ದೊಡ್ಡ ಗೆಲುವು ಸಿಕ್ಕ ಬಳಿಕ ಅದನ್ನು ಕಾಪಾಡಿಕೊಳ್ಳೋದು ಚಾಲೆಂಜ್. ಗೆದ್ದ ಬಳಿಕ ಸಾಲು ಸಾಲು ಸೋಲು ಕಂಡ ಅನೇಕರಿದ್ದಾರೆ. ಈ ಕಾರಣದಿಂದಲೇ ಯಶ್ ಅವರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Yash) ಅವರ 19ನೇ ಸಿನಿಮಾ ಯಾವುದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಈ ಸಿನಿಮಾ ಬಗ್ಗೆ ಮೂಡಿರುವ ಪ್ರಶ್ನೆಗಳು ಹಲವು. ಈ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಹೀಗಿರುವಾಗಲೇ ಯಶ್ ಅವರ ಮುಂದಿನ ಸಿನಿಮಾ ಕುರಿತು ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ. ಅವರು ಕಳೆದ ಆರು ತಿಂಗಳಿಂದ ಯಾವುದೇ ಕಥೆ ಕೇಳುತ್ತಿಲ್ಲವಂತೆ! ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ ‘Yash19’ ಸಿನಿಮಾ ಫೈನಲ್ ಆಗಿ ಆರು ತಿಂಗಳೇ ಕಳೆದಿವೆ ಅನ್ನೋದು ವಿಶೇಷ.
ಒಂದು ದೊಡ್ಡ ಹಿಟ್ ಸಿಕ್ಕಿತು ಎಂದರೆ ನಿರ್ಮಾಪಕರು, ನಿರ್ದೇಶಕರು ನಟನ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಹೀರೋ ಕೇಳಿದಷ್ಟು ಸಂಭಾವನೆ ಕೊಡೋಕೆ ರೆಡಿ ಇರುತ್ತಾರೆ. ಆದರೆ, ದೊಡ್ಡ ಗೆಲುವು ಸಿಕ್ಕ ಬಳಿಕ ಅದನ್ನು ಕಾಪಾಡಿಕೊಳ್ಳೋದು ಚಾಲೆಂಜ್. ಗೆದ್ದ ಬಳಿಕ ಸಾಲು ಸಾಲು ಸೋಲು ಕಂಡ ಅನೇಕರಿದ್ದಾರೆ. ಈ ಕಾರಣದಿಂದಲೇ ಯಶ್ ಅವರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು 19ನೇ ಸಿನಿಮಾ ಫೈನಲ್ ಮಾಡಿದ್ದು, ಶೀಘ್ರವೇ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡಲಿದ್ದಾರೆ.
ಯಶ್ ಆರು ತಿಂಗಳ ಹಿಂದೆಯೇ ಸಿನಿಮಾ ಫೈನಲ್ ಮಾಡಿದ್ದಾರೆ. ಆ ಬಳಿಕ ಅದರ ಕೆಲಸಗಳಲ್ಲಿ ಯಶ್ ತೊಡಗಿಕೊಂಡರು ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಅವರು, ‘ನಾನು ಒಂದು ದಿನ ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ’ ಎಂದಿದ್ದರು. ಈ ಮೂಲಕ ಯಶ್ ಕಳೆದ ಆರು ತಿಂಗಳಿಂದ ಮುಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಯಶ್ ಕಳೆದ ಆರು ತಿಂಗಳಲ್ಲಿ ಯಾವುದೇ ಹೊಸ ಕಥೆಯನ್ನು ಕೇಳಿಲ್ಲ. ಇದಕ್ಕೂ ಕಾರಣ ಇದೆ. ಒಮ್ಮೆಲೇ ಎರಡು-ಮೂರು ಸಿನಿಮಾ ಒಪ್ಪಿಕೊಂಡರೆ ಯಾವ ಚಿತ್ರದ ಮೇಲೂ ಸರಿಯಾಗಿ ಗಮನ ಹರಿಸಲು ಆಗುವುದಿಲ್ಲ. ಇದೇ ಉದ್ದೇಶದಿಂದಲೇ ಅವರ ಗಮನ ಸಂಪೂರ್ಣವಾಗಿ ‘Yash19’ ಮೇಲಿದೆ. ಕಳೆದ ಆರು ತಿಂಗಳಿಂದ ಅವರು ಯಾವುದೇ ಹೊಸ ಕಥೆ ಕೇಳಿಲ್ಲ.
ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಅವರು ಬಾಲಿವುಡ್ನಲ್ಲಿ ರಾಮಾಯಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಲು ಯಶ್ಗೆ ಆಫರ್ ನೀಡಲಾಗಿತ್ತು ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈಗ ಯಶ್ ಆರು ತಿಂಗಳಿಂದ ಹೊಸ ಕಥೆಯನ್ನೇ ಕೇಳಿಲ್ಲ ಎಂದಾದರೆ ಆ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎನ್ನುವ ಪ್ರಶ್ನೆ ಮೂಡಿದೆ.