ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಮದುವೆಯ ಈ ವಿಡಿಯೋ ವೈರಲ್ ಆಗುತ್ತಿದೆ. ನಾನಾ ಕಾಮೆಂಟ್ ಮಾಡಲಾಗಿದೆ. ಕೆಲವರು ಈ ಹುಡುಗಿ ತನ್ನ ಗಂಡನನ್ನು ತನ್ನ ಜೀವನದುದ್ದಕ್ಕೂ ಪ್ರೀತಿ ಮತ್ತು ಜವಾಬ್ದಾರಿಯಿಂದ ನಡೆಸಿಕೊಳ್ಳುತ್ತಾಳೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವರಮಾಲೆ ಹಾಕುವ ವೇಳೆ ವರನಿಗೆ ವಧು ಮಾಡಿದ ಕೆಲಸಕ್ಕೆ ಎಲ್ಲರೂ ಮೆಚ್ಚಿಗೆ ಸೂಚಿಸಿದರು!
ಕೆಲವೊಂದು ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಟ್ರೆಂಡ್ ಸೃಷ್ಟಿಸುತ್ತವೆ (viral video). ಕೆಲವರು ಮದುವೆ (wedding) ಮೆರವಣಿಗೆಯ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಇನ್ನು ಕೆಲವರು ಮದುವೆಯ ಸಂದರ್ಭಗಳಲ್ಲಿ ವೇದಿಕೆಯಲ್ಲಿ ನಡೆಯುವ ಮೋಜಿನ ದೃಶ್ಯಗಳನ್ನು ಪೋಸ್ಟ್ ಮಾಡುತ್ತಾರೆ. ವಧು-ವರರ (bride – bridegroom) ತಮಾಷೆಯ ದೃಶ್ಯಗಳು ಮತ್ತು ಇಬ್ಬರ ನಡುವಿನ ಪ್ರಣಯ ದೃಶ್ಯಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ವಧು-ವರರ ನಡುವಿನ ಜಗಳವೂ ವೈರಲ್ ಆಗುತ್ತವೆ ಎಂಬುದು ಗಮನಾರ್ಹ. ಏನೇ ಆಗಲಿ ಜನರು ಮದುವೆ ಮನೆಯ ಯಾವುದೇ ವೀಡಿಯೊವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದೀಗ ಅಂತಹ ವಿಡಿಯೋವೊಂದು ವೈರಲ್ ಆಗಿದೆ.
ಹಿಂದೂ ಸಂಪ್ರದಾಯದಲ್ಲಿ, ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಆಚರಣೆಯು ಸಂಗಾತಿಯ ಸ್ವೀಕಾರದ ಭರವಸೆಯನ್ನು ಸಂಕೇತಿಸುತ್ತದೆ. ಇದು ತಮ್ಮ ಜೀವನದುದ್ದಕ್ಕೂ ಪರಸ್ಪರ ಗೌರವಿಸುವ ಅವರ ಪ್ರತಿಜ್ಞೆಯನ್ನು ಸಂಕೇತಿಸುತ್ತದೆ. ಈ ಸಮಾರಂಭದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಧು-ವರರು ವೇದಿಕೆಯ ಮೇಲೆ ನಿಂತು ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಾರೆ. ವಧು ಮತ್ತು ವರರು ಪರಸ್ಪರ ಮುಖಾಮುಖಿಯಾಗಿ ನಿಂತಿದ್ದಾರೆ ಮತ್ತು ಸಮಾರಂಭವು ಪ್ರಾರಂಭವಾಗುವವರೆಗೆ ಕಾಯುತ್ತಾರೆ. ಆದರೆ, ಅಷ್ಟರಲ್ಲಿ ವರನ ಮುಖಕ್ಕೆ ಏನೋ ಬಡಿಯುತ್ತದೆ. ಅದಕ್ಕೆ ಆತ ತತ್ತರಿಸುತ್ತಾನೆ.
ವರ ಮಹಾಶಯನ ಕಣ್ಣಿಗೆ ಪೆಟ್ಟು ಬಿದ್ದು ನೋವಿನಿಂದ ನರಳುತ್ತಾನೆ. ಆ ವೇಳೆ ವಧು ಯಾರಿಗೂ ಕಾಯದೆ, ಯಾವುದೇ ಮುಜುಗರಕ್ಕೂ ಒಳಗಾಗದೆ ತಕ್ಷಣವೇ ಅವನಿಗೆ ಸಹಾಯ ಮಾಡುತ್ತಾರೆ. ವರನ ಕಣ್ಣಿಗೆ ಏನೋ ಬಿದ್ದಿದ್ದನ್ನು ನೋಡಿದಳು. ಅವನ ಕಣ್ಣಿಗೆ ತೆಳ್ಳಗಿನ ಹುಳು ಬಿದ್ದಿದೆ ಎಂದು ಅರಿತ ಅವಳು ಆತನ ಮುಖವನ್ನು ಎರಡೂ ಕೈಗಳಿಂದ ಹಿಡಿದು ಅವನ ಕಣ್ಣುಗಳಿಗೆ ತನ್ನ ಬಾಯಿಂದ ಗಾಳಿ ಬೀಸಿದಳು. ಅತ್ತ ವರ ಒದ್ಲಾಡುತ್ತಿರುವಾಗ ಇತ್ತ ವಧುವಿನ ಈ ವರ್ತನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಎಲ್ಲರೂ ಅವಳನ್ನು ಹೊಗಳಿದ್ದಾರೆ. ಹುಡುಗ ಸಹ ಸಾವರಿಸಿಕೊಂಡು ಪತ್ನಿ ತನಗೆ ಸೇವೆ ಮಾಡಿದ್ದನ್ನು ಕಂಡು ಸಂತಸಗೊಂಡಿದ್ದಾನೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಮದುವೆಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು itz_prinandan_00 ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು 335 K ಕ್ಕೂ ಹೆಚ್ಚು ಜನರು ಅದನ್ನು ಇಷ್ಟಪಟ್ಟಿದ್ದಾರೆ. ವೀಡಿಯೊವನ್ನು 5.3 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ನಾನಾ ಕಾಮೆಂಟ್ ಗಳನ್ನ ಮಾಡಲಾಗಿದೆ. ಈ ಘಟನೆ ಇಬ್ಬರ ನಡುವಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಹುಡುಗಿ ತನ್ನ ಗಂಡನನ್ನು ತನ್ನ ಜೀವನದುದ್ದಕ್ಕೂ ಪ್ರೀತಿ ಮತ್ತು ಜವಾಬ್ದಾರಿಯಿಂದ ನಡೆಸಿಕೊಳ್ಳುತ್ತಾಳೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.