ಬೆಂಗಳೂರು: ಸಿದ್ದರಾಮಯ್ಯನವರ (Siddaramaiah) ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಇದೀಗ ಅವರಿಗೆ ಸರ್ಕಾರ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.  ಕೆಲ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಿದ್ದರೆ, ಇನ್ನು ಕೆಲ ಸಚಿವರಿಗೆ ವಿಕಾಸಸೌಧಲ್ಲಿನ ಕೊಠಡಿಗಳನ್ನು ನೀಡಲಾಗಿದೆ.  ಸಿದ್ದರಾಮಯ್ಯ ಜೊತೆಗೆ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಈಗಾಗಲೇ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್​ ಜಮೀದ್ ಅಹಮದ್ ಖಾನ್ ಅವರಿಗೆ ನೀಡಲಾಗಿದ್ದು, ಇದೀಗ 2ನೇ ಹಂತದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಹಾಗಾದ್ರೆ, ಯಾರಿಗೆ ಯಾವ ಸಂಖ್ಯೆ ಕೊಠಡಿ ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

  • ಹೆಚ್.ಕೆ.ಪಾಟೀಲ್​- ವಿಧಾನಸೌಧದ 314, 314A ಕೊಠಡಿ
  • ಕೆ.ವೆಂಕಟೇಶ್​- ವಿಧಾನಸೌಧದ 329, 329A ಕೊಠಡಿ
  • ಡಾ.ಹೆಚ್.ಸಿ.ಮಹದೇವಪ್ಪ- ವಿಧಾನಸೌಧದ 330, 330A ಕೊಠಡಿ
  • ಕೆ.ಎನ್.ರಾಜಣ್ಣ- ವಿಧಾನಸೌಧದ 339, 339A ಕೊಠಡಿ
  • ಶರಣಪ್ಪ ದರ್ಶನಾಪುರ-ವಿಧಾನಸೌಧದ 328, 328A ಕೊಠಡಿ
  • ಸಂತೋಷ್​ ಲಾಡ್​- ವಿಧಾನಸೌಧದ 342, 342A ಕೊಠಡಿ
  • ಭೈರತಿ ಸುರೇಶ್-​ವಿಧಾನಸೌಧದ 316, 316A ಕೊಠಡಿ
  • ಬಿ.ನಾಗೇಂದ್ರಗ- ವಿಧಾನಸೌಧದ 343, 343A ಕೊಠಡಿ
  • ಕೃಷ್ಣ ಭೈರೇಗೌಡ- ವಿಧಾನಸೌಧದ 244, 245 ಕೊಠಡಿ
  • ಲಕ್ಷ್ಮೀ ಹೆಬ್ಬಾಳ್ಕರ್​- ವಿಧಾನಸೌಧದ 301, 301A ಕೊಠಡಿ
  • ಡಾ.ಎಂ.ಸಿ.ಸುಧಾಕರ್​- ವಿಕಾಸಸೌಧದ 344, 345 ಕೊಠಡಿ
  • ರಹೀಂ ಖಾನ್​- ವಿಕಾಸಸೌಧದ 38, 39 ಕೊಠಡಿ ಹಂಚಿಕೆ

ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 335, 336, 337 ಮತ್ತು 337 ಎ, ಸಚಿವರಾದ ಡಾ ಜಿ.ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 327 ಮತ್ತು 327 ಎ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 329 ಮತ್ತು 329 ಎ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *