ಎರಡು ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಈ ಅಪಘಾತ(Accident)ದಲ್ಲಿ ನಾಲ್ವರು ಮೃತಪಟ್ಟು 70ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Tamil Nadu Bus Accident: ಎರಡು ಖಾಸಗಿ ಬಸ್​ಗಳ ನಡುವೆ ಭೀಕರ ಅಪಘಾತ, 4 ಮಂದಿ ಸಾವು, 70 ಪ್ರಯಾಣಿಕರಿಗೆ ಗಾಯ

ಬಸ್ ಅಪಘಾತ

ಎರಡು ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಈ ಅಪಘಾತ(Accident)ದಲ್ಲಿ ನಾಲ್ವರು ಮೃತಪಟ್ಟು 70ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರು ಜಿಲ್ಲೆಯ ನೆಲ್ಲಿಕುಪ್ಪಂ ಬಳಿಯ ಪಟ್ಟಂಬಾಕ್ಕಂನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಡಲೂರು ಮತ್ತು ಪನ್ರುತಿ ನಡುವೆ ಎರಡು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಒಂದು ಬಸ್‌ನ ಮುಂಭಾಗದ ಟೈರ್ ಒಡೆದ ಪರಿಣಾಮ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ.

ಆಂಬ್ಯುಲೆನ್ಸ್ ಬರುವ ಮುನ್ನವೇ ಪ್ರಯಾಣಿಕರು ಗಾಯಾಳುಗಳನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಛತ್ತೀಸ್​ಗಢದಲ್ಲಿ ಬಸ್​ ಅಪಘಾತ 

ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ವೇಗವಾಗಿ ಬಂದ ಬಸ್(Bus) ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ  26 ಜನರು ಗಾಯಗೊಂಡಿದ್ದಾರೆ. ರೈಲ್ವೆ ಸೇತುವೆಯ ಮೇಲೆ ಸಂಭವಿಸಿದ ಬಸ್ ಅಪಘಾತದಲ್ಲಿ ಸುಮಾರು 26 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕ ವಾಹನ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿದ್ದರಿಂದ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *