India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಮೊದಲು 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಜುಲೈ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಹಾಗೆಯೇ ಆಗಸ್ಟ್ 3 ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಐಪಿಎಲ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ರಜೆಯ ಮೂಡ್​ನಲ್ಲಿ ರೋಹಿತ್ ಶರ್ಮಾ, ಮುಂಬರುವ ಸರಣಿಯ ವೇಳೆ ವಿಶ್ರಾಂತಿ ಬಯಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಇತ್ತ ರೋಹಿತ್ ಶರ್ಮಾ ಹೊರಗುಳಿದರೆ ಮತ್ತೆ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಆಯ್ಕೆ ಸಮಿತಿ ಮುಂದಿರಲಿದೆ. ಹೀಗಾಗಿ ಇನ್ನೂ ಕೂಡ ಈ ಬಗ್ಗೆ ಆಯ್ಕೆ ಸಮಿತಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಏಕೆಂದರೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ , 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಇಲ್ಲಿ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ.

ಆದರೆ ಅದಕ್ಕೂ ಮುನ್ನ ನಡೆಯಲಿರುವ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಬೇಕಿದೆ. ಇದಾಗ್ಯೂ 2 ಸರಣಿಗಳಿಂದ ಟೀಮ್ ಇಂಡಿಯಾ ನಾಯಕ ವಿಶ್ರಾಂತಿ ಬಯಸಿದ್ದಾರೆ ಎಂದು ವರದಿಯಾಗಿದೆ.

ಇತ್ತ ಮುಂಬರುವ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಬಲಿಷ್ಠ ಏಕದಿನ ತಂಡವನ್ನು ರೂಪಿಸಬೇಕಿದೆ. ಇದರ ನಡುವೆ ರೋಹಿತ್ ಶರ್ಮಾ ವಿಶ್ರಾಂತಿ ಬಯಸಿರುವುದು ಆಯ್ಕೆ ಸಮಿತಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಜೂನ್ 26 ರಂದು ವೆಸ್ಟ್ ಇಂಡೀಸ್​ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದ್ದು, ಇದರೊಳಗೆ ವಿಶ್ರಾಂತಿ ಬಗ್ಗೆ ರೋಹಿತ್ ಶರ್ಮಾ ಜೊತೆ ಆಯ್ಕೆ ಸಮಿತಿ ಚರ್ಚಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೀಗಾಗಿ ಅಂತಿಮವಾಗಿ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅಥವಾ ಆಯ್ಕೆ ಸಮಿತಿ ಅವರಿಗೆ ವಿಶ್ರಾಂತಿ ನೀಡಲಿದೆಯಾ ಎಂಬುದು ಜೂನ್ 27 ರಂದು ಬಹಿರಂಗವಾಗಲಿದೆ.

ಒಟ್ಟಿನಲ್ಲಿ ಐಪಿಎಲ್​​ನಲ್ಲಿ ಸತತ 2 ತಿಂಗಳು ಆಡುವ ಸ್ಟಾರ್ ಆಟಗಾರರು ಟೀಮ್ ಇಂಡಿಯಾ ಸರಣಿಗಳ ವೇಳೆ ವಿಶ್ರಾಂತಿ ಪಡೆಯುತ್ತಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಮೊದಲು 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಜುಲೈ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಹಾಗೆಯೇ ಆಗಸ್ಟ್ 3 ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

Leave a Reply

Your email address will not be published. Required fields are marked *