ಜೂನ್ 5 ರಂದು ನಡೆದಿದ್ದ ಜೀವನ ಭೀಮಾನಗರ ಟೆಕ್ಕಿ ಆಕಾಂಕ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಪಿತ್ ಇದೀಗ ಅರೆಸ್ಟ್​ ಆಗಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮೂರು ರಾಜ್ಯಗಳನ್ನ ಸುತ್ತಿದ್ದವ ಕೊನೆಗೆ ಬೆಂಗಳೂರಿನಲ್ಲಿ ಲಾಕ್​ ಆಗಿದ್ದಾನೆ.

ಬೆಂಗಳೂರು: ಜೂನ್ 5 ರಂದು ನಡೆದಿದ್ದ ಜೀವನ ಭೀಮಾನಗರ(Jeevan Bima Nagar) ಟೆಕ್ಕಿ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಪಿತ್ ಇದೀಗ ಅರೆಸ್ಟ್(Arrest) ಆಗಿದ್ದಾನೆ. ಮೃತ ಆಕಾಂಕ್ಷ ಬೇರೆಯವರ ಜೊತೆ ಪ್ರೀತಿಯಲ್ಲಿದ್ದನ್ನ ಆರೋಪಿ ತಿಳಿದುಕೊಂಡಿದ್ದ. ಇದು ಆತನಿಗೆ ತಿಳಿದ ಮೇಲೆ, ಬ್ರೇಕ್ ಆಫ್ ಮಾಡಿಕೊಳ್ಳುವಂತೆ ಅಕಾಂಕ್ಷ ಹೇಳಿದ್ದಳು. ಆದರೂ ಆಕೆಯನ್ನ ಬಿಡದ ಆರೋಪಿ ಅರ್ಪಿತ್, ಮದುವೆಯಾಗುವಂತೆ ಒತ್ತಾಯ ಮಾಡಿದ್ದ. ಈ ವೇಳೆ ಆಕಾಂಕ್ಷ ಮದುವೆಯಾಗೊಲ್ಲ ಅಂದಿದ್ದಾಳೆ. ಇದೇ ಕಾರಣಕ್ಕೆ ಅರ್ಪಿತ್ ಉಸಿರುಗಟ್ಟಿಸಿ ಆಕಾಂಕ್ಷಳನ್ನ ಹತ್ಯೆ ಮಾಡಿದ್ದ. ಬಳಿಕ ರಾಜ್ಯ ರಾಜಧಾನಿಯಿಂದ ಹೊರಟವನು ಉತ್ತರ ಭಾರತವನ್ನ ಸೇರಿದ್ದ. ಇದೀಗ ಆತನನ್ನ ಪೊಲೀಸರು ಬಂಧಿಸಿದ್ದಾರೆ.

ಅಕೌಂಟ್ ನಲ್ಲಿ 20 ಲಕ್ಷ ಇದ್ರೂ, ಮಾಡಿದ್ದು ಮಾತ್ರ ಕೂಲಿ ಕೆಲಸ

ಇನ್ನು ಆರೋಪಿ ಅರ್ಪಿತ್ ಇಂಜಿನಿಯರಿಂಗ್​ ಓದಿದ್ದ. ಮದುವೆಗೆ ಒಪ್ಪದ ಪ್ರಿಯತಮೆಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಕೇವಲ 5 ಸಾವಿರ ನಗದು ಇಟ್ಟುಕೊಂಡು ರಾಜಧಾನಿ ಬಿಟ್ಟು ಉತ್ತರ ಭಾರತಕ್ಕೆ ತೆರಳಿದ್ದ. ಅಲ್ಲಿ ಇತ ತಲೆಮರೆಸಿಕೊಳ್ಳಲು ಕೂಲಿ ಕೆಲಸ ಮಾಡಿದ್ದ. ಹೌದು ಅಕೌಂಟ್​ನಲ್ಲಿ 20 ಲಕ್ಷ ರೂಪಾಯಿ ಇದ್ದರೂ, ಕೂಲಿ ಕೆಲಸ ಮಾಡಲು ಮುಂದಾಗಿದ್ದ.

ಮೂರು ರಾಜ್ಯ ಸುತ್ತಿದ್ದ ಅರ್ಪಿತ್

ಕೊಲೆ ಪ್ರಕರಣ ತನಿಖೆ ಆರಂಭಿಸಿದ ಜೀವನಭೀಮಾನಗರ ಪೊಲೀಸರು ಆರೋಪಿ ಹಿಂದೆ ಬಿದ್ದಿದ್ದರು. ಇತ ಬರೊಬ್ಬರಿ ಮೂರು ರಾಜ್ಯವನ್ನ ಸುತ್ತಿದ್ದ. ಇನ್ನು ಇತ ಈ ಹಿಂದೆ ಕೆಲಸ ಮಾಡುತ್ತಿದ್ದ ಹೈದ್ರಾಬಾದ್​ನಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರು, ಆ ಬಳಿಕ ತಾಯಿ ಕೆಲಸ ಮಾಡುತ್ತಿದ್ದ ದೆಹಲಿಯಲ್ಲೂ ಕೂಡ ಶೋಧ ಮಾಡಿದ್ದರು. ಕೇವಲ ಐದು ಸಾವಿರ ನಗದನ್ನು ಮಾತ್ರ ತೆಗೆದುಕೊಂಡು ರೈಲು ಹತ್ತಿದ್ದ ಅರ್ಪಿತ್. ಈ ಹಿನ್ನಲೆ ಕೂಡಲೇ ಆತನ ಎಲ್ಲಾ ಅಕೌಂಟ್​ಗಳನ್ನ ಪೊಲೀಸರು ಫ್ರೀಜ್ ಮಾಡಿದ್ದರು.

ಹಣಕ್ಕಾಗಿ ಪರದಾಡಿ ಪರದಾಡಿದ್ದ ಅರ್ಪಿತ್

ಕೇವಲ 5 ಸಾವಿರ ಹಣ ಇಟ್ಟುಕೊಂಡು ಊರು ಬಿಟ್ಟಿದ್ದ ಆರೋಪಿ. ಬಳಿಕ ಅಕೌಂಟ್​ಗಳನ್ನು ಪೊಲೀಸರು ಫ್ರೀಜ್​ ಮಾಡಿದ್ದರಿಂದ ಆತನಿಗೆ ಹಣದ ಸಮಸ್ಯೆಯಾಗಿ ತನ್ನ ಸ್ನೇಹಿತನನ್ನು ಸಂಪರ್ಕ ಮಾಡಿದ್ದ. ಬಳಿಕ ಪೊಲೀಸರು ಅತನ ಸ್ನೇಹಿತನ ಬೆನ್ನು ಬಿದ್ದಿದ್ದು, ಆತನಿಗೆ ತಿಳಿಯುತ್ತಿದ್ದಂತೆ ದೆಹಲಿಗೆ ಎಸ್ಕೇಪ್ ಆಗಿದ್ದ. ಸ್ನೇಹಿತನ ಮಾಹಿತಿ ಮೇರೆಗೆ ದೆಹಲಿಗೆ ತೆರಳಿದ್ದ ಜೀವನ್ ಭೀಮಾನಗರ ಪೊಲೀಸರು. ಅದ್ರೆ, ದೆಹಲಿ ತೆರಳುವ ಮಾರ್ಗ ಮಧ್ಯೆ ಭೂಫಾಲ್​ನಲ್ಲಿ ಇಳಿದು ಅಸ್ಸಾಂಗೆ ಹೋಗಿದ್ದ.

ಆರೋಪಿಗಾಗಿ ದೆಹಲಿ ಪೂರ್ತಿ ಹುಡುಕಾಡಿದ್ದ ಪೊಲೀಸರು

ದೆಹಲಿಗೆ ಹೋದ ಮಾಹಿತಿ ಮೇರೆಗೆ ಪೊಲೀಸರು ಇಡೀ ದೆಹಲಿಯನ್ನ ಹುಡುಕಾಟ ನಡೆಸಿದ್ದರು. ಆದರೆ, ಇತ ಅಸ್ಸಾಂನಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರತಿದಿನಾ 150 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದ. ಇನ್ನು ಇತ ಅಸ್ಸಾಂನಲ್ಲಿರೋ ಬಗ್ಗೆ ಮಾಹಿತಿ ಪಡೆದು, ಮತ್ತೆ ಅಲ್ಲಿಗೆ ಪೊಲೀಸರು ತಲುಪುವುದರೊಳಗೆ ವಿಜಯವಾಡಕ್ಕೆ ಬಂದು ಮತ್ತೆ ಬೆಂಗಳೂರಿಗೆ ಬಂದಿದ್ದ. ಬಳಿಕ ವೈಟ್ ಫೀಲ್ಡ್​ನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಪೊಲೀಸರಿಗೆ ಲಾಕ್ ಆಗಿದ್ದ. ಇದೀಗ ಜೆ.ಬಿ ನಗರ ಪೊಲೀಸರು ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *