Mysore News: ಕುರುಬೂರು ಬಳಿ ಭೀಕರ ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಮೈಸೂರು: ಜಿಲ್ಲೆಯ ಟಿ ನರಸೀಪುರ (T Narasipura)ತಾಲ್ಲೂಕಿನ ಕುರುಬೂರು ಗ್ರಾಮದ ಬಳಿ ಮೇ.29 ರಂದು ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ ಬಳ್ಳಾರಿ(Ballari) ಮೂಲದ ಒಂದೇ ಕುಟುಂಬದ 9, ಶ್ರೀರಂಗಪಟ್ಟಣದ ಚಾಲಕ ಮೃತರಾಗಿದ್ದರು. ತೀವ್ರ ಗಾಯಗಳಿಂದ ಬದುಕುಳಿದಿದ್ದ ಶಶಿಕುಮಾರ್ ಅಲಿಯಾಸ್ ಸಂಪತ್, ಜನಾರ್ಧನ್, ಆತನ ಮಗ ಹಾಗೂ ಮತ್ತೊಬ್ಬ ಬಸ್‌ನಲ್ಲಿದ್ದ ಗಾಯಾಳು ಸೇರಿ ಮೂವರನ್ನು ಕೆ ಆರ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಇದೀಗ ಶಶಿಕುಮಾರ್ ಸಾವನ್ನಪ್ಪಿದ್ದಾನೆ. ಇನ್ನು ಉಳಿದಂತೆ ಮೂವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೆಲುವಾಂಬ ಹಾಗೂ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀಕರ ಅಪಘಾತದಲ್ಲಿ ಅಕ್ಕ ಪಕ್ಕದ ನಾಲ್ಕು ಮನೆಯವರ ಫೈಕಿ 10 ಜನ ಸಾವನ್ನಪ್ಪಿದ್ದರು, ಇದೀಗ 11 ಕ್ಕೆ ಏರಿಕೆ

ಮೈಸೂರು ಅರಮನೆ ನೋಡಿಕೊಂಡು ಸೆಲ್ಪಿ ಕಿಕ್ಲ್ ಮಾಡಿ ಒಟ್ಟಾಗಿ ಪೋಟೋ ತಗೆದುಕೊಂಡಿದ್ರು. ಮೈಸೂರು, ಮಲೆಮಹದೇಶ್ವರ ಬೆಟ್ಟ ನೋಡಿ ಮರಳಿ ಊರಿಗೆ ಬರೋಕೆ ರೆಡಿಯಾಗಿದ್ರು. ಆದ್ರೆ, ಜವರಾಯ ಅವರನ್ನ ಊರು ತಲುಪಲು ಬಿಡಲಿಲ್ಲ. ಮೇ.29 ರಂದು ಮೈಸೂರಿನ ಕುರುಬೂರ ಬಳಿ ನಡೆದ ರಸ್ತೆ ಅಪಘಾತದಲ್ಲಿ 10 ಪ್ರವಾಸಿಗರು ಧಾರುಣವಾಗಿ ಸಾವನಪ್ಪಿದ್ದರು. ಹೌದು ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದಿಂದ ಮೈಸೂರಿಗೆ ಪ್ರವಾಸಕ್ಕೆಂದು ತೆರಳಿದ್ದ ನಾಲ್ಕು ಕುಟುಂಬದವರು ಅಪಘಾತದಲ್ಲಿ ಬಲಿಯಾಗಿದ್ದರು. ಅಕ್ಕ ಪಕ್ಕದ ಮನೆಯವರು ಒಂದಾಗಿ ಪ್ರವಾಸಕ್ಕೆ ತೆರಳಿದ್ದ ಗ್ರಾಮಸ್ಥರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಈಡೀ ಗ್ರಾಮದಲ್ಲಿ ಸಶ್ಮಾನ ಮೌನ ಆವರಿಸಿದೆ. ಪ್ರವಾಸದ ವೇಳೆ ಗ್ರಾಮಸ್ಥರ ಜೊತೆ ಸತತ ಸಂಪಕದಲ್ಲಿದ್ದ ಮೃತರು ಇನ್ನೋವಾ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವುದು ಸಂಬಂಧಿಕರಲ್ಲಿ ಆಕ್ರಂದನ ಮೂಡಿಸಿತ್ತು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದೆಲ್ಲೆಡೆ ಸಶ್ಮಾನ ಮೌನ ಆವರಿಸಿತ್ತು. ಸಂಬಧಿಕರು. ಆಪ್ತರು. ಸ್ನೇಹಿತರನ್ನ ಕಳೆದುಕೊಂಡವರು ಕಣ್ಣೀರೀಡುತ್ತಿದ್ದರು.

ಸಂಗನಕಲ್ಲು ಗ್ರಾಮದ 10 ಜನರು ಅಪಘಾತದ ಸುದ್ದಿ ಹರಡುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಡಳಿತದ ಅಧಿಕಾರಿಗಳು, ಕೆಲ ನಾಯಕರು ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಹರೀಶ್​ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಬಳಿ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ನೀಡಿದ್ರು. ಮೃತರೆಲ್ಲರೂ ನಿತ್ಯ ದುಡಿದೇ ಜೀವನ ಸಾಗಿಸುತ್ತಿದ್ದವರಾದ ಪರಿಣಾಮ ಜಿಲ್ಲಾಡಳಿತ ಸಹ ಅಂತ್ಯಕ್ರೀಯೆ ನಡೆಸಲು ಸಕಲ ಸಹಾಯ ಮಾಡಲು ಮುಂದಾಗಿತ್ತು. ಅಲ್ಲದೇ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಶ್ರೀರಾಮುಲು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ ಪಡಿಸಿದ್ರೆ. ಸಚಿವ ಬಿ ನಾಗೇಂದ್ರ ಮೈಸೂರಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಮೃತರ ಶವಗಳನ್ನ ಊರಿಗೆ ತರಲು ವ್ಯವಸ್ಥೆ ಕಲ್ಪಿಸಿದ್ದರು.

  1. ಪ್ರವಾಸಕ್ಕೆಂದು ತೆರಳಿದವರು ಮರಳಿ ಊರಿಗೆ ಬರುವ ಮುನ್ನವೇ ಬಾರದ ಲೋಕಕ್ಕೆ ತೆರಳಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಅದರಲ್ಲಿ ಇದೀಗ ಮತ್ತೊರ್ವ ಸಾವನ್ನಪ್ಪಿದ್ದಾನೆ. ಗ್ರಾಮಸ್ಥರ, ಕುಟುಂಬಸ್ಥರ, ಸಂಬಧಿಕರೆಲ್ಲರ ನೋವು, ಆಕ್ರಂದನ ಮುಗಿಲು ಮುಟ್ಟಿರುವುದು ಮಾತ್ರ ಸುಳ್ಳಲ್ಲ.