ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಈ ಹಿಂದೆ ಕಾಂಗ್ರೆಸ್ ಹೇಳಿತ್ತು. ಈ ಬಗ್ಗೆ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದು 40% ಕಮಿಷನ್​ ಆರೋಪದ ತನಿಖೆಯನ್ನು ಸ್ವಾಗತ ಮಾಡ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೇ ತನಿಖೆಯನ್ನು ಆರಂಭಿಸಿ ಎಂದರು.

40% ಕಮಿಷನ್​ ಆರೋಪದ ತನಿಖೆಯನ್ನು ಸ್ವಾಗತಿಸ್ತೇನೆ, ನಾವು ಯಾರಿಗೂ ತಾರತಮ್ಯ ಮಾಡಿಲ್ಲ -ಶ್ರೀನಿವಾಸ್ ಪೂಜಾರಿ

ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ನೂತನ ಸಚಿವ ಎಂಬಿ ಪಾಟೀಲ್(MB Patil) ಈ ಹಿಂದೆ ಹೇಳಿದ್ದರು. ಈಗ ಕಾಂಗ್ರೆಸ್(Congress) ಸರ್ಕಾರ ಬಂದಿದೆ. ಬಿಜೆಪಿ ಸರ್ಕಾರದ ಮೇಲಿನ ಶೇ.40ರಷ್ಟು ಕಮಿಷನ್ ಆರೋಪವನ್ನು ಕಾಂಗ್ರೆಸ್ ಸರ್ಕಾರ ದಾಖಲೆ ಸಹಿತ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌(Basavaraj Bommai) ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ್ದರು. ಸದ್ಯ ಈ ಬಗ್ಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ(Kota Srinivas Poojary) ಕೂಡ ಕಿಡಿ ಕಾರಿದ್ದಾರೆ.

40% ಕಮಿಷನ್​ ಆರೋಪದ ತನಿಖೆಯನ್ನು ಸ್ವಾಗತ ಮಾಡ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೇ ತನಿಖೆಯನ್ನು ಆರಂಭಿಸಿ. ಚಾಣಕ್ಯ ವಿವಿಗೆ ನೀಡಿದ್ದ ಭೂಮಿ ಯಾಕೆ ವಾಪಸ್ ಪಡೆಯಬೇಕು? ನಾವು ಯಾರಿಗೂ ತಾರತಮ್ಯ ಮಾಡಿಲ್ಲ. ಉಗ್ರರಿಗೆ ಸಪೋರ್ಟ್ ಮಾಡುವವರನ್ನು ವಿರೋಧ ಮಾಡುತ್ತೇವೆ. ಹಜ್ ಭವನ ನಿರ್ಮಾಣಕ್ಕೆ ಹಣ ಕೊಡ್ತೇವೆ ಅನ್ನೋದು ಎಷ್ಟುಸರಿ? ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು

ಇನ್ನು ಚಕ್ರವರ್ತಿ ಸೂಲಿಬೆಲೆ ಪಿಹೆಚ್​ಡಿ ಮಾಡಿದ್ದಾರಾ ಎಂಬ ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ಕೊಟ್ಟಿದ್ದಾರೆ. ನೀವು ಏನು ಓದಿದ್ದೀರಿ ಹೇಳಿ, ನೀವು ಪಿಹೆಚ್​​​ಡಿ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಆರ್​ಎಸ್​​ಎಸ್ ಅಂಗ ಸಂಸ್ಥೆಗಳಿಗೆ ನೀಡಿದ್ದ ಭೂಮಿ ವಾಪಸ್ ವಿಚಾರ ಸಂಬಂಧ ಆರ್​ಎಸ್​​ಎಸ್​ ಸಂಘಟನೆ ಹತ್ತಿಕ್ಕುವ ಪ್ರಯತ್ನ ನಿನ್ನೆ ಮೊನ್ನೆಯದಲ್ಲ. ಕಾಂಗ್ರೆಸ್​​ನವರು ತಮ್ಮ ಪ್ರಯತ್ನ ಮುಂದುವರಿಸಲಿ. ಆರ್​ಎಸ್​ಎಸ್​ ಸಂಘಟನೆಯನ್ನು ಕಾಂಗ್ರೆಸ್ ಏನೂ ಮಾಡಲು ಆಗಲ್ಲ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *