ಟಿವಿ ಲೋಕದಲ್ಲಿ ಅಭಿಮಾನಿಗಳಿಗೆ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಚಿನ್ನು ಎಂದೇ ಫೇಮಸ್ ಆಗಿದ್ದ ಕವಿತಾ ಗೌಡ (Kavitha Gowda) ಅವರು ತಮ್ಮ ಮುದ್ದಿನ ತಂಗಿ ಮೋನಿಷಾ (Monisha Gowda) ಅವರ ಮದುವೆ ಮಾಡಿ ಮುಗಿಸಿದ್ದಾರೆ.

ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ.

ಇದೀಗ ಕವಿತಾ ಗೌಡ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮುದ್ದಿನ ತಂಗಿ ಮೋನಿಷಾ ಗೌಡ ಅವರ ಮದುವೆಯನ್ನ ಶೋಭಿತ್‌ (Shobith) ಎಂಬುವವರ ಸರಳವಾಗಿ ಬೆಂಗಳೂರಿನಲ್ಲಿ ಮಾಡಿ ಮುಗಿಸಿದ್ದಾರೆ. ನವಜೋಡಿಯ ಫೋಟೋವನ್ನ ನಟ ಚಂದನ್ ಕುಮಾರ್ ಶೇರ್ ಮಾಡಿ, ಶುಭಹಾರೈಸಿದ್ದಾರೆ.

By admin

Leave a Reply

Your email address will not be published. Required fields are marked *