ಶಾಲೆ-ಕಾಲೇಜುಗಳಿಂದಲೇ ಡ್ರಗ್ಸ್ ಕಂಟ್ರೋಲ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್​ಮಾಸ್ಟರ್​ ಅವರನ್ನ ನೋಡಲ್ ಆಫೀಸರ್​​ ಆಗಿ ನೇಮಿಸಲು ಮುಂದಾಗಿದ್ದಾರೆ.

ಬೆಂಗಳೂರು: ಇತ್ತೀಚಿಗೆ ಮಾದಕವಸ್ತುಗಳಿಗೆ ಶಾಲಾ-ಕಾಲೇಜುಗಳ (School-Colleges) ವಿದ್ಯಾರ್ಥಿಗಳೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ಮಾದಕ ವಸ್ತುಗಳ ಮಾರಾಟ ಜಾಲವನ್ನು ಬುಡಸಮೇತ ಕಿತ್ತೆಸೆಯಲು ಬೆಂಗಳೂರು ಪೊಲೀಸರು (Bengaluru Police) ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳ ಬಳಿ ಮಾದಕವಸ್ತು ತಡೆಗೆ ಸಮರ ಸಾರಿದ್ದಾರೆ. ಶಾಲೆ-ಕಾಲೇಜುಗಳಿಂದಲೇ ಡ್ರಗ್ಸ್ ಕಂಟ್ರೋಲ್ (Drugs Control) ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್​ಮಾಸ್ಟರ್​ ಅವರನ್ನ ನೋಡಲ್ ಆಫೀಸರ್​​ ಆಗಿ ನೇಮಿಸಲು ಮುಂದಾಗಿದ್ದಾರೆ.

ಶಾಲಾ ಅವದಿಯಲ್ಲಿ ಮತ್ತು ಬಳಿಕ ಶಾಲೆಯ ಸುತ್ತಮುತ್ತ ಅಂಗಡಿಗಳು, ಸಂದೇಹಾಸ್ಪದ ಸ್ಥಳಗಳ ಮೇಲೆ ಹಾಗೂ ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ನಿಗಾ ಇಡಬೇಕು. ವಿದ್ಯಾರ್ಥಿಗಳ ಓಡಾಟ, ಎಲ್ಲೆಲ್ಲಿ ಓಡಾಡ್ತರೆ, ಶಾಲೆಯ ಹೊರಗೆ ಯಾರನ್ನ ಭೇಟಿಯಾಗ್ತಾರೆ ಎಂಬುವುದರ ಬಗ್ಗೆ ಗಮನ ಇಡಬೇಕು. ಅನುಮಾನಸ್ಪದ ವ್ಯಕ್ತಿಗಳು ಶಾಲಾ-ಕಾಲೇಜು ಬಳಿ ಕಂಡುಬಂದರೇ ಮಾಹಿತಿ ನೀಡಬೇಕು. ಅವರು ನಿತ್ಯ ಬರುತ್ತಾರಾ? ಒಂದು ದಿನ ಮಾತ್ರ ಬಂದಿದ್ದರಾ? ವಾರಕ್ಕೆ ಎಷ್ಟು ಬಾರಿ ಬರುತ್ತಾರೆ ಅನ್ನೋದನ್ನ ಗಮನಿಸಬೇಕು ಎಂದು ಪಿಟಿ ಮಾಸ್ಟರ್ ಅಥವಾ ಹೆಡ್ ಮಾಸ್ಟರ್​​ಗಳಿಗೆ ಸೂಚಿಸಿದ್ದಾರೆ.

ಈ ಹಿಂದೆ ನಗರದ ಎಲ್ಲ ವಿಭಾಗದ ಪೊಲೀಸರು ಶಾಲಾ-ಕಾಲೇಜು ಸಮೀಪದ ಅಂಗಡಿ-ಮುಂಗಟ್ಟು ಹಾಗೂ ಎರಡು ಸಾವಿರಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು. ಈ ವೇಳೆ ಕೆಲವು ಅಂಗಡಿಗಳಲ್ಲಿ ಮಾದಕವಸ್ತು ಪತ್ತೆಯಾಗಿತ್ತು. ಈ ವೇಳೆ ೧೫೦ ಹೆಚ್ಚು ಕಡೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಸುಮಾರು ೨೫ಕ್ಕು ಹೆಚ್ಚು ಕೇಜಿ ಗಾಂಜಾ, ಎಂಡಿಎಂಎ ಸೇರಿ ಹಲವಾರು ಮಾದರಿಯ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

200ಕ್ಕೂ ಹೆಚ್ಚು ಜನ ವಶ

ನಗರ ಪೊಲೀಸರು ಡ್ರಗ್ಸ್​ ದಂಧೆ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಕಳೆದ 2-3 ದಿನಗಳಿಂದ ನಗರದ ಶಾಲಾ-ಕಾಲೇಜು, ಪಿಜಿ ಸುತ್ತಮುತ್ತ ಪ್ರದೇಶಗಳಲ್ಲಿ ದಾಳಿ ಮಾಡಿದ್ದರು. ಜೂ.02 ರಂದು ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರು ನಗರದ ಎಲ್ಲಾ ವಿಭಾಗದ ಪೊಲೀಸರು ಏಕಕಾಲಕ್ಕೆ  ನಗರದ 250ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ ಗಾಂಜಾ, ಎಂಡಿಎಂಎ ಸೇರಿದಂತೆ ಹಲವಾರು ಮಾದರಿಯ ಡ್ರಗ್ಸ್​​ಗಳನ್ನು ಜಪ್ತಿ ಮಾಡಿದ್ದರು.

Leave a Reply

Your email address will not be published. Required fields are marked *