Video Viral: ಮಹಾರಾಷ್ಟ್ರದಲ್ಲಿ ಕಳಪೆ ರಸ್ತೆ ಕಾಮಗಾರಿ, ಟಾರನ್ನು ಬರಿಗೈಯಲ್ಲಿ ಕಿತ್ತು ಹಾಕಿದ ಜನ

ಪ್ರತಿಯೊಂದು ರಾಜ್ಯದಲ್ಲೂ, ಹಳ್ಳಿಗಳಲ್ಲಿಯೂ ಈ ರಸ್ತೆಯದೇ ದೊಡ್ಡ ಸಮಸ್ಯೆ, ಚುನಾವಣೆ, ಅಥವಾ ಯಾರಾದರೂ ಮಂತ್ರಿಗಳು ಬರುತ್ತಾರೆ ಎಂದರೆ ಒಂದು ಬಾರಿಗೆ ಕಳಪೆ ರಸ್ತೆ ದುರಸ್ತಿ ಮಾಡಿ ಬೀಡುತ್ತಾರೆ, ಇದೀಗ ಇಂತಹದೇ ಕಳಾಪೆ ರಸ್ತೆ ಕಾಮಗಾರಿಯೊಂದು ಮಾಡಿ, ಜನರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ, ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಈ ವೀಡಿಯೊದಲ್ಲಿ ಗ್ರಾಮಸ್ಥರು ತಮ್ಮ ಕೈಗಳಿಂದ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಎತ್ತುತ್ತಿರುವ ತೋರಿಸುತ್ತದೆ. ವರದಿಗಳ ಪ್ರಕಾರ ಈ ಘಟನೆ ಮಹಾರಾಷ್ಟ್ರದ ಗ್ರಾಮವೊಂದರದ್ದು ಎಂದು ಹೇಳಲಾಗಿದೆ. 38 ಸೆಕೆಂಡುಗಳ ಕ್ಲಿಪ್‌ನಲ್ಲಿ ಕಾರ್ಪೆಟ್ ತರಹದ ಟಾರ್​​​​​ನ್ನು​​ ನೇರವಾಗಿ ರಸ್ತೆಯ ಕೆಳಗೆ ಇರಿಸಲಾಗಿದೆ, ಇದನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಕ್ಲಿಪ್‌ನಲ್ಲಿ ರಾಣಾ ಠಾಕೂರ್ ಎಂದು ಹೆಸರಿಸಿರುವ ಸ್ಥಳೀಯ ಗುತ್ತಿಗೆದಾರನ ಕಳಪೆ ಕಾಮಗಾರಿ ಮಾಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಈ ಡಾಂಬರು ಕೈಯಲ್ಲಿ ಬರುತ್ತದೆ ಇದು “ಬೋಗಸ್” ಎಂದು ಸಾವರ್ಜನಿಕರು ಹೇಳಿದ್ದಾರೆ.

ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿರುವ ಪ್ರಕಾರ , ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ ಭಾಗವಾದ ಕರ್ಜತ್-ಹಸ್ತ್ ಪೋಖಾರಿಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪ್ರಧಾನಿ ಗ್ರಾಮೀಣ ರಸ್ತೆ ಯೋಜನೆ) ಅಡಿಯಲ್ಲಿ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ಗುತ್ತಿಗೆದಾರ ಹೇಳಿಕೊಂಡಿದ್ದಾನೆ ಎಂದು ಔಟ್‌ಲೆಟ್ ಹೇಳಿಕೊಂಡಿದೆ. ಆದರೆ, ವೀಡಿಯೋದಲ್ಲಿ ನೋಡಿದಂತೆ, ಇದು ತಾತ್ಕಾಲಿಕ ಪರಿಹಾರಕ್ಕಾಗಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸ್ಥಳೀಯರು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದು. ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ ಕಳಪೆ ಕಾಮಗಾರಿಯನ್ನು ಅನುಮೋದಿಸಿದ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರೆ.

ಮೇಕ್ ಇನ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಭಾರತವು ಸುಮಾರು 63.32 ಲಕ್ಷ ಕಿಲೋಮೀಟರ್‌ಗಳ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ ನಿರ್ಮಾಣವನ್ನು ಕಾರ್ಯಗತಗೊಳಿಸಲು ವಿವಿಧ ಏಜೆನ್ಸಿಗಳನ್ನು ಹೊಂದಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕೋಪಯೋಗಿ ಇಲಾಖೆಗಳು, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮತ್ತು ಇಂಡಿಯನ್ ಅಕಾಡೆಮಿ ಆಫ್ ಹೈವೇ ಇಂಜಿನಿಯರ್ಸ್ (IAHE) ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.