ಆರೋಗ್ಯಯುತ ಜೀವನಶೈಲಿಗೆ ಯೋಗ ಮತ್ತು ನೈಸರ್ಗಿಕ ಡಯಟ್​​..

ಆರೋಗ್ಯಯುತ ಜೀವನಶೈಲಿಗೆ ಯೋಗ ಮತ್ತು ನೈಸರ್ಗಿಕ ಡಯಟ್​​..

ಯೋಗ ಮತ್ತು ನೈಸರ್ಗಿಕ ಡಯಟ್​ ಒಂದೊಕ್ಕೊಂದು ಸಂಬಂಧ ಹೊಂದಿದೆ. ಎರಡೂ ಕೂಡ ನಮ್ಮನ್ನು ಪ್ರಕೃತಿಗೆ ಹತ್ತಿರ ತರುತ್ತದೆ.

ನವದೆಹಲಿ: ಭಾರತ ಮೂಲದ ಯೋಗ ಅಭ್ಯಾಸ ಹಲವು ಪ್ರಯೋಜನ ಹೊಂದಿದ್ದು, ಜಾಗತಿಕವಾಗಿ ಮನ್ನಣೆಯನ್ನು ಪಡೆದಿದೆ. ದೈಹಿಕ ಭಂಗಿಗಳ ಹೊರತಾಗಿ ಯೋಗ ತನ್ನ ಉಸಿರಾಟದ ತಂತ್ರ, ಧ್ಯಾನ ಮತ್ತು ನೈತಿಕ ಅಂಶಗಳಿಂದ ದೈಹಿಕ ಯೋಗಕ್ಷೇಮಕ್ಕೆ ಸಮಗ್ರವಾದ ಅಭ್ಯಾಸವಾಗಿದೆ.

ಯೋಗದ ನಿರಂತರ ಅಭ್ಯಾಸದಿಂದ ನಾವು ಶಕ್ತಿಯನ್ನು ಸಂಪಾದಿಸುವ ಜೊತೆಗೆ ದೇಹದ ಸರಾಗ ಚಲನೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಬಹುದು. ಜೊತೆಗೆ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪಡೆಯಬಹುದು. ಯೋಗದ ಜೊತೆಗೆ ನೈಸರ್ಗಿಕ ಡಯಟ್​​ ಕೂಡ ಅನೇಕ ಹಾರ್ಮೋನ್​ಗ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಯೋಗ – ಡಯಟ್ ಮಹತ್ವ:​​ ಯೋಗ ಮತ್ತು ನೈಸರ್ಗಿಕ ಡಯಟ್​ ಒಂದೊಕ್ಕೊಂದು ಸಂಬಂಧವನ್ನು ಹೊಂದಿದೆ. ಎರಡೂ ಕೂಡ ನಮ್ಮನ್ನು ಪ್ರಕೃತಿಗೆ ಹತ್ತಿರ ತರಲು ಮತ್ತು ನಮ್ಮೊಳಗೆ ಮತ್ತು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಾಮರಸ್ಯ ಉತ್ತೇಜಿಸಲು ಪ್ರಯತ್ನಿಸುತ್ತವೆ. ಯೋಗವೂ ನಮ್ಮ ದೇಹವನ್ನು ದೇಹದೊಳಗಿನಿಂದ ಸಲುಹಿದರೆ, ನೈಸರ್ಗಿಕ ಆಹಾರ ಪದ್ಧತಿ ಅದಕ್ಕೆ ಅಗತ್ಯವಾದ ಪೋಷಕಾಂಶ, ಅಂಗಾಂಶಗಳ ಕಾರ್ಯಾಚರಣೆಗೆ ಬೆಂಬಲವನ್ನು ನೀಡುತ್ತದೆ.

ಆಹಾರ ಪದ್ಧತಿ: ನೈಸರ್ಗಿಕ ಆಹಾರ ಪದ್ದತಿ ಸಂಪೂರ್ಣ, ಅಸಂಸ್ಕರಿತ ಆಹಾರ ಪದ್ಧತಿಗೆ ಒತ್ತು ನೀಡುತ್ತದೆ. ಹಣ್ಣು, ತರಕಾರಿ, ಧ್ಯಾನ, ಒಣಹಣ್ಣುಗಳು, ಬೀಜಗಳನ್ನು ಹೊಂದಿದ್ದು, ಇದು ಕೃತಕ ಅಂಶಗಳನ್ನು ತಡೆಯುತ್ತದೆ. ಜೊತೆಗೆ ಅತಿ ಹೆಚ್ಚಿನ ಸಕ್ಕರೆ, ಪ್ರಿಸರ್ವೆಟಿವ್​ ಅಂಶಗಳನ್ನು ಕಡಿತ ಮಾಡುತ್ತದೆ. ಈ ಆಹಾರ ಪದ್ಧತಿಯ ಮೂಲಕ ಪ್ರಕೃತಿಯಲ್ಲಿ ಕಂಡು ಬರುವ ಪೋಷಕಾಂಶಗಳ ಸಮೃದ್ಧಿಯ ಮೇಲೆ ನಮ್ಮ ದೇಹವನ್ನು ಅಭಿವೃದ್ಧಿಪಡಿಸಲು ನಾವು ಅನುಮತಿಸುತ್ತೇವೆ.

ಈ ಆಹಾರಗಳು ಸಮೃದ್ಧವಾದ ವಿಟಮಿನ್​, ಮಿನರಲ್ಸ್​, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿದ್ದು, ಇದು ದೇಹದ ರೋಗ ನಿರೋಧಕ ವ್ಯವಸ್ಥೆಗೆ ಒತ್ತು ನೀಡುತ್ತದೆ. ಜೊತೆಗೆ ಜೀವಕೋಶ ಕಾರ್ಯಾಚರಣೆಗೆ ಉತ್ತೇಜಿಸಿ, ದೀರ್ಘಕಾಲದ ರೋಗಗಳ ವಿರುದ್ಧ ನಮ್ಮನ್ನು ರಕ್ಷಣೆ ಮಾಡುತ್ತದೆ.

ಉದಾಹರಣೆಗೆ ಬಾದಾಮಿ, ನೈಸರ್ಗಿಕವಾಗಿ ವಿಟಮಿನ್​ ಇ, ಪ್ರೊಟೀನ್​, ಮೆಗ್ನಿಶಿಯಂ, ಕ್ಯಾಲ್ಸಿಯಂ, ಫಾಸ್ಪರಸ್​, ಕಬ್ಬಿಣ ಮತ್ತು ಜಿಂಕ್​ ರೀತಿಯ 15 ಅಗತ್ಯ ಪೋಷಕಾಂಶ ಮತ್ತು ಮಿನರಲ್​ ಹೊಂದಿದೆ. ಪ್ರತಿನಿತ್ಯ ಆರೋಗ್ಯಯುತ ಮತ್ತು ಪೋಷಕಾಂಶ ಒಣಹಣ್ಣುಗಳ ಸೇವನೆಯಿಂದ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ಇದೆ ಎಂಬುದು ಸಾಬೀತಾಗಿದೆ.

ಅವರು ಹೃದಯದ ಆರೋಗ್ಯದಿಂದ ತೂಕ ಮತ್ತು ಮಧುಮೇಹ ನಿಯಂತ್ರ ದಿಂದ ಚರ್ಮದ ಆರೋಗ್ಯದವರೆಗೆ ಅನೇಕ ವಿಧದ ಆರೋಗ್ಯ ಪ್ರಯೋಜನ ಹೊಂದಿದೆ. ಬಾದಾಮಿಯ ಸಮೃದ್ಧ ಪೋಷಕಾಂಶದ ಸ್ನಾಕ್​ ಆಗಿ ಬಳಕೆ ಮಾಡುವುದರಿಂದ ಮಧುಮೇಹದಂತಹ ಸಮಸ್ಯೆಗಳನ್ನು ವಿಳಂಬಗೊಳಿಸಬಹುದು. ಬಾದಾಮಿ ಹೆಚ್ಚಿನ ಶಕ್ತಿಯನ್ನು ಹೊಂದಿದ್ದು, ಇದು ವ್ಯಾಯಾಮದ ಬಳಿಕದ ಆಯಾಸವನ್ನು ಹೊಡೆದೊಡಿಸುತ್ತದೆ. ದಿನನಿತ್ಯ ಸೇವಿಸುವುದರಿಂದ ಆಲಸ್ಯ ನಿವಾರಣೆ ಆಗುವುದರ ಜೊತೆಗೆ ಕಾಲಿನ ಆರೋಗ್ಯ ಮತ್ತು ಬೆನ್ನಿನ ಶಕ್ತಿಯನ್ನು ಪಡೆಯಬಹುದು.

ಇದಕ್ಕಿಂತ ಹೆಚ್ಚಾಗಿ, ನೈಸರ್ಗಿಕ ಆಹಾರ ಪದ್ಧತಿ ಆರೋಗ್ಯಕರ ತೂಕ ನಿರ್ವಹಣೆಗೆ ಸಹಾಯ ಮಾಡಿ, ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೇ ಚಯಾಪಚಯ ಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತದೆ. ಜೊತೆಗೆ ಇದು ಮಾನಸಿಕ ಆರೋಗ್ಯವನ್ನು ಕಾಪಾಡಿ, ದೇಹಕ್ಕೂ ಮನಸ್ಸಿನ ಸಂಪರ್ಕ ಏರ್ಪಡುವಮತೆ ಮಾಡುತ್ತದೆ. ನಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸುವ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಲು ನಮಗೆ ಅವಕಾಶ ಮಾಡಿಕೊಡುತ್ತದೆ.

ಯೋಗ ಮತ್ತು ನೈಸರ್ಗಿಕ ಡಯಟ್​ ಅನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ತಾತ್ಕಲಿಕದ ಬದಲಾಗಿ ದೀರ್ಘಕಾಲದ ಯೋಗಕ್ಷೇಮ ಅಭಿವೃದ್ಧಿಗೆ ಸಹಾಯ ಆಗುತ್ತದೆ. ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಲು ಸಮತೋಲನದ ಪತ್ತೆ ಜೊತೆಗೆ, ನಮ್ಮ ವೈಯಕ್ತಿಕ ಆದ್ಯತೆಗಳು ಮತ್ತು ವೇಳಾಪಟ್ಟಿಗಳೊಂದಿಗೆ ಹೊಂದಾಣಿಕೆ ಮಾಡುವ ದಿನಚರಿಯನ್ನು ಸ್ಥಾಪಿಸುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *