ಕಂತೆ ಕಂತೆ ನೋಟುಗಳ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಉತ್ತರ ಪ್ರದೇಶ : ಉನ್ನಾವೋ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು 500ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ರಾಶಿ ಹಾಕಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗಾ ಈ ಫೋಟೋಗಳು ಎಲ್ಲೆಡೆ  ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪೊಲೀಸ್​​ ಅಧಿಕಾರಿಯ ಮನೆಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಕಾಮೆಂಟ್​ ಮೂಲಕ ಪ್ರಶ್ನಿಸಲು ತೊಡಗಿದ್ದಾರೆ.

ಅಷ್ಟೊಂದು ನಗದು ಕಂಡು ಬಂದಿರುವುದು ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಮೇಶ್ ಚಂದ್ರ ಸಹಾನಿ ಅವರ ಮನೆಯಲ್ಲಿ ಎಂದು ತಿಳಿದುಬಂದಿದೆ. ಈ ಕುರಿತು ರಮೇಶ್ ಚಂದ್ರ ವಿರುದ್ಧ ಈಗಾಗಲೇ ತನಿಖೆ ಆರಂಭಿಸಲಾಗಿದೆ. 500 ರೂ ಮುಖ ಬೆಲೆಯ 27 ಕಂತೆಗಳು ಅಂದರೆ ಸುಮಾರು 14 ಲಕ್ಷ ರೂ ಇರುವುದು ತಿಳಿದುಬಂದಿದೆ.

Leave a Reply

Your email address will not be published. Required fields are marked *