ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳಿಗೆ ಕೆಂದ್ರದ ಓಬಿಸಿ ಮೀಸಲಾತಿಗಾಗಿ ಆಗ್ರಹಿಸಿ ಗದಗ ತಾಲೂಕಿನ ಅಸುಂಡಿ‌ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಮೂಹಿಕ‌ ಇಷ್ಟಲಿಂಗ ಪೂಜೆ ಮಾಡೋ ಮೂಲಕ ಹೋರಾಟವನ್ನ ಮಾಡಲಾಯಿತು.

ಅಸುಂಡಿ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತೆರಳಿ ಹೋರಾಟವನ್ನ ಮಾಡಿದ್ರು. ಹೋರಾಟ ಸ್ಥಳಕ್ಕೆ ಬಂದ‌ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೆ ಲೋಕಸಭಾ ಚುನಾವಣೆ ಒಳಗೆ ಮೀಸಲಾತಿ ನೀಡಲು ಒತ್ತಾಯ ಮಾಡಿ ಮನವಿ ಅರ್ಪಣೆಯನ್ನ ಮಾಡಿದ್ರು.

ಈ ವೇಳೆ ನೂರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜಬಾಂಧವರು ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲೇ ಹೋರಾಟ ಮಾಡಿದ್ರಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ವು.

ಇದೆ ವೇಳೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಶ್ರೀಗಳು ಕಳೆದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 2D ಕೊಟ್ಟಾಗ ಸಮಾಧಾನ ಪಟ್ಟಿದ್ವಿ ಆದ್ರೆ ಅನುಷ್ಠಾನಕ್ಕೆ ಬರಲಿಲ್ಲ. ಈಗಿನ ಸರ್ಕಾರಕ್ಕೆ ನಮ್ಮ ಸಮಾಜದ ಜನ ಆಶೀರ್ವಾದ ಮಾಡಿದ್ದಾರೆ ನಮ್ಮ ಜನಗಳ ರಿಣ ಸರ್ಕಾರದ ಮೇಲಿರೋದ್ರಿಂದಾಗಿ ಮೀಸಲಾತಿ ನೀಡಲಿ. ಮೀಸಲಾತಿ ಹೋರಾಟಕ್ಕೆ ಯಾರು ಸ್ಪಂದಿಸಿದ್ದಾರೆ ಅವರನ್ನ ಜನ ಕೈ ಹಿಡಿದಿದ್ದಾರೆ, ಸ್ಪಂದಿಸದಿರೋರಿಗೆ ಜನ ಕೈ ಬಿಟ್ಟಿದ್ದಾರೆ ಅಂದ್ರು.

Leave a Reply

Your email address will not be published. Required fields are marked *