ಬೀದಿನಾಯಿ ದಾಳಿಯಿಂದ ಸಾವನ್ನಪ್ಪಿರುವ 11 ವರ್ಷದ ನಿಹಾಲ್ ನೌಶಾದ್ ಎಂಬ ಬಾಲಕನ ಕುಟುಂಬಕ್ಕೆ ಕೇರಳ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ತಿರುವನಂತಪುರಂ: ಸಾವನ್ನಪ್ಪಿರುವ ಕಣ್ಣೂರಿನ ಮುಜಪ್ಪಿಲಂಗಾಡ್‌ 11 ವರ್ಷದ ನಿಹಾಲ್ ನೌಶಾದ್ ಎಂಬ ಬಾಲಕನ ಕುಟುಂಬಕ್ಕೆ ಇಂದು (ಜೂನ್​​.27) ನಡೆದ ಕೇರಳ ಸಚಿವ ಸಂಪುಟ ಸಭೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದೆ. ಬಾಲಕನ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಹಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ನಿಹಾಲ್‌ನ ಸಾವಿನ ಕೆಲವು ದಿನಗಳ ನಂತರ, ಮುಜಪ್ಪಿಲಂಗಾಡ್‌ನಲ್ಲಿ ಬೀದಿ ನಾಯಿ ದಾಳಿಯಿಂದ ಮತ್ತೊಬ್ಬ ಶಾಲಾ ಬಾಲಕಿ ಜಾನ್ವಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಳೆದ ವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ರೇಬಿಸ್ ಸೋಂಕಿನಿಂದ ಸಾವನ್ನಪ್ಪಿದ ಕೋಝಿಕ್ಕೋಡ್ ಮೂಲದ ಶೀಬಾಕುಮಾರಿ ಅವರ ಕುಟುಂಬಕ್ಕೆ ಕೇರಳ ಸರ್ಕಾರ 2 ಲಕ್ಷ ರೂ. ನೀಡಲಾಗಿದೆ.

ನಿಹಾಲ್ ನೌಶಾದ್ ಮೇಲೆ ನಾಯಿಗಳ ದಾಳಿ

ಕೇರಳದ ಕಣ್ಣೂರು ಜಿಲ್ಲೆಯ ಮುಜಪ್ಪಿಲಂಗಾಡ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವವಾಗಿ ಭಾನುವಾರ ರಾತ್ರಿ ಪತ್ತೆಯಾಗಿದ್ದಾನೆ ಬೀದಿನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕ, ವಾಕ್ ದೋಷದಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕ ತನ್ನ ಮನೆಯಿಂದ ನಾಪತ್ತೆಯಾಗಿದ್ದನು. ಬಾಲಕ ಆಟವಾಡಲು ಹೋಗುತ್ತಿದ್ದ ಸಮೀಪದ ಪ್ಲಾಟ್‌ನಲ್ಲಿ ಹುಡುಕಿದ್ದಾರೆ. ಅಲ್ಲಿ ಆತ ನೆಲದ ಮೇಲೆ ಬಿದ್ದಿದ್ದು, ರಕ್ತಸ್ರಾವವಾಗುತ್ತಿರುವುದು ಪತ್ತೆಯಾಗಿಲ್ಲ. ತಕ್ಷಣವೇ ರಾತ್ರಿ 8.30 ರ ಹೊತ್ತಿಗೆ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದ್ದಾರೆ,

ಮರಣೋತ್ತರ ಪರೀಕ್ಷೆ ಬಳಿಕ ನಿಹಾಲ್ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಬೀದಿ ನಾಯಿಗಳ ಹಿಂಡು ದಾಳಿಯಲ್ಲಿ ಅವರ ತೊಡೆಯ ಒಂದು ಭಾಗವನ್ನು ತಿಂದಿದೆ. ಘಟನೆಯ ನಂತರ, ಸ್ಥಳೀಯ ಸಂಸ್ಥೆಯು ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿಯಲು ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *