ತಿರುವನಂತಪುರಂ: ವಿಶ್ವದಲ್ಲೇ ಅಪರೂಪದ ಕಾಯಿಲೆ ಇದೀಗ ರಾಜ್ಯವನ್ನೇ ಚಿಂತೆಗೀಡು ಮಾಡಿದೆ. ಕಳೆದ ಮೂರು ತಿಂಗಳಲ್ಲಿ ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ತ್ರಿಶೂರ್ನಲ್ಲಿ ವರದಿಯಾಗಿರುವ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಕಾಯಿಲೆ ಇತ್ತೀಚೆಗೆ ತಿರುವನಂತಪುರಂನಲ್ಲಿ ಯುವಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಎರಡು ತಿಂಗಳಲ್ಲಿ ಕೋಝಿಕ್ಕೋಡ್ ಆಸ್ಪತ್ರೆಗಳಲ್ಲಿ ಮೂರು ಮಕ್ಕಳು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವಿವಿಧೆಡೆ ಸಾರ್ವಜನಿಕ ಕೊಳಗಳಲ್ಲಿ ಸ್ನಾನ ಮಾಡಿದ ಮೂವರೂ ಮಕ್ಕಳಿಗೆ ಸೋಂಕು ತಗುಲಿರುವುದು ದೃಢವಾಗಿದ್ದು ಇದು ಎಲ್ಲರಲ್ಲೂ ಆತಂಕಕಾರಿಯಾಗಿದೆ. ಇಬ್ಬರು ಮಕ್ಕಳು ಗುಣಮುಖರಾಗಿರುವುದು ಕೂಡ ಸಮಾಧಾನ ತಂದಿದೆ.
ಜಾಗತಿಕವಾಗಿ ಸಾವಿನ ಪ್ರಮಾಣ ಶೇ.97ರಷ್ಟಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ನಿನ್ನೆ ಕೂಡ ತಿರುವನಂತಪುರಂನಲ್ಲಿ ಒಬ್ಬರಿಗೆ ರೋಗ ಪತ್ತೆಯಾಗಿದೆ. ಪೇರೂರ್ಕಡ ನಿವಾಸಿಯೊಬ್ಬರಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ದೃಢಪಟ್ಟಿದೆ. ಇದರೊಂದಿಗೆ ತಿರುವನಂತಪುರಂನಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಸದ್ಯ 39 ಮಂದಿ ICU ನಲ್ಲಿದ್ದಾರೆ. ಕಾಯಿಲೆಗೆ ಮೂಲ ಕಾರಣ ಎಂದು ಶಂಕಿಸಲಾಗಿದ್ದು, ಕವಿಂ ಕೊಳದಲ್ಲಿ ಸ್ನಾನ ಮಾಡಿದ ಇನ್ನಷ್ಟು ಮಂದಿಗೆ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಕೇರಳದಲ್ಲಿ ಈ ರೋಗ ಏಕೆ ಹರಡುತ್ತಿದೆ ಎಂಬುದರ ಕುರಿತು ಅಧ್ಯಯನ ಮತ್ತು ಸಂಶೋಧನೆ ತುರ್ತಾಗಿ ನಡೆಯಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.