ಚಿಕ್ಕಬಳ್ಳಾಪುರ: ರೈತರ ಪಂಪ್ ಸೆಟ್ ಗಳೀಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಬೇಕು ಅಂತ ಸರ್ಕಾರ ಆದೇಶದಿದ್ದ ರೊಚ್ಚಿಗೆಡ್ಡ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.. ಚಿಕ್ಕಬಳ್ಳಾಪುರ ನಗರದ ಬಿಬಿ ಎಸ್ತೆಯ ಬೆಸ್ಕಾಂ ವಿಭಾಗೀಯ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು..
ರೈತರ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಜೋಡಣೆಯಿಂದ ರೈತರಿಗೆ ತೊಂದರೆಯಾಗುವ ಸಾಧ್ಯತೆಯಿರೋದ್ರಿಂದ, ಈ ನಿರ್ದಾರವನ್ನ ಕೂಡಲೇ ಕೈಬಿಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ರು..
ಇಷ್ಟೇ ಅಲ್ಲದೆ ಬೆಸ್ಕಾಂ ನ್ನ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ, ಖಾಸಗೀಕರಣವಾದ್ರೆ ರೈತರಿಗೆ ಉಳಿಗಾಲವಿಲ್ಲ, ಅಂತಹ ಪ್ರಯತ್ನ ಸರ್ಕಾರ ಮಾಡಬಾರದು ಎಂದು ಕರ್ನಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಭಕ್ತರಹಳ್ಳಿ ಬೈರೈಗೌಡ ಆಗ್ರಹಿಸಿದ್ರು.. ಈ ವೇಳೆ ಪ್ರತಿಭಟನಾ ನಿರತ ಬೆಸ್ಕಾಂ ಕಚೆರಿ ಆವರಣದಲ್ಲಿ ಅಡುಗೆ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದ್ರು..