ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್​​​​​ನಲ್ಲಿ ಬಂಡೆಯು ನೀರಿನಲ್ಲಿ ತೇಲುತ್ತಿದೆಯಾ ಅಥವಾ ಆಕಾಶದಲ್ಲಿ ತೇಲುತ್ತಿದೆಯಾ. ಸರಿಯಾದ ಉತ್ತರ ಯಾವುದು ಎಂದು ಕಂಡುಹಿಡಿಯಬಹುದೇ?

ಆಪ್ಟಿಕಲ್ ಇಲ್ಯೂಷನ್ ಇತ್ತೀಚಿನ ಸಾಮಾಜಿಕ ಮಾಧ್ಯಮದ ಟ್ರೆಂಡ್ ಆಗಿದೆ. ಜನರ ಗಮನ ಮತ್ತು ಮನಸ್ಸು ಚಂಚಲವಾಗಿರುವ ಈ ಯುಗದಲ್ಲಿ ಈ ಆಪ್ಟಿಕಲ್ ಇಲ್ಯೂಷನ್​​​​ಗಳು ನಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇವುಗಳು ನಮ್ಮ ಗ್ರಹಿಕೆಗೆ ಸವಾಲು ಹಾಕುವ ಮತ್ತು ನಮ್ಮ ವೀಕ್ಷಣಾ ಸಾಮರ್ಥ್ಯಗಳನ್ನು ಪರೀಕ್ಷೆಗೆ ಒಳಡಿಸುವ ಒಂದು ವಿಧವಾದ ದೃಶ್ಯಗಳಾಗಿವೆ. ಅದು ನಮ್ಮನ್ನು ಒಮ್ಮೆಲೆ ಗೊಂದಲಕ್ಕೀಡು ಮಾಡುತ್ತವೆ ಮತ್ತು ವಾಸ್ತವದೊಂದಿಗೆ ಹೊಂದಿಕೆಯಾಗದ ವಿಷಯಗಳು ಕಣ್ಣಿಗೆ ಕಾಣಿಸುವಂತೆ ಮಾಡುತ್ತವೆ. ನಾವು ಏನನ್ನಾದರೂ ಕಲಿಯಲು ಮತ್ತು ನಮ್ಮ ಕಣ್ಣಿನ ಜೊತೆಗೆ ಆಲೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಈ ರೀತಿಯ ಚಿತ್ರಗಳು ಸಹಾಯಕವಾಗಿದೆ. ಅಲ್ಲದೆ ಆಪ್ಟಿಕಲ್ ಇಲ್ಯೂಷನ್ ಆಟಗಳು ಒತ್ತಡ ಮತ್ತು ಆತಂಕವನ್ನು ಸಹ ನಿವಾರಿಸಲು ಸಹಾಯ ಮಾಡುತ್ತವೆ. ಇಂತಹ ಹಲವು ಪೋಸ್ಟ್​​​ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಇದೇ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಸಣ್ಣ ಬಂಡೆ ಕಲ್ಲೊಂದು ಗಾಳಿಯಲ್ಲಿ ತೇಲಾಡುತ್ತಿದೆಯೋ ಅಥವಾ ನೀರಿನಲ್ಲಿ ತೇಲುತ್ತಿದೆಯೇ ಎಂದು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ.

ಆಪ್ಟಿಕಲ್ ಇಲ್ಯೂಷನ್ ನಮ್ಮ ಮನಸ್ಸನ್ನು ಹೇಗೆ ಗೊಂದಲಿಸುತ್ತವೆ ಎಂಬುದಕ್ಕೆ ವೈರಲ್ ಆಗಿರುವ ಈ ಫೋಟೊ ಒಂದು ಉದಾಹರಣೆಯಾಗಿದೆ. ಈ ಚಿತ್ರವನ್ನು ಮೆಸ್ಸಿಮೊ (@Rainmaker1973) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೊದಲ್ಲಿ ಮೊದಲು ನೀವು ಗಾಳಿಯಲ್ಲಿ ತೇಲುತ್ತಿರುವ ಬಂಡೆಯನ್ನು ಕಾಣಬಹುದು. ಆದರೆ ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ ಬಂಡೆಯು ನೀರಿನಲ್ಲಿ ತೇಲುತ್ತಿದೆಯೇ ವಿನಃ ಗಾಳಿಯಲ್ಲಿ ಸುಳಿದಾಡುತ್ತಿಲ್ಲ ಎಂಬುದನ್ನು ಗಮನಿಸಬಹುದು.

ಟ್ವಿಟರ್​​​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ 12.3 ಮಿಲಿಯಲ್ ವೀಕ್ಷಣೆಗಳನ್ನು ಹಾಗೂ 82.3 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಇನ್ನು ಕಮೆಂಟ್ ವಿಭಾಗದಲ್ಲಿ ಹಲವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಆಷ್ಟಿಕಲ್ ಇಲ್ಯೂಷನ್​​​​ಗಳು ಮನಸ್ಸನ್ನು ಕೇಂದ್ರೀಕೃತಗೊಳಿಸುತ್ತವೆ ಮತ್ತು ಆಕರ್ಷಕವಾಗಿರುತ್ತವೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ನಾನು ನೀರಿನಲ್ಲಿರುವ ಬಂಡೆಯನ್ನು ನೋಡಿದೆ’ ಎಂದು ಹೇಳಿದ್ದಾರೆ. ಇನ್ನು ಅನೇಕರು ಈ ಬಂಡೆಯು ನೀರಿನಲ್ಲಿ ತೇಲುತ್ತಿದೆಯೇ ಹೊರತು ಗಾಳಿಯಲ್ಲಿ ಸುಳಿದಾಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಲು ಆಪ್ಟಿಕಲ್ ಭ್ರಮೆಯನ್ನು ದೀರ್ಘಕಾಲ ನೋಡಬೇಕಾಯಿತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *