ಕಾಂಗ್ರೆಸ್​ನ ಐದು ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ನೀಡುವ ವಿಚಾರವಾಗಿ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಸರ್ಕಾರಕ್ಕೆ ಕೆಲ ಸಲಹೆ ನೀಡಿದ್ದಾರೆ.

ಚಿತ್ರದುರ್ಗ: ಚುನಾವಣೆಯಲ್ಲಿ ಕಾಂಗ್ರೆಸ್​ ನೀಡಿರುವ ಐದು ಗ್ಯಾರಂಟಿಗಳ (Congress guarantees)ಬಗ್ಗೆ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕೊಟ್ಟ ಮಾತಿನಿಂತೆ ಈ ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಇನ್ನು ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ನೀಡುವ ಬಗ್ಗೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ(Taralabalu Shivamurthy Shivacharya Swamiji) ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಸಿರಿಗೆರೆ ತರಳಬಾಳು ಮಠಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ ವೇಳೆ ಸಲಹೆ ನೀಡಿರುವ ಸ್ವಾಮೀಜಿ, ನಿರುದ್ಯೋಗ ಭತ್ಯೆಯನ್ನು ನೀಡಿ ಯುವಕರಿಂದ ಕೆಲಸ ಮಾಡಿಸಿ. ಟ್ಯಾಕ್ಸ್ ಪೇಯರ್ ಮನಿ ಸದ್ಬಳಕೆ ಆಗಲಿ ಎಂದು ಸಲಹೆ ನೀಡಿದ್ದಾರೆ.

ನಿರುದ್ಯೋಗಿ ಯುವಕರಿಗೆ 3000 ಹಣ ನೀಡಿ, ಆದ್ರೆ ಅವರಿಂದ ಸರಕಾರ ಕೆಲಸ ಪಡೆಯುವಂತಾಗಬೇಕು. ಇದರಿಂದ ಯುವಕರು ಕೆಲಸ ಮಾಡುವಂತಾಗಬೇಕು. ಸರಕಾರದ ಈ ಗ್ಯಾರಂಟಿಗಳ ಈಡೇರಿಕೆಗೆ 56 ಸಾವಿರ ಕೋಟಿ ಹಣ ಬೇಕಾಗುತ್ತದೆ. ಹಾಗಾಗಿ ಯುವಕರಿಗೆ ಏನಾದ್ರೂ ಕೆಲಸ ಅಸೈನ್ ಮಾಡಿ . ಗ್ರಾಮ ಹಾಗೂ ಪಟ್ಟಣ ಮಟ್ಟದಲ್ಲಿ ಯುವಕರಿಗೆ ಉದ್ಯೋಗ ನೀಡಿ ಎಂದು ನೂತನ ಸಚಿವ ಸಚಿವ ಈಶ್ವರ ಖಂಡ್ರೆಗೆ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಇನ್ನು ಇದಕ್ಕೆ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ, ಚುನಾವಣೆ ಪೂರ್ವ ತರಾತುರಿಯಲ್ಲಿ ಗ್ಯಾರಂಟಿ ಘೋಷಣೆ ಆಗಿದೆ. ಗ್ಯಾರಂಟಿ ಅನುಷ್ಠಾನ ವೇಳೆ ಎಲ್ಲಾ ಅಂಶಗಳ ಚಿಂತನೆ ನಡೆಸುತ್ತೇವೆ. ಸುಮಾರು 50-55 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ನಿಮ್ಮ ಸಲಹೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆಂದ ಎಂದರು.

Leave a Reply

Your email address will not be published. Required fields are marked *