Adipurush Movie: ಹಿಂದಿ ಚಿತ್ರರಂಗದ ಹೀರೋಗಳು ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆದ ಉದಾಹರಣೆ ಸಾಕಷ್ಟಿದೆ. ಈಗ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿ ಮಿಂಚುತ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಆದಿಪುರುಷ್’ ಸಿನಿಮಾದಲ್ಲಿ ಮಾಡಿರುವ ರಾವಣನ ಪಾತ್ರ ಗಮನ ಸೆಳೆಯುತ್ತಿದೆ. ಬಾಲಿವುಡ್ ನಟರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರ ಮಾಡಿ ಫೇಮಸ್ ಆದ ಉದಾಹರಣೆ ತುಂಬಾ ಇದೆ. ಈಗ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರದಿಂದ ಮೆಚ್ಚುಗೆ ಗಳಿಸಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಅವರ ಎದುರು ಪ್ರಭಾಸ್ ಅವರು ಲಂಕೇಶ್ವರನಾಗಿ ಅಬ್ಬರಿಸಿದ್ದಾರೆ. ಇಬ್ಬರ ನಡುವಿನ ಯುದ್ಧದ ದೃಶ್ಯಗಳು ಅದ್ದೂರಿಯಾಗಿವೆ. ರಾವಣನ ಪಾತ್ರವನ್ನು ಓಂ ರಾವತ್ ಅವರು ವಿಶೇಷ ರೀತಿಯಲ್ಲಿ ತೋರಿಸಿದ್ದಾರೆ. ಭಿನ್ನವಾದ ಮ್ಯಾನರಿಸಂ ಮೂಲಕ ಸೈಫ್ ಅಲಿ ಖಾನ್ ಅವರು ಆ ಪಾತ್ರವನ್ನು ನಿಭಾಯಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ. ಈ ಪಾತ್ರ ಹೈಲೈಟ್ ಆಗಿರುವುದರಿಂದ ಮುಂದಿನ ಸಿನಿಮಾಗಳಲ್ಲಿ ಸೈಫ್ ಅಲಿ ಖಾನ್ ಅವರಿಗೆ ನೆಗೆಟಿವ್ ಪಾತ್ರಗಳ ಆಫರ್ ಹೆಚ್ಚುವ ಸಾಧ್ಯತೆ ಇದೆ. ದಕ್ಷಿಣದಲ್ಲಿ ಅವರು ಸೆಕೆಂಡ್ ಇನ್ನಿಂಗ್ಸ್ ಶುರುಮಾಡುವ ಲಕ್ಷಣ ಕಾಣಿಸಿದೆ. Post Views: 57 Post navigation Health Tips: ಆವಕಾಡೊದ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ 5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ