ಗೊರೆಬಾಳದಲ್ಲಿ ಒಟ್ಟು 10 ಸ್ಯಾಂಪಲ್ ಪೈಕಿ ಒಂದು ಅನ್ ಫಿಟ್ ಬಂದಿದ್ದು ಅನ್ ಫಿಟ್ ಬಂದ ಸ್ಥಳದ ಸುತ್ತ ಹೆಚ್ಚುವರಿ 21 ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅನ್ ಫಿಟ್ ಸ್ಪಾಟ್ನ 21 ಸ್ಯಾಂಪಲ್ಗಳಲ್ಲಿ ಮತ್ತೆ 3 ಅನ್ ಫಿಟ್ ರಿಪೋರ್ಟ್ ಬಂದಿದೆ.
ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರು (Polluted Water) ಕುಡಿದು ಬಾಲಕನೊಬ್ಬ ಸಾವಿಗೀಡಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ (Raichur ZP CEO) ಶಶಿಧರ್ ಕುರೇರಾ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ (Notice) ಜಾರಿ ಮಾಡಿದೆ. ಸದ್ಯ ರೇಕಲಮರಡಿ ಹಾಗೂ ಗೊರೆಬಾಳ ಗ್ರಾಮದ ಕೇಸ್ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದೆ. ಈ ಬಗ್ಗೆ ಟಿವಿ9 ಗೆ ರಾಯಚೂರು ಜಿ.ಪಂ ಸಿಇಓ ಶಶಿಧರ್ ಕುರೇರ ಮಾಹಿತಿ ನೀಡಿದ್ದು ಸಿಎಂ ಸಿದ್ದರಾಮಯ್ಯ ಸೂಚನೆ ಮರೆಗೆ ತುರ್ತುಗತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ ಹಾಗೂ ರಾಯಚೂರು ಡಿಎಚ್ಓ ಡಾ.ಸುರೇಂದ್ರ ಬಾಬುರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರತಿದಿನದ ಪಿನ್ ಟು ಪಿನ್ ಅಪ್ಡೇಟ್ ಪಡೆಯುತ್ತಿದ್ದಾರೆ. ವಿಡಿಯೋ ಕಾನ್ಫರನ್ಸ್ ಮೂಲಕ ಎರಡು ಗ್ರಾಮಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಿನ್ನೆಯಷ್ಟೇ ಎರಡು ಕಡೆಯ ವಾಟರ್ ಸ್ಯಾಂಪಲ್ ಅನ್ ಫಿಟ್ ಬಗ್ಗೆಯೂ ಚರ್ಚೆ ನಡೆದಿದೆ. ಅನ್ಫಿಟ್ ಕುರಿತು ರಿಪೋರ್ಟ್ನಲ್ಲಿರೊ ಕಂಟೆಂಟ್ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಗೊರೆಬಾಳದಲ್ಲಿ 10 ಸ್ಯಾಂಪಲ್ ಪೈಕಿ ಒಂದು ಅನ್ಫಿಟ್
ಇತ್ತ ಗೊರೆಬಾಳದಲ್ಲಿ ಒಟ್ಟು 10 ಸ್ಯಾಂಪಲ್ ಪೈಕಿ ಒಂದು ಅನ್ ಫಿಟ್ ಬಂದಿದ್ದು ಅನ್ ಫಿಟ್ ಬಂದ ಸ್ಥಳದ ಸುತ್ತ ಹೆಚ್ಚುವರಿ 21 ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅನ್ ಫಿಟ್ ಸ್ಪಾಟ್ನ 21 ಸ್ಯಾಂಪಲ್ಗಳಲ್ಲಿ ಮತ್ತೆ 3 ಅನ್ ಫಿಟ್ ರಿಪೋರ್ಟ್ ಬಂದಿದೆ. ನಿಗದಿತ ಅಂಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಇರೋದು ಪತ್ತೆಯಾಗಿದೆ. ಈ ಹಿನ್ನೆಲೆ ಡಿಟೇಲ್ ಅನಲೈಸಿಸ್ಗೆ ಜಿಲ್ಲಾಡಳಿತ ಮುಂದಾಗಿದೆ. ಬೋರ್ವೆಲ್ ಮೂಲಕ ನೀರು ಸರಬರಾಜು ಬಂದ್ ಮಾಡಿ ಟ್ಯಾಂಕರ್ ಮೂಲಕ ಗೊರೆಬಾಳ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಗೊರೆಬಾಳದಲ್ಲಿ ಒಟ್ಟು 57 ಅಸ್ವಸ್ಥ ಕೇಸ್ ದಾಖಲಾಗಿದ್ದು, ಈ ಪೈಕಿ 45 ಜನ ಡಿಸ್ಚಾರ್ಜ್ ಆಗಿದ್ದಾರೆ. ಹಾಗೂ 12 ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿಯಾಗಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಜನ ಕಾಯ್ದೆ 1974ರ ಸೆಕ್ಷನ್ 24, 25ರ ಅಡಿ ಜಲ ಮೂಲ ಕಲುಷಿತಗೊಳಿಸೋದು ಅಪರಾಧ. ಇದರ ಆಧಾರದಲ್ಲಿ ಗೊರೆಬಾಳ ಹಾಗೂ ರೇಕಲಮರಡಿಯ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಅದರ ಆಧಾರದಲ್ಲಿ ಮುಂದಿನ ಕ್ರಮ ಎಂದು ಸಿಇಓ ಶಶಿಧರ್ ಕುರೇರ ತಿಳಿಸಿದ್ದಾರೆ.
ರೇಕಲಮರಡಿ ಗ್ರಾಮದಲೂ ಒಂದು ಕಡೆ ಸ್ಯಾಂಪಲ್ ಅನ್ಫಿಟ್
ರೇಕಲಮರಡಿ ಗ್ರಾಮದಲ್ಲಿ ಮೂರು ಸ್ಯಾಂಪಲ್ ಪೈಕಿ ಒಂದು ಕಡೆ ಅನ್ಫಿಟ್ ಆಗಿದೆ. ಇಲ್ಲಿಯೂ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ರೇಕಲಮರಡಿಯಲ್ಲಿ ಒಟ್ಟು 50 ಅಸ್ವಸ್ಥ ಪ್ರಕರಣ ಬೆಳಕಿಗೆ ಬಂದಿದ್ದು ಈ ಪೈಕಿ 45 ಜನ ಡಿಸ್ಚಾರ್ಜ್ ಆಗಿದ್ದಾರೆ. ಹಾಗೂ 4 ಜನಕ್ಕೆ ಚಿಕಿತ್ಸೆ ಮುಂದುವರಿದಿದೆ.