ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನ ಆಕೆಯ ಗಂಡ ಯಲ್ಲಪ್ಪ ಕಸೊಳ್ಳಿ ಎಂಬಾತ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ. ರಮೇಶ್ ಗುಂಜಗಿ(24) ಕೊಲೆಯಾದ ಯುವಕ.

ಬೆಳಗಾವಿ: ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನ ಆಕೆಯ ಗಂಡ ಯಲ್ಲಪ್ಪ ಕಸೊಳ್ಳಿ ಎಂಬಾತ ಬರ್ಬರವಾಗಿ ಕೊಲೆ(Murder) ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ(Yaragatti) ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ. ರಮೇಶ್ ಗುಂಜಗಿ(24) ಕೊಲೆಯಾದ ಯುವಕ. ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ್ ಗುಂಜಗಿ, ಎರಡು ತಿಂಗಳ ಹಿಂದೆ, ಮನೆ ಪಕ್ಕದ ಸಾವಾಂಕ್ಕಾ ಎಂಬುವವರ ಜತೆಗೆ ಸಂಬಂಧವಿಟ್ಟುಕೊಂಡಿದ್ದನಂತೆ. ಈ ವಿಚಾರ ಗೊತ್ತಾಗಿ ಗಂಡ ಯಲ್ಲಪ್ಪ ಕಸೊಳ್ಳಿ ಮತ್ತು ಆತನ ಗೆಳೆಯರು ಸೇರಿ ರಮೇಶ್ ಎಂಬಾತನನ್ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ಅನೈತಿಕ ಸಂಬಂಧ ಗೊತ್ತಾಗಿ ತಿಂಗಳ ಹಿಂದೆ ರಾಜಿ ಪಂಚಾಯಿತಿ

ಇನ್ನು ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ರಮೇಶ್ ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ ಎರಡೂವರೆ ಲಕ್ಷ ದಂಡ ಕೂಡ ಕೊಟ್ಟಿದ್ದ. ಈ ವೇಳೆ ಸಾಂವಕ್ಕಾ ಗಂಡನನ್ನ ಬಿಟ್ಟು ರಮೇಶ್ ಮನೆಗೆ ಬಂದಿದ್ದಳು. ಹೀಗೆ ಬಂದು 15 ದಿನಕ್ಕೆ ಮತ್ತೆ ಗಂಡನ ಜತೆಗೆ ಸಂಪರ್ಕಕ್ಕೆ ಬಂದು, ತವರು ಮನೆ ಸೇರಿದ್ದಳು. ಇದೀಗ ರಮೇಶ್ ಬಿಟ್ಟು ಬಂದ ಸಾಂವಕ್ಕಾ, ಗಂಡನ ಜತೆಗೆ ಸೇರಿಕೊಂಡು ಜೊತೆಗೆ ಆತನ 6 ಜನ ಸೇರಿ ಕೊಲೆ ಮಾಡಿಸಿದ್ದಾರೆಂದು ಕೊಲೆಯಾದ ರಮೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಗೂಡ್ಸ್​ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

ಮಂಡ್ಯ: ಗೂಡ್ಸ್​ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ವೃತ್ತದ ಬಳಿ ನಡೆದಿದೆ. ಮರಿಲಿಂಗಯ್ಯ(65) ಮೃತ ವ್ಯಕ್ತಿ. ಬಸ್​ನಿಂದ ಇಳಿದು ರಸ್ತೆ ದಾಟುವಾಗ ಗೂಡ್ಸ್​ ವಾಹನ ಡಿಕ್ಕಿಯಾಗಿತ್ತು. ಈ ವೇಳೆ ಮರಿಲಿಂಗಯ್ಯ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಹಲಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *