Shubman gill girlfriend Sara : ಯುವ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ದಿಲ್‌ ಕದ್ದ ಸುಂದರಿ ಯಾರು.? ಎಂಬ ಗೊಂದಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಹೊರತಾಗಿ ಸಾರಾ ಅಲಿ ಖಾನ್ ಮತ್ತು ಶುಭ್‌ಮನ್ ಗಿಲ್ ಪ್ರೀತಿಸುತ್ತಿದ್ದರು. ನಂತರ ಬ್ರೇಕ್‌ ಅಪ್‌ ಆಯ್ತು ಎಂಬ ಸುದ್ದಿಯೂ ಇತ್ತು. ಅಲ್ಲದೆ ಸಾರಾ ಅಲಿ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಶುಭ್‌ಮನ್ ಗಿಲ್ ಫಾಲೋ ಮಾಡುತ್ತಿಲ್ಲ ಎನ್ನುವ ಸುದ್ದಿ ಇದಕ್ಕೆ ಸಾಕ್ಷಿಯಂತಾಗಿತ್ತು

  • ಕ್ರಿಕೆಟಿಗ ಶುಭ್‌ಮನ್ ಗಿಲ್ ಈ ಬಾರಿಯ ಐಪಿಎಲ್ ಸೀಸನ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
  • ಇದೀಗ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ದಿಲ್‌ ಕದ್ದ ಸುಂದರಿ ಯಾರು.? ಎಂಬ ಗೊಂದಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
  • ಒಮ್ಮೆ ಸಾರಾ ತೆಂಡೂಲ್ಕರ್‌ ಹೆಸರು ಕೇಳಿ ಬಂದ್ರೆ, ಇನ್ನೋಮ್ಮೆ ನಟಿ ಸಾರಾ ಅಲಿ ಖಾನ್‌ ಹೆಸರು ಮುಂಚೂಣಿಯಲ್ಲಿರುತ್ತದೆ.
ಸ್ಪೋಟಕ ಆಟಗಾರ ಗಿಲ್‌ ದಿಲ್‌ ಗೆದ್ದ ಚೆಲುವೆ ಯಾರು..? ಕ್ಲಾರೀಟಿ ಇಲ್ಲಿದೆ 

Shubman Gill girlfriend : ಕ್ರಿಕೆಟಿಗ ಶುಭ್‌ಮನ್ ಗಿಲ್ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ಗೊಂದಲದಲ್ಲಿ ಅವರ ಅಭಿಮಾನಿಗಳಿದ್ದಾರೆ. ಒಮ್ಮೆ ಸಾರಾ ತೆಂಡೂಲ್ಕರ್‌ ಹೆಸರು ಕೇಳಿ ಬಂದ್ರೆ, ಇನ್ನೋಮ್ಮೆ ನಟಿ ಸಾರಾ ಅಲಿ ಖಾನ್‌ ಹೆಸರು ಮುಂಚೂಣಿಯಲ್ಲಿರುತ್ತದೆ. ಹಾಗಿದ್ರೆ ಈ ದಿಢೀರ್ ಗೊಂದಲಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ. 

ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್ ಈ ಬಾರಿಯ ಐಪಿಎಲ್ ಸೀಸನ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಮತ್ತೊಮ್ಮೆ ಗಿಲ್‌ ಸುದ್ದಿಯಲ್ಲಿದ್ದಾರೆ. ಅದಕ್ಕೆ ಅವರ ಪ್ರೀತಿಯ ಗಾಸಿಪ್ ಕಾರಣ. ಕೆಲ ತಿಂಗಳ ಹಿಂದಿನವರೆಗೂ ಸಾರಾ ಅಲಿ ಖಾನ್ ರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿತ್ತು. ಅದರ ನಂತರ ಸಾರಾ ತೆಂಡೂಲ್ಕರ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.

ಇದರಿಂದಾಗಿ ಯಾವ ಸಾರಾ ಯಾವ..? ಎಂಬ ಗೊಂದಲ ಗಿಲ್‌ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಹೊರತಾಗಿ ಸಾರಾ ಅಲಿ ಖಾನ್ ಮತ್ತು ಶುಭ್‌ಮನ್ ಗಿಲ್ ಪ್ರೀತಿಸುತ್ತಿದ್ದರು. ನಂತರ ಬ್ರೇಕ್‌ ಅಪ್‌ ಆಯ್ತು ಎಂಬ ಸುದ್ದಿಯೂ ಇತ್ತು. ಅಲ್ಲದೆ ಸಾರಾ ಅಲಿ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಶುಭ್‌ಮನ್ ಗಿಲ್ ಫಾಲೋ ಮಾಡುತ್ತಿಲ್ಲ ಎನ್ನುವ ಸುದ್ದಿ ಇದಕ್ಕೆ ಸಾಕ್ಷಿಯಂತಾಗಿತ್ತು.

ಈ ಮಧ್ಯೆ, ನಟಿ ಸಾರಾ ಅಲಿ ಖಾನ್ ಅವರ ಜೀವನ ಸಂಗಾತಿಯ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು, ಯಾರಾದರೂ ಕ್ರಿಕೆಟಿಗರು, ನಟ ಅಥವಾ ಉದ್ಯಮಿಯಾಗಿರಲಿ, ನನ್ನ ಮನಸ್ಸು ಮತ್ತು ಬುದ್ಧಿಗೆ ಸರಿಹೊಂದಿಕೊಂಡಿರಬೇಕು ಅಂತ ಅವರು ಹೇಳಿದರು. 

ಅಲ್ಲದೆ, ಈಗಿನ ಭಾರತೀಯ ಕ್ರಿಕೆಟ್ ತಂಡದಲ್ಲಿ ನೀವು ಇಷ್ಟ ಪಡುವ ಆಟಗಾರ ಯಾರಾದ್ರೂ ಇದ್ದಾರೆಯೇ ಎಂಬ ಪ್ರಶ್ನೆಗೆ ಸಾರಾ, ‘ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಇನ್ನೂ ನನ್ನ ಸಂಗಾತಿಯನ್ನ ನೋಡಿಲ್ಲ ಎಂದು ಸಾರಾ ಅಲಿ ಖಾನ್ ಹೇಳಿದ್ದರು. ಹೀಗಾಗಿ ಸಾರಾ ಅಲಿ ಖಾನ್ ಶುಭ್‌ಮನ್ ಗಿಲ್ ಅವರನ್ನು ಪ್ರೀತಿಸುತ್ತಿಲ್ಲ ಎಂಬುದು ಖಚಿತವಾಗಿದೆ. 

ಇದರ ಬೆನ್ನಲ್ಲೆ, ಶುಭ್‌ಮನ್ ಗಿಲ್ ಲವ್‌ ಮಾಡುತ್ತಿರುವುದು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಮಗಳು ಸಾರಾ ತೆಂಡೂಲ್ಕರ್ ಎಂದು ಗಿಲ್‌ ಅಭಿಮಾನಿಗಳು ಖಾತರಿ ಪಡಿಸಿಕೊಂಡಿದ್ದಾರೆ. ಆದರೆ ಇದು ಬರೀ ಮಾತಾಗಿದೆ, ಈ ಕುರಿತು ಸಾರಾ ಮತ್ತು ಶುಭ್‌ಮನ್ ಗಿಲ್ ಧೃಡಿಕರಣ ನೀಡಬೇಕಿದೆ.

Leave a Reply

Your email address will not be published. Required fields are marked *