ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ರವರು ನಿಧನ ಹೊಂದಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದು ಸುಳ್ಳು ಸಿದ್ದಿಯಾಗಿದ್ದು ಯಾರು ನಂಬಬಾರದೆಂದು ಕುಟುಂಬದವರು ಕೋರಿಕೊಂಡಿದ್ದಾರೆ. ಶರತ್ ಬಾಬುರವರ ಆರೋಗ್ಯದಲ್ಲಿ ಚೇತರಿಕೆ ಕಾಣುತಿದ್ಫ್ದು ಅವರು ಅಭಿಮಾನಿಗಳೊಟ್ಟಿಗೆ ಮಾತನಾಡುತ್ತಾರೆಂಬ ನಂಬಿಕೆ ಇದೆ ಎಂದು ಶರತ್ ಬಾಬು ರವರ ಸಹೋದರಿ ತಿಳಿಸಿದ್ದಾರೆ. ಕಳೆದ ವಾರ ಅನಾರೋಗ್ಯದಿಂದಾಗಿ ಶರತ್ ಬಾಬುರವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರತ್ ಬಾಬುರವರ ಅರೋಗ್ಯ ಗಂಭೀರವಾಗಿದ್ದ ಕಾರಣ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.