ಬೆಂಗಳೂರು: ಬಿಬಿಎಂಪಿ ಮಹಿಳಾ ಅಧಿಕಾರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಡುಹಗಲೇ ಕಚೇರಿಗೆ ನುಗ್ಗಿ ಬಾಗಿಲು ಹಾಕಿ ಮಹಿಳಾ ಅಧಿಕಾರಿಗೆ ದಿಗ್ಭಂದನ ಹಾಕಿರುವ ಘಟನೆ ನಡೆದಿದೆ.
ಪಶ್ಚಿಮ ವಲಯದ ಟೌನ್ ಪ್ಲ್ಯಾನಿಂಗ್ ಕಚೇರಿಗೆ ಅರುಣ್‌ಕುಮಾರ್ ಎಂಬಾತನು ಬಂದಿದ್ದು, ಟೌನ್ ಪ್ಲ್ಯಾನಿಂಗ್ ಎಡಿಟಿಪಿ ಮೋನಿಕಾರವರ ಕಚೇರಿಯ ಬಾಗಿಲು ಹಾಕಿ ದಿಗ್ಬಂಧನ ಮಾಡಿದ್ದಲ್ಲದೆ, ಅವಾಜ್ ಹಾಕಿದ್ದಾನೆ. ಮತ್ತೊಬ್ಬನಿಂದ ಮೊಬೈಲ್ ಚಿತ್ರೀಕರಣ ಮಾಡಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಕೂಡಲೇ ಅರುಣ್ಕುಮಾರ್ನನ್ನು ಬಂಧಿಸಿದ್ದು, ಮತ್ತೋರ್ವ ನಾಪತ್ತೆಯಾಗಿದ್ದಾನೆ.