ್ದಾರೆ.

ಈ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ ಕೊಹ್ಲಿ 510 ಪಂದ್ಯ 566 ಇನಿಂಗ್ಸ್‌ ಗಳಿಂದ 25,923 ರನ್‌ ಗಳಿಸಿದ್ದರು. ಸಚಿನ್‌ ತೆಂಡೂಲ್ಕರ್‌ ಪ್ರಸ್ತುತ 34,357 ರನ್‌ ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಕುಮಾರ ಸಂಗಕ್ಕಾರ 28,016 ರನ್‌ ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ 27,483 ರನ್‌ ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಕೊಹ್ಲಿ ಸಿಕ್ಸರ್‌ ಬಾರಿಸಿ ಶತಕ ಪೂರೈಸಿದ್ದೂ ಅಲ್ಲದೇ 26,000 ರನ್‌ ದಾಖಲೆಯನ್ನೂ ಬರೆದರು. ಕೊಹ್ಲಿ ಪಾಲಿಗೆ ಇದು 48ನೇ ಏಕದಿನ ಶತಕವಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 73ನೇ ಶತಕವಾಗಿದೆ.

Leave a Reply

Your email address will not be published. Required fields are marked *