ಕೊಪ್ಪಳ ತಾಲೂಕಿನ ಮಂಗಳಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಡಿವೈಡರ್​ಗೆ ಮಿನಿ ಲಾರಿ ಡಿಕ್ಕಿಯಾಗಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳಾದ ರೇಣುಕಮ್ಮ(50), ಪ್ರಭು(25) ಮೃತರು.

ಕೊಪ್ಪಳ: ತಾಲೂಕಿನ ಮಂಗಳಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಡಿವೈಡರ್​ಗೆ ಮಿನಿ ಲಾರಿ ಡಿಕ್ಕಿಯಾಗಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಕೊಪ್ಪಳ(Koppala)ದ ತೆಗ್ಗಿನಕೇರಿ ನಿವಾಸಿಗಳಾದ ರೇಣುಕಮ್ಮ(50), ಪ್ರಭು(25) ಮೃತರು. ಇನ್ನುಳಿದ 6 ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *