'The Trial' ಸೀರಿಸ್​ನಲ್ಲಿ ಕಾಜೋಲ್​: ಪ್ರಚಾರಕ್ಕಾಗಿ 'ಸೋಷಿಯಲ್​ ಮೀಡಿಯಾದಿಂದ ಬ್ರೇಕ್​' ಗಿಮಿಕ್​​

‘The Trial’ ಸೀರಿಸ್​ನಲ್ಲಿ ಕಾಜೋಲ್​: ಪ್ರಚಾರಕ್ಕಾಗಿ ‘ಸೋಷಿಯಲ್​ ಮೀಡಿಯಾದಿಂದ ಬ್ರೇಕ್​’ ಗಿಮಿಕ್​​

ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್​ ಪಡೆಯುವುದಾಗಿ ಹೇಳಿದ್ದು, ‘The Trial”ನ ಪ್ರಚಾರದ ಭಾಗವಾಗಿದೆ.

ಜೂನ್ 9 ರಂದು ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್​ ಪಡೆಯುವುದಾಗಿ ಘೋಷಿಸಿ ಅಭಿಮಾನಿಗಳ ಆತಂಕಕ್ಕೆ ಕಾರಣರಾದರು.

ಇನ್​ಸ್ಟಾಗ್ರಾಮ್​ನಿಂದ ಎಲ್ಲಾ ಪೋಸ್ಟ್‌ಗಳನ್ನು ಇದ್ದಕ್ಕಿದ್ದಂತೆ ಡಿಲೀಟ್​​ ಮಾಡುವ ಮೂಲಕ ಅಭಿಮಾನಿಗಳ ಆಶರ್ಯಕ್ಕೆ ಕಾರಣರಾದರು. ನಟಿಯ ಈ ವರ್ತನೆಗೆ ಹಲವು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದರೆ, ಕೆಲ ನೆಟ್ಟಿಗರು ‘ಪ್ರಚಾರದ ಗಿಮಿಕ್’ ಎಂದು ಕರೆದರು. ಇದೀಗ ನೆಟಿಜನ್​​ಗಳ ಊಹೆ ಸರಿಯಾಗಿದೆ. ​

ನಟಿ ಕಾಜೋಲ್ ತಮ್ಮ ಮುಂಬರುವ ವೆಬ್ ಸರಣಿ ‘ದಿ ಟ್ರಯಲ್’ನ ಶೀಘ್ರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ. ಕಾಜೋಲ್ ತಮ್ಮ ಹೊಸ ಸರಣಿ ”The Trial”ನಲ್ಲಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯ ಟ್ರೇಲರ್​ ಜೂನ್ 12ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಇದರ ಪ್ರಚಾರದ ಭಾಗವಾಗಿ ನಟಿ ನಿನ್ನೆ ಇನ್​​ಸ್ಟಾಗ್ರಾಮ್​ ಪೋಸ್ಟ್​ಗಳನ್ನೆಲ್ಲಾ ಡಿಲೀಟ್​ ಮಾಡಿ ಗಮನ ಸೆಳೆದಿದ್ದರು.

ಕಾಜೋಲ್​​ ರಹಸ್ಯಕರ ಪೋಸ್ಟ್: ನಟಿ ಕಾಜೋಲ್​​ ಇನ್​​ಸ್ಟಾಗ್ರಾಮ್​ನಲ್ಲಿ ನಿನ್ನೆ ಒಂದು ರಹಸ್ಯಕರ ಪೋಸ್ಟ್​​ ಶೇರ್ ಮಾಡಿದ್ದರು. ಆ ಪೋಸ್ಟ್​ಗೆ ‘ಸೋಷಿಯಲ್​ ಮೀಡಿಯಾದಿಂದ ಬ್ರೇಕ್​’ ಪಡೆಯುವುದಾಗಿ ಕ್ಯಾಪ್ಷನ್​ ಕೊಟ್ಟಿದ್ದರು. “ನನ್ನ ಜೀವನದ ಕಠಿಣ Trial ಒಂದನ್ನು ಎದುರಿಸುತ್ತಿದ್ದೇನೆ” ಎಂಬುದು ಪೋಸ್ಟ್​​ನಲ್ಲಿ ಬರೆದಿತ್ತು (Facing one of the toughest trials of my life). ಪ್ರತಿಭಾವಂತ ನಟಿಯ ಈ ಇನ್​ಸ್ಟಾ ಪೋಸ್ಟ್ ಮತ್ತು ಸ್ಟೋರಿ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ನಟಿ ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಹಳೆಯ 922 ಪೋಸ್ಟ್​​ಗಳು ಡಿಲೀಟ್​ ಆಗಿದ್ದವು. ಆದರೆ ಇಂದು ಆ ಎಲ್ಲಾ ಪೋಸ್ಟ್​ಗಳು ಸಹ ಕಾಜೋಲ್​​ ಅವರ ಅಧಿಕೃತ ಇನ್​ಸ್ಟಾ ಪೇಜ್​ನಲ್ಲಿ ಕಾಣಿಸಿಸುತ್ತಿವೆ.

ನಿನ್ನೆ ಸೋಷಿಯಲ್​ ಮೀಡಿಯಾದಲ್ಲಿ ಬ್ರೇಕ್​ ಪಡೆದ ಕಾಜೋಲ್​​, ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ನೀಲಿ ಬಣ್ಣದ ಸಾಧಾರಣ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ಯಾವುದೋ ಚಿಂತೆಯಲ್ಲಿರುವಂತೆ ಕಾಣುತ್ತಿದ್ದು. ಪಾಪರಾಜಿಗಳಿಗೆ ಸ್ಪಂದಿಸದೇ ಕಾರಿನ ಬಳಿ ವೇಗವಾಗಿ ನಡೆದು ಹೋದರು. ಸೋಷಿಯಲ್​ ಮೀಡಿಯಾದಿಂದ ಬ್ರೇಕ್​ ಘೋಷಣೆ ಬೆನ್ನಲ್ಲೇ ಪಾಪರಾಜಿ ಹಂಚಿಕೊಂಡ ಈ ವಿಡಿಯೋ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು.

ಅಭಿಮಾನಿಗಳು ನಟಿಗೆ ವರ್ಚುವಲ್​ ವೇದಿಕೆಯಲ್ಲೇ ಶಕ್ತಿ ತುಂಬಿದ್ದರೆ, ಹಲವರು ಇದು ಅವರ ಮುಂದಿನ ಸಿನಿಮಾ ಪ್ರಚಾರದ ಗಿಮಿಕ್​ ಎಂದು ಊಹಿಸಿದ್ದರು. ಕೊನೆಗೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರ ಊಹೆ ಸರಿಯಾಗಿದೆ. ಇಂದು ತಮ್ಮ ಮುಂದಿನ ಸೀರಿಸ್​ಗೆ ಸಂಬಂಧಿಸಿದ ಪೋಸ್ಟ್ ಶೇರ್ ಮಾಡಿದ್ದಾರೆ. ”The Trial” ಟ್ರೇಲರ್​ ಜೂನ್ 12ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಅನಾವರಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

‘ದಿ ಟ್ರಯಲ್’ ಅಮೇರಿಕನ್ ಕೋರ್ಟ್‌ರೂಮ್ ಸರಣಿಯ ಭಾರತೀಯ ರೂಪಾಂತರವಾಗಿದೆ. ಇದರಲ್ಲಿ ನಟಿ ಜೂಲಿಯಾನಾ ಮಾರ್ಗುಲೀಸ್ ಮಹಿಳಾ ವಕೀಲರಾಗಿ ನಟಿಸಿದ್ದಾರೆ. 2016ರಲ್ಲಿ ಬಿಡುಗಡೆ ಕಂಡ ಈ ಸರಣಿಯು 7 ಸೀಸನ್‌ಗಳನ್ನು ಹೊಂದಿದೆ. ಕಾಜೋಲ್ ನಟಿಸುತ್ತಿರುವ ದಿ ಟ್ರಯಲ್ ಅನ್ನು ಸುಪರ್ಣ್ ವರ್ಮಾ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ನಟಿ ಕಾಜೋಲ್​​ ತಮ್ಮ ಪತಿಯ ಕೇಸ್​​ನಲ್ಲಿ ವಕೀಲೆಯಾಗಿ ಹೋರಾಡುತ್ತಾರೆ.

Leave a Reply

Your email address will not be published. Required fields are marked *