ಬೆಂಗಳೂರು,

ಮಾನ್ಯ ಉಪ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ‌ಮಹತ್ವದ ಸಭೆ ನಡೆಸಿದ್ರು.

ಸಭೆಯಲ್ಲಿ ವಾಸ್ತವತೆಯನ್ನ ತಿಳಿಸುವ ಬದಲು ನಮ್ಮಲ್ಲಿ ಯಾವುದೇ ಹುಳುಕಿಲ್ಲ, ಕೆಲ್ಸ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗ್ತಿವೆ ಅಂತ ಮತ್ತದೆ ದಾರಿ ತಪ್ಪಿಸೋ ಕೆಲಸವನ್ನ ಅಧಿಕಾರಿಗಳು ಮಾಡಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರಾದ ಬಳಿಕ ಮೊದಲ ಬಾರಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ್ರು

ಸಭೆಯಲ್ಲಿ ಬಿಬಿಎಂಪಿ ಕಡೆಯಿಂದ ಪಾಲಿಕೆಯ ಇತಿಹಾಸ,  ಪಾಲಿಕೆಯ ಎಲ್ಲಾ ಇಲಾಖಾ ಮುಖ್ಯಸ್ಥರ ವಿವರ ಹಾಗೂ ಎಲ್ಲಾ ಇಲಾಖೆಯ ಕಾರ್ಯವೈಖರಿ ಬಗ್ಗೆ ಪರಿಚಯಿಸಿದರು. ಅದನ್ನ ಬಿಟ್ಟರೆ ಸಣ್ಣ ಮಳೆಗೆ ಕಾತಣವೇನು ಅನ್ನೋದನ್ನ ಹೇಳೋದನ್ನೇ ಮರೆತು ಬಿಟ್ರು.

ಮೊದಲೇ ಪಾಲಿಕೆ ಅಧಿಕಾರಿಗಳ ಬಗ್ಗೆ ಅರಿವಿದ್ದ ಉಪಮುಖ್ಯಮಂತ್ರಿ ಡಿಕೆಶಿ, ಇದನ್ನೆಲ್ಲಾ‌ ಬಿಡಿ ಆಸ್ತಿ ತೆರಿಗೆ ವಸೂಲಾತಿ ಚುರುಕುಗೊಳಿಸುವ ಬಗ್ಗೆ ಹಾಗೂ ಆಸ್ತಿ ತೆರಿಗೆ ಪರಿಷ್ಕರಣೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳ ವಿವರಗಳನ್ನು ಮ್ಯಾಪಿಂಗ್ ಮಾಡಲು ಪ್ರಸ್ತಾವನೆ ಸಲ್ಲಿಸಲು  ಸೂಚಿಸಿದ್ದಲ್ಲದೇ ರಸ್ತೆಯ ಜಂಕ್ಷನ್  ಹಾಗೂ ರಾಜಕಾಲುವೆ ಕಾಮಗಾರಿಯ  ಕಾಮಗಾರಿ ಪ್ರಾರಂಭದ ಮೊದಲು, ಕಾಮಗಾರಿ ಅಭಿವೃದ್ಧಿ, ಕಾಮಗಾರಿ ಸಂಪೂರ್ಣವಾಗಿ ಮುಗಿದ ಬಗ್ಗೆ ಛಾಯಾಚಿತ್ರ ಹಾಗೂ ವಿಡಿಯೋ ದಾಖಲಾತಿ ಸಮೇತ ವರದಿಯನ್ನು ಸಿದ್ದಪಡಿಸಿ ಮತ್ತು ಕಳೆದ ಐದು ವರ್ಷದಿಂದ ಪಾಲಿಕೆ ವತಿಯಿಂದ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಪೂರ್ಣ ವಿವರವನ್ನು ನೀಡಲು ಸಭೆಯಲ್ಲಿ ಹಾಜರಿದ್ದ ಪ್ರಧಾನ ಅಭಿಯಂತರರು ರವರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಣೆ ಬಗ್ಗೆ ಸ್ಥಳ ತಪಾಸಣೆ ಮಾಡುವುದಾಗಿಯೂ ಎಚ್ಚರಿಕೆ‌ ನೀಡಿದರು.

ನಂತರ ಮುಂಬರುವ ಮಳೆಗಾಲಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಕಾರ್ಯನಿರ್ವಹಿಸಲು ಎಲ್ಲಾ ಅಧಿಕಾರಿಗಳು ಸೂಚಿಸಿದಲ್ಲದೇ, ಬೆಂಗಳೂರು ವಿಶ್ವದಲ್ಲೇ ಪ್ರಸಿದ್ಧಿ ಪಡೆದ ನಗರ ಬೆಂಗಳೂರು ನಗರಕ್ಕೆ ಯಾವುದೇ ಧಕ್ಕೆ ಬರದಂತೆ ಎಲ್ಲರೂ ಒಗ್ಗಟ್ಟಾಗಿ  ಬೆಂಗಳೂರು ನಗರ ಅಭಿವೃದ್ಧಿ ಪಡಿಸಲು ಶ್ರಮಿಸಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *