ಹೈದರಾಬಾದ್​: ಅರ್ಜುನ್​ ರೆಡ್ಡಿ ಸಿನಿಮಾ ಬಿಡುಗಡೆಯಾದಾಗಿನಿಂದ ನಟ ವಿಜಯ್​ ದೇವರಕೊಂಡ ವಿರುದ್ಧ ನಟಿ, ನಿರೂಪಕಿ ಅನಸೂಯ ಭಾರದ್ವಜ್​ ಭಾರೀ ಅಸಮಾಧಾನ ಹೊಂದಿದ್ದಾರೆ.

ಅರ್ಜುನ್​ ರೆಡ್ಡಿ ಸಿನಿಮಾ ಸೂಪರ್​ ಹಿಟ್​​ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್​ ಕೂಡ ಒಬ್ಬರು. ಅರ್ಜುನ್​ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್​ ಆ ಡೈಲಾಗ್​ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್​ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ವಿಜಯ್​ ಅವರ ಲೈಗರ್​ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್​ ಮಾಡುವ ಮೂಲಕ ಮತ್ತೆ ಅನಸೂಯ ವಿಜಯ್​ಗೆ ತಿರುಗೇಟು ನೀಡಿದ್ದರು. ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್​ ಮಾಡಿದ್ದರು.

ಸಮಯ ಸಿಕ್ಕಾಗೆಲ್ಲ‘ ವಿಜಯ್​ ವಿರುದ್ಧ ಅನಸೂಯ ವಾಗ್ದಾಳಿ ನಡೆಸುವುದರಿಂದ ವಿಜಯ್​ ಅಭಿಮಾನಿಗಳಿಗೆ ಅನಸೂಯಾರನ್ನು ಕಂಡರೆ ಆಗುವುದಿಲ್ಲ. ಆಂಟಿ ಎಂದು ಕಾಮೆಂಟ್​ ಮಾಡುವುದಲ್ಲದೇ ಕೆಟ್ಟ ಪದಗಳಿಂದ ಅನಸೂಯ ಅವರನ್ನು ಸದಾ ನಿಂದಿಸುತ್ತಿರುತ್ತಾರೆ.

ವಿಜಯ್​ ವಿರುದ್ಧ ಗಂಭೀರ ಆರೋಪ

ತಾಜಾ ಸಂಗತಿ ಏನೆಂದರೆ, ಅನಸೂಯ ಅವರು ನಟ ವಿಜಯ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅನಸೂಯ, ವಿಜಯ್​ ಅಭಿಮಾನಿಗಳ ಜೊತೆಗೆ ಶೀತಲ ಸಮರ ಆರಂಭವಾದಾಗಿನಿಂದ ಸಾಕಷ್ಟು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರಂತೆ. ಅಭಿಮಾನಿಗಳ ನಡೆಯ ಬಗ್ಗೆ ವಿಜಯ್​ಗೆ ಗೊತ್ತಿದೆಯೋ? ಇಲ್ಲವೋ? ಆದರೆ, ವಿಜಯ್​ ಆಪ್ತರೊಬ್ಬರ ಪ್ರಕಾರ, ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲು ವಿಜಯ್​ ಹಣ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ನನಗೆ ಸಾಕಾಗಿ ಹೋಗಿದೆ. ಇನ್ನು ಮುಂದೆ ವಿಜಯ್​ ಬಗ್ಗೆಯಾಗಲಿ ಆತನ ನಟನೆಯ ಬಗ್ಗೆಯಾಗಲಿ ಮಾತನಾಡದಿರಲು ನಿರ್ಧರಿಸಿದ್ದೇನೆ ಎಂದು ಅನಸೂಯ ತಿಳಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *