ಶ್ರೀಲಂಕಾದ ಆಲ್ ರೌಂಡರ್ ಆಂಜೆಲೊ ಮ್ಯಾಥ್ಯೂಸ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಟೈಮ್ಡ್ ಔಟ್ (timed out’) ತೀರ್ಪಿಗೆ ಬಲಿಯಾಗುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.

ಸೋಮವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯ ಶ್ರೀಲಂಕಾ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 290 ರನ್ ಕಲೆ ಹಾಕಿದೆ.

ದೆಹಲಿಯಲ್ಲಿ ನಡೆದ ಪಂದ್ಯದ 25ನೇ ಓವರ್ ನಲ್ಲಿ ಈ ಘಟನೆ ನಡೆದಿದ್ದು, ಮ್ಯಾಥೂಸ್ ಒಂದೂ ಎಸೆತ ಎದುರಿಸದೇ ಟೈಮ್ಡ್ ಔಟ್ ಆದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಬೇಡದ ದಾಖಲೆಗೆ ಪಾತ್ರರಾದರು.

ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ 25ನೇ ಓವರ್ ನ 2ನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಸುಧೀರ ಸಮರವಿಕ್ರಮ ಔಟಾಗುತ್ತಿದ್ದಂತೆ ಆಂಜೆಲೊ ಮ್ಯಾಥ್ಯೂಸ್ ಕ್ರೀಸ್ ಗೆ ಆಗಮಿಸಿದರು.

ಮೈದಾನ ಒಳಗೆ ಬಂದಿದ್ದ ಮ್ಯಾಥ್ಯೂಸ್ ತಾನು ಬೇರೊಬ್ಬರ ಹೆಲ್ಮೆಟ್ ತಂದಿರುವುದು ಅರಿವಾಗಿ ಕ್ರೀಸ್ ನಿಂದ ಹೊರಗೆ ಹೋಗಿ ಮತ್ತೆ ಹೆಲ್ಮೆಟ್ ತರಲು ಹಿಂತಿರುಗಿದರು. ಇದಕ್ಕಾಗಿ ಅಂಪೈರ್ ಮತ್ತು ಬಾಂಗ್ಲಾದೇಶ ಆಟಗಾರರ ಬಳಿ ಮನವಿ ಮಾಡಿದರು.

ಆದರೆ ಅಂಪೈರ್ ನಿಗದಿತ ಅವಧಿಯೊಳಗೆ ಕ್ರೀಸ್ ಬಾರದೇ ಇರುವ ಕಾರಣ ಔಟ್ ಎಂದು ತೀರ್ಪು ನೀಡಿದರು. ಈ ಮೂಲಕ ಮ್ಯಾಥ್ಯೂಸ್ ಒಂದೂ ಎಸೆತ ಎದುರಿಸದೇ ಟೈಮ್ಡ್ ಔಟಾದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ಅಪರೂಪದ ದಾಖಲೆಗೆ ಪಾತ್ರರಾದರು.

Leave a Reply

Your email address will not be published. Required fields are marked *