ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ 2013ರ ಮೇ 31ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ರಿಲೀಸ್ ಆಗಿ ಈಗ 10 ವರ್ಷ ಕಳೆದಿದೆ.ಇದನ್ನು ಸಂಭ್ರಮಿಸಲು ಚಿತ್ರತಂಡ ಒಂದೆಡೆ ಸೇರಿತ್ತು. ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಅವರನ್ನು ತಬ್ಬಿ ನಿಂತಿದ್ದರು ಅನ್ನೋದು ವಿಶೇಷ.ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರನಿಗೋಸ್ಕರ ದೀಪಿಕಾ ಕತ್ತಿನ ಹಿಂಭಾಗದಲ್ಲಿ ಆರ್​ಕೆ ಎಂದು ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ಆದರೆ, ಇವರ ಸಂಬಂಧ 2009ರಲ್ಲಿ ಮುರಿದು ಬಿತ್ತು.ಆ ಬಳಿಕವೂ ಈ ಜೋಡಿ ಒಟ್ಟಾಗಿ ಸಿನಿಮಾ ಮಾಡಿದೆ. ಆ ಪೈಕಿ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಕೂಡ ಒಂದು. ಈ ಚಿತ್ರ ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ.‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಕಲಾವಿದರಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಕಲ್ಕಿ ಕೇಕ್ಲಾ, ಆದಿತ್ಯ ರಾಯ್ ಕಪುರ್, ನಿರ್ದೇಶಕ ಅಯಾನ್ ಮುಖರ್ಜಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಒಂದೆಡೆ ಸೇರಿದ್ದಾರೆ.