BBMP: ರಾಜಕಾಲುವೆ ಒತ್ತುವರಿ ಎಂದು ಗುರುತಿಸಿ ತೆರವುಗೊಳಿಸುವುದಕ್ಕೆ ತಹಶೀಲ್ದಾರ್ ಆದೇಶ ನೀಡಿದ್ದಾರೆ. ಒತ್ತುವರಿದಾರರಿಗೆ ಬಿಬಿಎಂಪಿ ಅಧಿಕಾರಿಗಳಿಂದ ತೆರವುಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ

Demolition Drive: ಇಂದು ಘರ್ಜಿಸಲಿದೆ ಬುಲ್ಡೋಜರ್, ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ಮತ್ತೆ ಶುರು

ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ಮತ್ತೆ ಶುರು

google-news-icon

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತೆ ಬುಲ್ಡೋಜರ್ ಘರ್ಜಿಸಲಿದೆ. ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) ಕಡೆಯಿಂದ 9 ಗಂಟೆಯ ಬಳಿಕ ತೆರವು ಕಾರ್ಯ (anti-encroachment drive and demolish) ಶುರುವಾಗಲಿದ್ದು, ಒತ್ತುವರಿ ತೆರುವುದಾರರಿಗೆ ಪಾಲಿಕೆ ಬಿಗ್ ಶಾಕ್ ನೀಡಿದೆ. ಮಹಾದೇವಪುರ (Mahadevapura) ಹಾಗೂ ಕೆ ಆರ್ ಪುರಂ (KR Puram) ಎರಡು ಕಡೆ ಜೆಸಿಬಿಗಳು ಘರ್ಜಿಸಲಿವೆ. ಪಾಲಿಕೆಯು ಸದ್ಯಕ್ಕೆ ಒಟ್ಟು 571 ಕಡೆ ಬೆಂಗಳೂರಿನಲ್ಲಿ ನಡೆದಿರುವ ಅಕ್ರಮ ಒತ್ತುವರಿಯ ವರದಿ ಸಿದ್ದಪಡಿಸಿದೆ.

ಒಟ್ಟಾರೆಯಾಗಿ ಪಾಲಿಕೆಯ ಎಂಟು ವಲಯಗಳಲ್ಲಿ 571 ಕಡೆ ಒತ್ತುವರಿಯ ಬಗ್ಗೆ ಸರ್ವೆ ವರದಿ ಪಡೆದು ಕಾರ್ಯಚರಣೆ ನಡೆಯಲಿದೆ. ಇಂದಿನಿಂದ ಎರಡು ವಲಯಗಳಲ್ಲಿ ಪಾಲಿಕೆಯಿಂದ ತೆರವು ಕಾರ್ಯಚರಣೆ ನಡೆಯಲಿದೆ. ಮಹಾದೇವಪುರ ಹಾಗೂ ಕೆ ಆರ್ ಪುರಂ ಎರಡು ಕ್ಷೇತ್ರದಲ್ಲಿ ಎರಡು ಕಡೆ ತೆರವು ನಡೆಯಲಿದೆ. ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆಯಲಿದೆ. ಹೊಯ್ಸಳ ನಗರದಲ್ಲಿ ರಾಜಕಾಲುವೆ ತೆರವು ಮಾಡಿಕೊಂಡು ಅಂಗಡಿ ಮಳಿಗೆ ನಿರ್ಮಿಸಲಾಗಿದ್ದು ಇಂದು ಅದರ ತೆರವು ಕಾರ್ಯಚರಣೆ ನಡೆಯಲಿದೆ.

ರಾಜಕಾಲುವೆ ಒತ್ತುವರಿ ಎಂದು ಗುರುತಿಸಿ ತೆರವುಗೊಳಿಸುವುದಕ್ಕೆ ತಹಶೀಲ್ದಾರ್ ಆದೇಶ ನೀಡಿದ್ದಾರೆ. ಒತ್ತುವರಿದಾರರಿಗೆ ಬಿಬಿಎಂಪಿ ಅಧಿಕಾರಿಗಳಿಂದ ತೆರವುಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ, ಹೀಗಾಗಿ ಇಂದು ಮಹದೇವಪುರದಲ್ಲಿ ಜೆಸಿಬಿ ಘರ್ಜನೆ ಕೇಳಿಬರುವುದು ಖಚಿತವಾಗಿದೆ.

ಇನ್ನು ಮಹಾದೇವಪುರ ವಲಯದ ಪೈಕ್ ಗಾರ್ಡ್‌ನಲ್ಲಿ ಒತ್ತುವರಿ ತೆರವು ನಡೆಯಲಿದೆ. ಅನಧಿಕೃತವಾಗಿ ಪಿ.ಜಿ. ಕಟ್ಟಡ, ಕಾಂಪೌಂಡ್ ನಿರ್ಮಿಸಲಾಗಿದ್ದು ಒಟ್ಟು 20 ಕಟ್ಟಡಗಳಿಂದ ಒತ್ತುವರಿ ಆಗಿರುವುದು ಗುರುತಿಸಲಾಗಿದೆ. ಇದನ್ನೆಲ್ಲ ಇಂದು ಪಾಲಿಕೆ ತೆರವು ಮಾಡಲಿದೆ. ಮಹಾದೇವಪುರ ವಿಭಾಗದ ಮುನೇಕೊಳಲು ಹಾಗೂ ಪೈಸ್ ಗಾರ್ಡನ್ ಲೇಔಟ್ ಹೊರಮಾವು ಬಡವಾಣೆಯ ಹೊಯ್ಸಳ ಲೇಔಟ್ ನಲ್ಲಿ ತೆರವು ನಡೆಯಲಿದೆ.

Leave a Reply

Your email address will not be published. Required fields are marked *