ಕೆಎಸ್ ಈಶ್ವರಪ್ಪರ 75 ನೇ ಜನ್ಮದಿನ

ಕುಟುಂಬಸ್ಥರೆಲ್ಲರೂ ಚಾರ್ ಧಾಮ್ ಪ್ರವಾಸ ಮುಗಿಸಿ ಬಂದಿದ್ದೇವೆ. ಬಹಳ ದಿನದ ಆಸೆ. ಚುನಾವಣೆ ಮುಗಿದ ಬಳಿಕ ಕುಟುಂಬದ 18 ಜನ ಹೋಗಿ ಬಂದೆವು. ಈ ಛಾರ್ ಧಾಮ್ ಯಾತ್ರೆ ಸಮಾಧಾನ ತಂದಿದೆ ಎಂದು ಕೆಎಸ್‌ ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಮಾಜಿ ಶಾಸಕ ಕೆಎಸ್ ಈಶ್ವರಪ್ಪ (KS Eshwarappa) ಅವರು ತಮ್ಮ 75 ನೇ ಜನ್ಮದಿನವನ್ನು ಆಚರಿಸಿದರು. ಜನ್ಮದಿನದ ಹಿನ್ನೆಲೆ ಕೆ ಎಸ್ ಈಶ್ವರಪ್ಪ (KS Eshwarappa Birthday) ನಿವಾಸಕ್ಕೆ ಆಗಮಿಸಿದ ಕಾಶಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಮಾಜಿ ಸಚಿವರಿಗೆ ಆಶೀರ್ವಾದ ಮಾಡಿದರು.


ಈ ವೇಳೆ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಮಾಡಿದ ಕಾಶಿ ಶ್ರೀಗಳಿಗೆ ಈಶ್ವರಪ್ಪ ಕುಟುಂಬಸ್ಥರು ಪಾದ ಪೂಜೆ ನೆರವೇರಿಸಿದರು. ಇದಾದ ನಂತರ ಕೆಎಸ್ ಈಶ್ವರಪ್ಪ ಮನೆಗೆ ಭೇಟಿ ನೀಡಿದ ಶಾಸಕ ಬಿವೈ ವಿಜಯೇಂದ್ರ, ಮಾಜಿ ಸಚಿವರಿಗೆ ಶುಭಾಶಯ ಕೋರಿದರು. ಮತ್ತೊಂದೆಡೆ ಕೆ ಎಸ್ ಈಶ್ವರಪ್ಪಗೆ ಶುಭಾಶಯ ಹೇಳಲು ಅಭಿಮಾನಿಗಳ ದಂಡು ಕೂಡ ಮನೆಗೆ ಆಗಮಿಸಿದೆ.


ಇದನ್ನೂ ಓದಿ: Chakravarthy Sulibele ಒಬ್ಬ ಭಯೋತ್ಪಾದಕ ಅಲ್ಲ, ರಾಷ್ಟ್ರ ಭಕ್ತರ ಸಾಲಿಗೆ ಸೇರುವವರು: ಕೋಟ ಶ್ರೀನಿವಾಸ ಪೂಜಾರಿ


ಚಾರ್ ಧಾಮ್ ಪ್ರವಾಸ ಮುಗಿಸಿ ಬಂದಿದ್ದೇವೆ


ಬಳಿಕ ಮಾತನಾಡಿದ ಕೆಎಸ್‌ ಈಶ್ವರಪ್ಪ, ಎಲ್ಲಾ ಹಿತೈಷಿಗಳು ಬಂದು ಸಂತೋಷದಿಂದ ಆಶೀರ್ವಾದ ಮಾಡಿದ್ದಾರೆ. ಕಾಶಿ ಜಗದ್ಗುರುಗಳೇ ಮನೆಗೆ ಬಂದು ಆಶೀರ್ವಾದ ಮಾಡಿರುವುದು ಜೀವನದ ಭಾಗ್ಯ. ದೇಶ, ಸಮಾಜದ ಸೇವೆ ಹಾಗೂ ಧರ್ಮದ ಜಾಗೃತಿ ಮಾಡಲು ಇದರಿಂದ ಸ್ಪೂರ್ತಿ ಸಿಕ್ಕಿದೆ. ಕುಟುಂಬಸ್ಥರೆಲ್ಲರೂ ಚಾರ್ ಧಾಮ್ ಪ್ರವಾಸ ಮುಗಿಸಿ ಬಂದಿದ್ದೇವೆ. ಬಹಳ ದಿನದ ಆಸೆ. ಚುನಾವಣೆ ಮುಗಿದ ಬಳಿಕ ಕುಟುಂಬದ 18 ಜನ ಹೋಗಿ ಬಂದೆವು. ಈ ಛಾರ್ ಧಾಮ್ ಯಾತ್ರೆ ಸಮಾಧಾನ ತಂದಿದೆ. ಯಾವುದೋ ಸ್ಥಾನಮಾನ ಇಟ್ಟುಕೊಂಡೇ ದೇಶಸೇವೆ ಮಾಡಬೇಕು ಎಂದೆನಿಲ್ಲ. ಸಮಾಜಸೇವೆ ಮಾಡ್ತಾ ಹೋದರೆ ಅದೇ ದೇಶ ಸೇವೆಯಾಗುತ್ತೆ ಎಂದರು.


ಇನ್ನು, ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡ್ತೇನೆ ಎಂದ ಈಶ್ವರಪ್ಪ, ಅದು ಇದು ಅಂತಾ ಏನಿಲ್ಲ. ಜವಾಬ್ದಾರಿ ಕೊಟ್ಟರೆ ತಗೋತೀನಿ, ಇಲ್ಲವಾದ್ರೆ ಹಾಗೇ ಕೆಲಸ ಮಾಡ್ತಿನಿ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಯಕರ್ತರಲ್ಲಿ ನಾನು ಒಬ್ಬ ಅಗ್ತೇನೆ ಎಂದು ಹೇಳಿದರು.



ಇದೇ ವೇಳೆ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಕೊಡ್ತೇವೆ ಅಂದಿದ್ರು.. ಇನ್ನೂ ಸ್ವಲ್ಪ ಸಮಯ ಕೊಟ್ಟು ನೋಡೋಣ. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. ಒಂದು ರಾಜಕೀಯ ಪಕ್ಷವಾಗಿ ಆಡಳಿತ ಮಾಡೋರಿಗೆ ಸಮಯ ಕೊಟ್ಟು ಆಡಳಿತ ನೋಡ್ಬೇಕಾಗುತ್ತೆ ಎಂದರು.

Leave a Reply

Your email address will not be published. Required fields are marked *