KISSING SCENE: 21ರ ನಟಿಗೆ ಲಿಪ್‌ಲಾಕ್‌ ಮಾಡಿ ಟ್ರೋಲಾದ 49ರ ನಟ; ಅಸಹ್ಯವೆಂದ ನೆಟ್ಟಿಗರು

KISSING SCENE: 21ರ ನಟಿಗೆ ಲಿಪ್‌ಲಾಕ್‌ ಮಾಡಿ ಟ್ರೋಲಾದ 49ರ ನಟ; ಅಸಹ್ಯವೆಂದ ನೆಟ್ಟಿಗರು

ಮುಂಬಯಿ: ಸಿನಿಮಾರಂಗಕ್ಕೆ ಬಂದ ಮೇಲೆ ಅಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಬೇಕು. ಪಾತ್ರಗಳನು ನಿಭಾಯಿಸುವಾಗ ಆ ಪಾತ್ರಗಳು ಜನರಿಗೆ ಹೇಗೆ ತಲುಪುತ್ತದೆ, ಜನ ಹೇಗೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಮುಖ್ಯ.

ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿರುವ ನವಾಜುದ್ದೀನ್ ಸಿದ್ದಿಕಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿರುವುದು ಬಿಟೌನ್‌ ವಲಯದಲ್ಲಿ ಟ್ರೆಂಡ್‌ ಆಗಿದೆ.

ಅದಕ್ಕೆ ಕಾರಣ ಅವರ ಮುಂಬರುವ ಸಿನಿಮಾ ʼಟಿಕು ವೆಡ್ಸ್ ಶೇರುʼ ಚಿತ್ರದ ಟ್ರೇಲರ್.‌

ನವಾಜುದ್ದೀನ್ ಸಿದ್ದಿಕಿ, ಅವನೀತ್ ಕೌರ್ ಅಭಿನಯದ ʼʼಟಿಕು ವೆಡ್ಸ್ ಶೇರುʼʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಸಿನಿಮಾದ ಟ್ರೇಲರ್‌ ನಲ್ಲಿ ಬರುವ ದೃಶ್ಯವೊಂದು ಭಾರೀ ವೈರಲ್‌ ಆಗುವುದರ ಜೊತೆ ಟ್ರೋಲ್‌ ಗೆ ಒಳಗಾಗಿದೆ.

ಸಿನಿಮಾದ ಸನ್ನಿವೇಶವೊಂದರಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಸಹ ನಟಿ ಅವನೀತ್ ಕೌರ್ ಅವರಿಗೆ ಕಿಸ್ ಮಾಡುವ ದೃಶ್ಯವೊಂದಿದೆ. ಇದು ಕೆಲವೇ ಸೆಕೆಂಡ್‌ ಗಳ ದೃಶ್ಯವಾದರೂ ಇದು ಟ್ರೋಲ್‌ ಗೆ ಒಳಗಾಗಿದೆ. ಅದಕ್ಕೆ ಕಾರಣ ನಟನ ವಯಸ್ಸು. ನವಾಜುದ್ದೀನ್ ಸಿದ್ದಿಕಿ ಅವರಿಗೆ 49 ವರ್ಷವಾಗಿದ್ದು, ನಟಿಗೆ 21 ವರ್ಷ ವಯಸ್ಸಾಗಿದೆ.

ರೆಡ್ಡಿಟ್‌ ನಲ್ಲಿ ಕೆಲ ಬಳಕೆದಾರರು ಟ್ರೋಲ್‌ ಮಾಡಿದ್ದಾರೆ. “ಇದು ಅಸಹ್ಯ. ನವಾಜುದ್ದೀನ್ ಸಿದ್ದಿಕಿ ಅವರ ಸಿನಿಮಾಗಳ ಆಯ್ಕೆಯಲ್ಲಿ ಏನಿದೆ?” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ನನಗೆ ಈಗಲೂ ನೆನಪಿದೆ ನವಾಜುದ್ದೀನ್ ಸಿದ್ದಿಕಿ ಅವರಿಗೆ ರೊಮ್ಯಾಂಟಿಕ್‌ ಮೂವಿಗಳನ್ನು ಮಾಡುವುದು ಇಷ್ಟವೆಂದು ಒಮ್ಮೆ ಹೇಳಿದ್ದರು” ಎಂದು ಕಮೆಂಟ್‌ ಮಾಡಿದ್ದಾರೆ. “ಇನ್ಮುಂದೆ ಸಿದ್ದಿಕಿ ಅವರನ್ನು ಸಹಿಸಲು ಆಗುವುದಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಕಂಗನಾ ರಣಾವತ್‌ ನಿರ್ಮಾಣ ಮಾಡಿರುವ ʼʼಟಿಕು ವೆಡ್ಸ್ ಶೇರುʼʼ ಸಿನಿಮಾ ಇದೇ ಜೂ.23 ರಂದು ಅಮೇಜಾನ್‌ ಪ್ರೈಮ್‌ ನಲ್ಲಿ ಸ್ಟ್ರೀಮ್‌ ಆಗಲಿದೆ.

Leave a Reply

Your email address will not be published. Required fields are marked *