Swiggy : ”ನಾನೊಬ್ಬ ಬಿ.ಟೆಕ್​ ಪದವೀಧರ. ನನ್ನ ಫ್ಲ್ಯಾಟ್​ಮೇಟ್​ನಿಂದಾಗಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದೆ. ಒಂದು ಡೆಲಿವರಿಗೆ ರೂ. 20-25 ಪಡೆಯುತ್ತಿದ್ದೇನೆ. ವಾರದಿಂದ ನೀರು, ಚಹಾದ ಮೇಲೆ ಬದುಕುತ್ತಿದ್ದೇನೆ.” ಸಾಹಿಲ್​ ಸಿಂಗ್​

Viral: 3 ಕಿ.ಮೀ ನಡೆದು ಫುಡ್ ಡೆಲಿವರಿ ಮಾಡುತ್ತಿದ್ದನಿಗೆ ಹೊಸ ಕೆಲಸ ಕೊಡಿಸಿದ ನೆಟ್ಟಿಗರು

ಲಿಂಕ್ಡ್​ ಇನ್​ ಸಮುದಾಯದ ಮೂಲಕ ಹೊಸ ಕೆಲಸ ಪಡೆದ ಸಾಹಿಲ್​ ಸಿಂಗ್​

Delivery Agent: ನಿಗದಿತ ಸಮಯಕ್ಕಿಂತ ತಡವಾಗಿ ಫುಡ್​ ಡೆಲಿವರಿಯಾದಾಗ ಗ್ರಾಹಕರು ಅನುಮಾನದಿಂದ ಸ್ವಿಗ್ಗಿ ಡೆಲಿವರಿ ಏಜೆಂಟ್​ನನ್ನು (Swiggy) ವಿಚಾರಿಸಿದ್ದಾರೆ. ಆಗ ಆತ, ಕ್ಷಮಿಸಬೇಕು, ತನ್ನ ಬಳಿ ಓಡಾಟಕ್ಕೆ ದ್ವಿಚಕ್ರವಾಹನ ಇಲ್ಲವೆಂದೂ ಮತ್ತು ತಾನು ಈ ಡೆಲಿವರಿಗಾಗಿ 3 ಕಿ.ಮೀ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಆಗ ಗ್ರಾಹಕರು ಅವನ ಬಗ್ಗೆ ಕಾಳಜಿವಹಿಸಿ ಅವನ ಪೂರ್ವಾಪರದ ಬಗ್ಗೆ ಕೇಳಿದ್ಧಾರೆ. ಅಷ್ಟೇ ಅಲ್ಲ ಹೊಸ ಉದ್ಯೋಗವನ್ನು ಪಡೆಯುವಲ್ಲಿ ಸಹಾಯವನ್ನೂ ಮಾಡಿದ್ದಾರೆ.

ಫ್ಲ್ಯಾಶ್​ ಎಂಬ ಟೆಕ್​ ಕಂಪೆನಿಯ ಮಾರ್ಕೆಟಿಂಗ್​ ಮ್ಯಾನೇಜರ್​ ಪ್ರಿಯಾಂಶಿ ಚಂದೇಲ್, ಸ್ವಿಗ್ಗಿ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿದ್ದಾರೆ. ಆಗ ಡೆಲಿವರಿ ಏಜೆಂಟ್​ ಸಾಹಿಲ್​ ಸಿಂಗ್​ ಬಹಳ ತಡವಾಗಿಯೇ ಅದನ್ನು ತಲುಪಿಸಿದಾಗ ಕಾರಣವನ್ನು ಕೇಳಿದ್ದಾರೆ. ತನ್ನ ಫ್ಲ್ಯಾಟ್​ಮೇಟ್​ನಿಂದಾಗಿ ನಾನು ಸಾಲಕ್ಕೆ ಬಿದ್ದು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಾಗಾಗಿ ನಾನೀಗ ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅವನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಅವನಿಗೆ ಹೊಸ ಕೆಲಸ ಕೊಡಿಸುವ ಬಗ್ಗೆ ಆಲೋಚಿಸಿದ್ಧಾರೆ.

‘ಬಿ.ಟೆಕ್ ಪದವೀಧರನಾದ ನಾನು ಬೈಜೂಸ್ (Byju’s)​ ಮತ್ತು ನಿಂಜಾಕಾರ್ಟ್​ನ (Ninjacart) ಹಳೆಯ ಉದ್ಯೋಗಿ. ಅಲ್ಲಿ ಕೆಲಸ ಕಳೆದುಕೊಂಡ ನಂತರ ಸ್ವಿಗ್ಗೀ ಕಂಪೆನಿಯಲ್ಲಿ ಡೆಲಿವರಿ ಏಜೆಂಟ್​ನಾಗಿ ಸೇರಿಕೊಂಡೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಒಂದು ಡೆಲಿವರಿಗೆ ರೂ. 20-25 ಕಮೀಷನ್​ ಪಡೆಯುತ್ತಿದ್ದೇನೆ. ನನ್ನ ಬಳಿ ಬೈಕ್​ ಕೂಡ ಇಲ್ಲ. ವಾರದಿಂದ ನಾನು ಊಟ ಮಾಡದೆ ಕೇವಲ ನೀರು ಮತ್ತು ಚಹಾದ ಮೇಲೆ ಬದುಕುತ್ತಿದ್ದೇನೆ. ಈ ಮೊದಲು ನಾನು ತಿಂಗಳಿಗೆ ರೂ. 25,000 ಗಳಿಸುತ್ತಿದ್ದೆ. ನನಗೀಗ 30 ವರ್ಷ. ನನಗೂ ವಯಸ್ಸಾದ ತಂದೆತಾಯಿಯರಿದ್ದಾರೆ. ಅವರಿಂದ ಹಣ ಕೇಳುವುದು ಸಾಧ್ಯವಿಲ್ಲ’ ಎಂದಿದ್ದಾನೆ.

ಆಗ ಪ್ರಿಯಾಂಶಿ ಸಾಹಿಲ್​ಗೆ ಕುಡಿಯಲು ನೀರು ಕೊಟ್ಟು ರೂ. 500 ಕೈಗಿಟ್ಟಿದ್ದಾರೆ. ನಂತರ ಅವರು, ‘ಆಫೀಸ್ ಬಾಯ್, ಅಡ್ಮಿನ್, ಕಸ್ಟಮರ್​ ಸಪೋರ್ಟ್​ ಇತ್ಯಾದಿ ಕೆಲಸಗಳಿಗೆ ಅವಕಾಶವಿದ್ದರೆ ದಯವಿಟ್ಟು ಇವರಿಗೆ ಸಹಾಯ ಮಾಡಿ’  ಎಂದು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಹಾಕಿದ್ಧಾರೆ. ಜೊತೆಗೆ, ಆತನ ಭಾವಚಿತ್ರ, ರೆಸ್ಯೂಮ್​ ಮತ್ತು ಶೈಕ್ಷಣಿಕ ಅಂಕಪಟ್ಟಿಗಳ ಪುರಾವೆಗಳನ್ನೂ ಲಗತ್ತಿಸಿದ್ದಾರೆ.

ಈ ಪೋಸ್ಟ್​ಗೆ ಸುಮಾರು 14,000 ದಷ್ಟು ಪ್ರತಿಕ್ರಿಯೆಗಳು ಒದಗಿವೆ. 300ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಅನ್ನು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನಂತರ ಸಾಹಿಲ್​ಗೆ ಕೆಲಸ ಸಿಕ್ಕಿದೆ, ಸಹಾಯ ಮಾಡಿದ ಲಿಂಕ್​ಡಿನ್​ ಸಮುದಾಯಕ್ಕೆ ಧನ್ಯವಾದ ಎಂದು ಪ್ರಿಯಾಂಶಿ ಮತ್ತೊಂದು ಪೋಸ್ಟ್​ ಅಪ್​ಡೇಟ್​ ಮಾಡಿದ್ದಾರೆ.

Leave a Reply

Your email address will not be published. Required fields are marked *