ಬೆಂಗಳೂರು: ಹೆಸರು ಬದಲಾವಣೆಯ ವೀರ ಎಂದರೆ ಡಿ.ಕೆ. ಶಿವಕುಮಾರ್ ಎಂದು ಶಾಸಕ ಅಶ್ವತ್ಥ್ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ರಾಮನಗರ ಉಸ್ತುವಾರಿ ಸಚಿವರಾಗದೆ ಬೆಂಗಳೂರಿಗೆ ಬಂದಿದ್ದೀರಿ. ಜನರಿಗೆ ಒಳ್ಳೆಯದು ಮಾಡಲ್ಲ, ಆದರೆ ಕೆಟ್ಟದ್ದನ್ನಂತೂ ಮಾಡಬೇಡಿ. ಮಂತ್ರಿ ಆಗಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದೀರಿ. ಎಚ್.ಡಿ. ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲವಿದೆ ಎಂದರು.

೪ ಬಾರಿ ಸಾತನೂರು, ೪ ಬಾರಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ದೀರಿ. ಇಷ್ಟಾದರೂ ನಿಮ್ಮ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಡಿ.ಕೆ. ಶಿವಕುಮಾರ್‌ಗೆ ಇಷ್ಟು ವರ್ಷವಿಲ್ಲದ ಪರಿಜ್ಞಾನ ಈಗ ಬಂತಾ? ಎಂದು ಅಶ್ವತ್ಥ್ ನಾರಾಯಣ್ ಆರೋಪಿಸಿದರು.

ರಾಮನಗರಕ್ಕೆ ಹಲವರ ಕೊಡುಗೆ ಇದೆ. ಡಿ.ಕೆ. ಶಿವಕುಮಾರ್ ರಾಮದೇವರ ಬೆಟ್ಟಕ್ಕೆ ಒಂದು ಕಲ್ಲು ಎತ್ತಿಟ್ಟಿಲ್ಲ. ರಾಮನಗರಕ್ಕೆ ಪ್ರಧಾನಿ ಮೋದಿಯವರ ಕೊಡುಗೆ ಅಪಾರ, ನಿಮ್ಮ ಕೊಡುಗೆ ಏನೂ ಇಲ್ಲ ಎಂದರು.

Leave a Reply

Your email address will not be published. Required fields are marked *

Latest News