ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷ ಕಳೆಯಲಿದೆ. ಅವರನ್ನು ಕಳೆದುಕೊಂಡಿರುವ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ನಟಿ ಮೇಘನಾ ರಾಜ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಪ್ರೀತಿಸಿ ಮದುವೆ ಆದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಇಂದು (ಜೂನ್ 7) ಅವರ ಪುಣ್ಯತಿಥಿ.

ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷ ಕಳೆಯಲಿದೆ. ಅವರನ್ನು ಕಳೆದುಕೊಂಡಿರುವ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

2020ರ ಜೂನ್ 7ರಂದು ಚಿರಂಜೀವಿಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ಮಧ್ಯಾಹ್ನದ ವೇಳೆಗೆ ಹೊರಬಿತ್ತು. ಬಳಿಕ ಅವರು ಮೃತಪಟ್ಟರು.

ಚಿರು ಮೃತಪಡುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಚಿರು ಮೃತಪಟ್ಟ ಕೆಲ ತಿಂಗಳ ನಂತರ ಮೇಘನಾಗೆ ಗಂಡುಮಗು ಜನಿಸಿತು.

ಮೇಘನಾ ರಾಜ್ ಹಾಗೂ ಚಿರು ಹಳೆಯ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.