ಚಲಿಸುತ್ತಿದ್ದ ಬೈಕ್​ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ತಲೆ ಬುರುಡೆ ಒಪನ್ ಆಗಿ, ಗಂಭೀರ ಗಾಯದಿಂದ ಸಾವು ಬದುಕಿನ ನಡುವೆ‌ ಹೋರಾಟ ನಡೆಸುತ್ತಿದ್ದ ಮಹಿಳೆಗೆ, ವೈದ್ಯರೊಬ್ಬರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ, ಜೀವ ಉಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ: ಇಂದು(ಜು.1) ರಾಷ್ಟ್ರೀಯ ವೈದ್ಯರ ದಿನ. ಯಾರಿಗೆ ಎಂತಹುದೇ ಆರೋಗ್ಯ ಸಮಸ್ಯೆಯಾದರೇ ಮೊದಲು ಹೋಗುವುದು ಡಾಕ್ಟರ್(Doct0r)​ ಬಳಿಗೆ, ನಂತರ ದೇವರ ಬಳಿ ಹೋಗಿ ಪ್ರಾರ್ಥಿಸುತ್ತೇವೆ. ಹೌದು ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಇಲ್ಲೊಬ್ಬ ವೈದ್ಯರು ಅರ್ಥ ಕಲ್ಪಿಸಿದ್ದಾರೆ. ಚಲಿಸುತ್ತಿದ್ದ ಬೈಕ್​ಗೆ ಹಿಂದಿನಿಂದ ಯಾದ ಕಾರಣ ತಲೆ ಬುರುಡೆ ಒಪನ್ ಆಗಿ, ಗಂಭೀರ ಗಾಯದಿಂದ ಸಾವು ಬದುಕಿನ ನಡುವೆ‌ ಹೋರಾಟ ನಡೆಸುತ್ತಿದ್ದ ಮಹಿಳೆಗೆ ವೈದ್ಯರೊಬ್ಬರ ತಂಡ ಆಸರೆಯಾಗುವ ಮೂಲಕ ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಅರ್ಥ ಕಲ್ಪಿಸಿದ್ದಾರೆ.

ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದ ಪ್ರಿಯಾ ಎಂಬುವವರು ಗ್ರಾಮದಿಂದ ಟಿವಿಎಸ್ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ, ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಸ್ಕೇಪ್ ಆಗಿತ್ತು. ಹೀಗಾಗಿ ಅಪಘಾತದ ರಬಸಕ್ಕೆ ಬೈಕ್ ಸಮೇತ ಚರಂಡಿಗೆ ಬಿದ್ದಿದ್ದ ಮಹಿಳೆ ಪ್ರಿಯಾಳ ತಲೆಗೆ ಗಂಭೀರ ಗಾಯವಾಗಿ ಮೆದುಳು ಒಪನ್ ಆಗಿ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ರು. ಹೀಗೆ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಮಹಿಳೆಯನ್ನ ಆಕೆಯ ಪತಿ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲು ಹೇಳಿ ಹಣವಿಲ್ಲವೆಂದು ವೈದ್ಯರ ಬಳಿ ಮನವಿ ಮಾಡಿದ್ದಾರೆ.

ಚಿಕಿತ್ಸೆಗೆ ಹಣವಿಲ್ಲವೆಂದ ಗಂಡ; ಮಾನವೀಯತೆ ತೋರಿದ ವೈದ್ಯರ ತಂಡ

ಮಹಿಳೆಯ ಪರಿಸ್ಥಿತಿ ಕಂಡ ವೈದ್ಯ ಸುಪ್ರಿತ್ ನೇತೃತ್ವದ ತಂಡ ಮಾನವೀಯತೆ ಆಧಾರದ ಮೇಲೆ ಹಣವಿಲ್ಲದಿದ್ರು, 24 ಗಂಟೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಇದೀಗ ಒಂದು ವಾರದಿಂದ ಆಸ್ವತ್ರೆಯಲ್ಲೆ ಮಹಿಳೆಯ ಹಾರೈಕೆ ಮಾಡಿದ ವೈದ್ಯರು ಪ್ರಾಣಾಪಾಯದಿಂದ ಆಕೆಯನ್ನ ಪಾರು ಮಾಡಿದ್ದು, ಇದೀಗ ಚೇತರಿಕೆ ಕಾಣುತ್ತಿದ್ದಾರೆ.

ಮಹಿಳೆ ಉಳಿಯುವುದಿಲ್ಲವೆಂದುಕೊಂಡಿದ್ದ ಕುಟುಂಬಸ್ಥರು

ಇನ್ನು ಪ್ರಿಯಾಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು. ಆಕೆಯ ಕುಟುಂಬಸ್ಥರು ಹೈನುಗಾರಿಕೆ ಹಾಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಅಪಘಾತದ ನಂತರ ಮಹಿಳೆಯ ಸ್ಥಿತಿ ಕಂಡು ಉಳಿಯುವುದಿಲ್ಲ ಅಂದುಕೊಂಡಿದ್ರಂತೆ. ಆದ್ರೆ, 24 ಗಂಟೆಯ ನಿರಂತರ ಶ್ರಮದಿಂದ ವೈದ್ಯರು ಆಕೆಯ ಜೀವ ಉಳಿಸಿದ್ದು, ಇದೀಗ ಚೇತರಿಕೆ ಕಂಡ ಪ್ರಿಯಾಳನ್ನ ಕಂಡು ಕುಟುಂಬಸ್ಥರು ಭಾವುಕರಾಗಿದ್ದಾರೆ. ಮೆದುಳಿನ ಈ ಶಸ್ತ್ರ ಚಿಕಿತ್ಸೆಗೆ ಹೊರಗಿ‌ನ‌ ಇತರೆ ಆಸ್ವತ್ರೆಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣ ಖರ್ಚಾಗಲಿದ್ದು, ಮಹಿಳೆಯ ಕುಟುಂಬಸ್ಥರ ಸ್ಥಿತಿ ಕಂಡ ವೈದ್ಯರು ಆಕೆಯ ಶಸ್ತ್ರ ಚಿಕಿತ್ಸೆಯ ಅಲ್ಪ ವೆಚ್ಚವನ್ನ ಮಾತ್ರ, ಅಲ್ಪ ಅಲ್ಪವಾಗಿ ನೀಡಲು ಅವಕಾಶ ನೀಡಿದ್ದಾರೆ.

ಈ ಮೂಲಕ ವೈದ್ಯರು ದೇವರೆಂದು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಸಾಕಷ್ಟು ಜನ ವೈದ್ಯರ ನಡುವೆ ಹಣವಿಲ್ಲದಿದ್ರು ಕೂಡಲೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಸಿಲಿಕಾನ್ ಸಿಟಿ ಆಸ್ವತ್ರೆ ವೈದ್ಯರು ಮಾನವೀಯತೆ ಮೆರೆದು, ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

Latest News